Monday, 17 May 2010

Lepakshi



ಲೇಪಾಕ್ಷಿಯ ಸುಂದರ ದೇವಾಲಯವಿರುವುದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ಎಂಬ ಹಳ್ಳಿಯಲ್ಲಿ. ಬೆಂಗಳೂರಿನಿಂದ ಸುಮಾರು 120 Km. ದೂರದಲ್ಲಿದೆ. ಇಲ್ಲಿಗೆ ಬರಲು ಎರಡು ದಾರಿಗಳಿವೆ. ಬೆಂಗಳೂರಿನಿಂದ ಹಿಂದೂಪುರಕ್ಕೆ ಬಂದು ಬಲಕ್ಕೆ 15 Km. ಅಥವಾ ಬೆಂಗಳೂರು-ಹೈದರಾಬಾದ್ ಹೈವೆ (NH-7) ನಲ್ಲಿ ಕೊಡಿಕೊಂಡ ಚಕ್ ಪೋಸ್ಟ್ ನಿಂದ ಎಡಕ್ಕೆ ಸುಮಾರು 12 Km. ಕ್ರಮಿಸಿದರೆ ಲೇಪಾಕ್ಷಿ ತಲುಪಬಹುದು.

ದೇವಾಲಯದ ಮುಂದುಗಡೆ ವಾಹನ ನಿಲ್ಲಿಸಿ ಮುಂದೆ ನಡೆದಾಗ ಮೆಟ್ಟಲುಗಳು ಸಿಗುತ್ತವೆ ಮತ್ತು ಎದುರುಗಡೆ ಸುಂದರ ಉದ್ಯಾನ ಸ್ವಾಗತ ಬಯಸುತ್ತದೆ.

ಅಲ್ಲೇ ಕೈ ಕಾಲು ತೊಳೆದುಕೊಂಡು ಆಯಾಸ ಪರಿಹಾರ ಮಾಡಿಕೊಂಡು ಮುಂದೆ ಮುಖ್ಯಗೋಪುರವನ್ನು ಪ್ರವೇಶಿಸಿದರೆ ಲೇಪಾಕ್ಷಿಯ ಹೊರ ಆವರಣವನ್ನು ಸೇರುತ್ತೇವೆ.

ಇಲ್ಲಿ ಉತ್ಸವ ಸಮಯದಲ್ಲಿ ಜನರಿಗೆ ಕುಳಿತುಕೊಳ್ಳಲು, ವಿಶ್ರಮಿಸಲು ನಾಲ್ಕು ಸುತ್ತಲೂ ಕೆತ್ತನೆ ಸ್ಥಂಭಗಳಿಂದ ಕೂಡಿದ ಪೌಳಿ ಗಳಿವೆ.



ಈ ಆವರಣವನ್ನು ದಾಟಿ ಮುಂದೆ ಹೋದಾಗ ನಮಗೆ ಮುಖ್ಯ ಮಂಟಪ ಎದುರಾಗುತ್ತದೆ. ಇದರಲ್ಲಿ ಬಹಳ ಸುಂದರವಾದ ಕೆತ್ತನೆಗಳುಳ್ಳ ಶಿಲಾಸ್ಥಂಭ ಗಳಿವೆ.ಒಂದೊಂದು ಸ್ಥಂಭವೂ ವಿಭಿನ್ನವಾಗಿದ್ದು ಎಲ್ಲದರಲ್ಲೂ ಶಿವನ ನಾನಾ ರೂಪಗಳನ್ನು ಕೆತ್ತಲಾಗಿದೆ. ಒಂದು ಸ್ಥಂಭವಂತೂ ತೂಗಾಡುತ್ತಿದೆಯೇನೋ ಎಂಬಂತೆ ಕಾಣುತ್ತದೆ. ಅದರ ಅಡಿ ಭಾಗವು ನೆಲಕ್ಕೆ ತಗಲಿದೆ-ಇಲ್ಲ, ಎಂಬಂತಿದೆ. ಈ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಇಲ್ಲಿಂದ ಪ್ರದಕ್ಷಿಣಾ ಪಥದಲ್ಲಿ ಬಂದರೆ ಮುಖ್ಯ ದೇವಾಲಯಕ್ಕೆ ತಾಗಿಕೊಂಡು ಒಂದು ಹೆಬ್ಬಂಡೆ ಇದೆ. ಅದರ ಮುಂಭಾಗದಲ್ಲಿ ಒಂದು ಗುಡಿ.



ಲೇಪಾಕ್ಷಿ ದೇವಾಲಯವನ್ನು ಕೂರ್ಮಾಕೃತಿಯ ಬಂಡೆಯ ಮೇಲೆ ಕಟ್ಟಿದ್ದಾರೆ. ಇಲ್ಲಿನ ಇತಿಹಾಸದ ಪ್ರಕಾರ ಲೇಪಾಕ್ಷಿಯನ್ನು 16 ನೆ ಶತಮಾನದಲ್ಲಿ ವಿಜಯನಗರ ಅರಸರ ಬೊಕ್ಕಸದ ಖಜಾಂಜಿಯಾಗಿದ್ದ ವಿರುಪಣ್ಣ ಎಂಬಾತನು ಕಟ್ಟಿಸಿದ್ದನು. ವಿಜಯನಗರ ಅರಸರು ಶತ್ರುಗಳ ಮೇಲೆ ದಂಡೆತ್ತಿ ಹೋಗಿರುವ ಸಮಯದಲ್ಲಿ ವಿರುಪಣ್ಣನು ಬೊಕ್ಕಸದ ಹಣವನ್ನು ವ್ಯಯಿಸಿ ದೇವಾಲಯವನ್ನು ಕಟ್ಟಿಸಿದ್ದನಂತೆ. ಇದರಿಂದ ಬೊಕ್ಕಸವು ಖಾಲಿ ಆಯಿತೆಂದು ಕುಪಿತರಾದ ಅರಸರು ಆತನ ಕಣ್ಣುಗಳನ್ನು ಕೀಳಿಸಲು ಆಜ್ಞಾಪಿಸಿದರಂತೆ, ಇದನ್ನು ತಿಳಿದ ವಿರುಪಣ್ಣನು ತಾನೇ ಸ್ವತಹ ತನ್ನಹಣೆಯನ್ನು ದೇವಾಲಯದ ಗೋಡೆಗೆ ಘಟ್ಟಿಸಿಕೊಂಡು ತನ್ನ ಕಣ್ಣುಗಳನ್ನು ಕಳೆದುಕೊಂಡನೆಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಆತನು ತನ್ನ ಕಣ್ಣುಗಳನ್ನು ಕಳೆದುಕೊಂಡ ಗೋಡೆಯ ಮೇಲೆ ರಕ್ತದ ಕಲೆಯು ಈಗಲೂ ಇದೆಯಂತೆ.
ಹಾಗಾಗಿ ಕಣ್ಣುಗಳನ್ನು ಕಳೆದುಕೊಂಡ ಈ ದೇವಾಲಯಕ್ಕೆ ಲೇಪಾಕ್ಷಿ ಎಂತ ಹೆಸರು ಬಂತೆಂದು ಹೇಳುತ್ತಾರೆ.
ಇಲ್ಲಿರುವ ಏಕಶಿಲಾ ನಾಗಲಿಂಗವಂತೂ ಇಲ್ಲಿನ ಮುಖ್ಯ ಆಕರ್ಷಣೆ. ಇಷ್ಟು ದೊಡ್ಡ ನಾಗಲಿಂಗ ಬೇರೆಲ್ಲೂ ಇಲ್ಲ.



ಇದನ್ನು ನೋಡಿ ಮುಂದುವರೆದಾಗ ಕಲ್ಯಾಣ ಮಂಟಪ ಎದುರಾಗುತ್ತದೆ, ಆದರೆ ಇದನ್ನು ನೋಡುವಾಗ ತುಂಬಾ ವ್ಯಸನವಾಗುತ್ತದೆ. ಇದೊಂದು ಅಪೂರ್ಣ ಕಟ್ಟಡ.
ಸ್ಥಂಭಗಳು ಕೆತ್ತನೆಗಳಿಂದ ಅಲಂಕೃತವಾಗಿ ನಿಂತಿವೆ ಆದರೆ ಮೇಲ್ಚಾವಣಿ ಇಲ್ಲವೇ ಇಲ್ಲ.






ಇದನ್ನು ನೋಡುವಾಗ ವಿರುಪಣ್ಣನ ಕಥೆ ನಿಜವಿರಬೇಕು ಎನಿಸುತ್ತದೆ. ಆತನ ಅವಸಾನವಾಗಿರಬೇಕು, ಆಮೇಲೆ ಇದನ್ನು ಕೇಳುವವರಿಲ್ಲದಾಗಿರಬೇಕು. ಈ ಕಂಭ ಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿದ್ದಾರೆ. ಅನಂತಶಯನ, ದತ್ತಾತ್ರೇಯ, ಚತುರ್ಮುಖ ಬ್ರಹ್ಮ, ತುಂಬುರ, ನಾರದ ಮತ್ತು ರಂಭಾ ಇವರೆಲ್ಲರೂ ಶಿವ ಪಾರ್ವತಿ ಯರ ವಿವಾಹಕ್ಕೆ ಬಂದಿರುವ ಸನ್ನಿವೇಶವನ್ನು ಇಲ್ಲಿ ಕೆತ್ತಿದ್ದಾರೆ.



ಆಲ್ಲಿಂದ ಸ್ವಲ್ಪ ಕೆಳಗೆ ಇಳಿದು ಬಂದರೆ ಇನ್ನೊಂದು ಮಂಟಪ ಸಿಗುತ್ತದೆ.

ಎಲ್ಲವನ್ನೂ ನೋಡಿ ಗರ್ಭ ಗೃಹವನ್ನು ಪ್ರವೇಶಿಸಿದಾಗ ಮುಖ್ಯ ಪ್ರತಿಷ್ಠೆಯಾದ ವೀರಭದ್ರ ದೇವರ ದರ್ಶನವಾಗುತ್ತದೆ.



ನವಗ್ರಹ, ಮತ್ತು ಇತರ ದೇವರುಗಳ ಗುಡಿಯೂ ಇಲ್ಲೇ ಇದೆ. ಒಳಗಡೆ ಸಹಾ ತುಂಬಾ ಶಿಲ್ಪಗಳಿವೆ. 
ದೇವಾಲಯದ ಹೊರಗಡೆ ಬಹಳ ದೊಡ್ಡದಾದ ಒಂದು ನಂದಿ ವಿಗ್ರಹವಿದ್ದು ಇದು ಅತಿ ದೊಡ್ಡ ಏಕಶಿಲಾ ನಂದಿ ಎಂದು ಹೆಸರುವಾಸಿಯಾಗಿದೆ.
ಬೆಂಗಳೂರಿನಿಂದ ಲೇಪಾಕ್ಷಿಗೆ ಬಸ್ಸು ಸೌಕರ್ಯವಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಜಾಗ.



Sunday, 16 May 2010

ಹಿಮವದ್ ಗೋಪಾಲಸ್ವಾಮಿ ಬೆಟ್ಟ

 ನಿಮಗೆ ಕಡು ಬೇಸಿಗೆಯಲ್ಲೂ ಮಂಜಿನ ಸ್ಪರ್ಶವಾಗಬೇಕೆ? ಚುಮು ಚುಮು ಚಳಿಯಲ್ಲಿ ಪ್ರಕೃತಿಯೊಂದಿಗೆ ಲೀನವಾಗಬೇಕೆ? ಪ್ರಶಾಂತತೆಯಲ್ಲಿ ಭಗವಂತನ ಧ್ಯಾನದಲ್ಲಿ ನಿರತವಾಗಬೇಕೆ? ಎಲ್ಲಾ ಜಂಜಾಟಗಳನ್ನು ಮರೆತು ಒಂದಿಷ್ಟು ಹೊತ್ತು ಆರಾಮವಾಗಿರಬೇಕೆ? 
ಇವೆಲ್ಲಾ ಒಟ್ಟಾಗಿ ಒಂದೆಡೆಯಲ್ಲೇ  ದೊರೆಯುವುದು ಅಷ್ಟು ಸುಲಭವಲ್ಲ, ಆದರೆ ನೀವು ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಇವೆಲ್ಲವೂ ನಿಮಗೆ ಲಭ್ಯ! 
ಗೋಪಾಲಸ್ವಾಮಿ ಬೆಟ್ಟವಿರುವುದು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ. ಬೆಂಗಳೂರಿನಿಂದ 220 Km. ಹಾಗೂ ಮೈಸೂರಿನಿಂದ 80 Km. ಮತ್ತು ಗುಂಡ್ಲುಪೇಟೆಯಿಂದ 12 Km. ದೂರದಲ್ಲಿದೆ. ಮೈಸೂರು ಊಟಿ ರಸ್ತೆಯಲ್ಲಿ ಗುಂಡ್ಲುಪೇಟೆಯಿಂದ ಮುಂದೆ  ಹಂಗಳ ಎಂಬ ಹಳ್ಳಿಯಲ್ಲಿ ಬಲಕ್ಕೆ ತಿರುಗಿ ಸುಮಾರು 10 Km. ಪಯಣಿಸಿದರೆ ಗೋಪಾಲಸ್ವಾಮಿ ಬೆಟ್ಟದ ಮೇಲೆ ಇರುತ್ತೀರಿ. ಬೆಟ್ಟವನ್ನು ಏರಲು ಕಡಿದಾದ ತಿರುವುಗಳ ಉತ್ತಮ ರಸ್ತೆ ಇದ್ದು ಎರಡೂ ಪಕ್ಕಗಳಲ್ಲಿ ಬಂಡೀಪುರದ ಕಾಡು ಹಬ್ಬಿಕೊಂಡಿದೆ. ಇದು ಬಂಡೀಪುರ ವನ್ಯಧಾಮದ ಅತ್ಯುನ್ನತ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1454 ಮೀಟರು ಎತ್ತರದಲ್ಲಿದೆ. ಸುತ್ತಲೂ ಕಾಣುವ ಹಸಿರು ಕಾಡಿನಲ್ಲಿ ವನ್ಯ ಮೃಗಗಳು ತುಂಬಾ ಇವೆ. ಆನೆಗಳ ಹಿಂಡು ಸಾಮನ್ಯವಾಗಿ ಕಾಣಸಿಗುತ್ತವೆ. ಜಿಂಕೆಗಳ, ಕಾಡು ಕುರಿಗಳ ಗುಂಪು ಸಹಾ ಕಾಣಬಹುದು. ಇನ್ನು ಚಿರತೆ, ಕರಡಿಗಳು ಸಹಾ ಇವೆ ಎಂದು ಫಾರೆಸ್ಟ್ ಗಾರ್ಡುಗಳು ಹೇಳುತ್ತಾರೆ.
ಬೆಟ್ಟದ ಮೇಲೆ ವರ್ಷದ ಎಲ್ಲಾ ದಿನಗಳಲ್ಲಿ ಮಂಜು ಹಬ್ಬಿರುವ ಕಾರಣ ಇದನ್ನು ಹಿಮವದ್ ಗೋಪಾಲಸ್ವಾಮಿ ಎಂದು ಕರೆಯುತ್ತಾರೆ. ಇಲ್ಲಿಂದ ಮೈಲುಗಳ ದೂರ ವಿಸ್ತಾರವಾಗಿ ಹಬ್ಬಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ವನ್ನು ಕಾಣಬಹುದು. ಅಂತೆಯೇ ಇದು ವನ್ಯಧಾಮದ ವ್ಯಾಪ್ತಿ ಯಲ್ಲಿ ಬರುವ ಕಾರಣ ಇಲ್ಲಿ ಸಂಜೆ 6 ರ ನಂತರ ಯಾರನ್ನೂ ಇರಲು ಬಿಡುವುದಿಲ್ಲ. ಬೆಟ್ಟದ ಕೆಳಗಿನಿಂದಲೇ ಪ್ರವೇಶ ಧನ ಕೊಟ್ಟು ಮೇಲೇರಬೇಕು. ದೇವಾಲಯದ ತನಕ ಉತ್ತಮ ರಸ್ತೆ ಇದೆ. ಇದರಲ್ಲಿ ಮೇಲೇರುವುದೇ ಒಂದು ರೋಚಕ ಅನುಭವ.
ಮೇಲೆ ಹೋಗುತ್ತಿದಂತೆ ಸುತ್ತಲಿನ ಹಳ್ಳಿಗಳು ಹೊಲ ಗದ್ದೆಗಳು ಚಿತ್ತಾರದಂತೆ ಕಾಣುತ್ತವೆ. ವಾಹನದಿಂದ ಇಳಿದಾಕ್ಷಣ ದೇವಾಲಯದ ಮೆಟ್ಟಿಲುಗಳು ಸಿಗುತ್ತವೆ. ಇದರಲ್ಲಿ ಮೇಲೆ ಹತ್ತಿದಾಗ ಗೋಪಾಲಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಇರುತ್ತೀರಿ.
ಆಗಲೇ ನಮಗೆ ಮಂಜಿನ ಅನುಭವವಾಗುತ್ತದೆ. ಛಳಿಯ ಅನುಭವ ಬಹಳ ಹಿತಕರವಾಗಿರುತ್ತದೆ. ಮೋಡ ಮುಸುಕಿದ್ದರೆ ಸುತ್ತಲೂ ಏನೇನೂ ಕಾಣಿಸದು, ಬರೇ ಮಸುಕು. ಬಿಸಿಲಿದ್ದರೆ ಸುತ್ತಲಿನ ದೃಶ್ಯಗಳನ್ನು ನೋಡಬಹುದು. ಎಲ್ಲೆಲ್ಲಿ ನೋಡಿದರೂ ಹಸಿರು ಬೆಟ್ಟ, ಕಾಡುಗಳು.
ಪ್ರಕೃತಿಯ ಮಧ್ಯದಲ್ಲಿ ನೆಲೆಗೊಂಡಿರುವ ವೇಣುಗೋಪಾಲಸ್ವಾಮಿ ದೇವಾಲಯವು ಬಹಳ ಪುರಾತನವಾಗಿದ್ದು ಸುಮಾರು 1315 ನೆ ಇಸವಿಯಲ್ಲಿ ಚೋಳ, ಬಲ್ಲಾಳನು ಕಟ್ಟಿಸಿದ್ದೆನ್ನಲಾಗಿದೆ. ನಂತರ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟು ದತ್ತಿ, ಜೀರ್ಣೋದ್ಧಾರಗಳನ್ನು ಪಡೆದು ಈಗಿರುವ ಸ್ಥಿತಿಯನ್ನು ಹೊಂದಿದೆ.
ಸುತ್ತಲೂ ಪ್ರಾಕಾರವಿದ್ದು ದ್ವಜಸ್ಥಂಭ ಮತ್ತು ಗೋಪುರಗಳನ್ನು ಹೊಂದಿದೆ. ಗರ್ಭಗೃಹ ದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮತ್ತು ರುಕ್ಮಿಣಿ, ಸತ್ಯಭಾಮೆಯರ ವಿಗ್ರಹಗಳಿವೆ. ಮೇಲಿನಿಂದ ನೀರು ಹನಿ ಹನಿಯಾಗಿ ದೇವರ ಮೇಲೆ ತೊಟ್ಟಿಕ್ಕುತ್ತದೆ. ಈ ನೀರು ಹೇಗೆ, ಎಲ್ಲಿಂದ  ಬರುತ್ತದೆ ಎಂದು ತಿಳಿಯುವುದಿಲ್ಲ. ಬಹಳ ಪ್ರಶಾಂತವಾದ ಈ ದೇವಾಲಯ ಮತ್ತು ಇದರ ಪರಿಸರ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ದೇವರ ದರ್ಶನ ಮಾಡಿ ಸ್ವಲ್ಪ ಹೊತ್ತು ಧ್ಯಾನ ಮಾಡಿ ಹೊರಬಂದರೆ ಪ್ರಕೃತಿಯು ನಮ್ಮನ್ನು ಕೈ ಚಾಚಿ ಕರೆಯುತ್ತಿರುತ್ತಾಳೆ.
ಪಕ್ಕದಲ್ಲೇ ಇರುವ ಕಾಲು ದಾರಿಯಲ್ಲಿ ಹೆಜ್ಜೆ ಹಾಕಿದರೆ ಅನತಿ ದೂರದಲ್ಲಿ ಕಾಣುವ ಬೆಟ್ಟದ ಕಡೆಗೆ ಚಾರಣ ಮಾಡಬಹುದು. ಇಲ್ಲಿಂದ ಕಾಡಿನ ಕಣಿವೆ ಮತ್ತು ಆಲ್ಲಿಂದ ಮೇಲೆ ಏರಿಬರುವ ಮಂಜಿನ ದರ್ಶನವಾಗುತ್ತದೆ. ಮೈ ಎಲ್ಲಾ ಮಂಜಿನಿಂದ ಆವರಿಸಿದಾಗ  ಪುಳಕಿತಗೊಳ್ಳುತ್ತದೆ.
ಇಲ್ಲಿ ಸ್ವಲ್ಪ ದೂರದವರೆಗೆ ಮಾತ್ರ ಮುಂದೆ ಹೋಗಲು ಅವಕಾಶ. ಮತ್ತೆ ಹೋಗಬೇಕಾದರೆ ಫಾರೆಸ್ಟ್ ನವರ ಅನುಮತಿ ಬೇಕು. ಇಲ್ಲಿ ಫಾರೆಸ್ಟ್ ಗೆಸ್ಟ್ ಹೌಸ್ ಸಹಾ ಇದೆ ಆದರೆ ಇದರಲ್ಲಿ ಉಳಕೊಳ್ಳಲು ಗುಂಡ್ಲುಪೇಟೆಯಲ್ಲಿರುವ ಫಾರೆಸ್ಟ್ ಇಲಾಖೆಯಿಂದ ಮುಂಚಿತ ಅನುಮತಿ ಪಡ ಕೊಳ್ಳಬೇಕು.
ಇಲ್ಲಿ ಬೆಟ್ಟದಮೇಲೆ ಯಾವುದೇ ಹೋಟೆಲುಗಳು ಇಲ್ಲವಾದ್ದರಿಂದ ಪ್ರವಾಸಿಗರು ಬರುವಾಗ ಸಾಕಷ್ಟು ತಿಂಡಿ ಊಟಗಳನ್ನು ತರುವುದು ಒಳ್ಳೆಯದು. ತಿಂಡಿ ತಿಂದು ಸಂಜೆಯವರೆಗೆ ಇಲ್ಲಿದ್ದು ವಾಪಸು ಹೋಗಬಹುದು.
ಗೋಪಾಲಸ್ವಾಮಿ ಬೆಟ್ಟಕ್ಕೆ ಇತ್ತೀಚೆಗೆ ಬೆಂಗಳೂರಿನಿಂದ ಪ್ರತಿದಿನ ಹೊರಡುವ KSRTC ಬಸ್ಸು ಸೌಕರ್ಯವಿದೆ. ಇಲ್ಲಿಗೆ ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ಬರಬಹುದು.ಯಾವುದೇ ತರದ ಅಪಾಯವಿಲ್ಲ.
ಇಲ್ಲಿಂದ ಮುಂದೆ ಪಯಣಿಸಿದರೆ ಬಂಡೀಪುರ ವನ್ಯಧಾಮ, ಮದುಮಲೈ ವನ್ಯಧಾಮ ಮತ್ತು ಊಟಿ ಗೆ ಸಹಾ ಹೋಗಬಹುದು. ಅಂತೆಯೇ ಇನ್ನೊದು ಮಾರ್ಗವಾಗಿ ವಯನಾಡು ವನ್ಯಧಾಮ, ಸುಲ್ತಾನ್ ಬತ್ತೇರಿಗೆ ಸಹಾ ಹೋಗಬಹುದು.
ಆದರೆ ಇತ್ತೀಚೆಗೆ ಈ ರಸ್ತೆಗಳಲ್ಲಿ   ರಾತ್ರಿ ಪ್ರಯಾಣ ನಿಷೇದಿಸಲಾಗಿದೆ.

 

Saturday, 27 March 2010

ಕೊರ್ನ್ ವಾಲ್ ನಲ್ಲಿ ಕೆಲ ದಿನಗಳು

ಕೊರ್ನ್ ವಾಲ್ ಎಂಬ ಊರು ಇರುವುದು ಇಂಗ್ಲೆಂಡ್ ದೇಶದ ಪಶ್ಚಿಮ-ದಕ್ಷಿಣ ಭಾಗದ ಕೊನೆಯಲ್ಲಿ. ಮೂರೂ ಕಡೆಯಲ್ಲಿ ಸಮುದ್ರದಿಂದ ಸುತ್ತುವರೆದಿದ್ದು ಪೂರ್ವ ಭಾಗವು ಡೆವೊನ್ ಕೌಂಟಿಗೆ ಹೊಂದಿಕೊಂಡಿದೆ. ನಮ್ಮ ದೇಶದ ಕನ್ಯಾಕುಮಾರಿಯನ್ನು ನೆನಪಿಸುತ್ತದೆ. ಉತ್ತರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣದಲ್ಲಿ ಇಂಗ್ಲಿಷ್ ಚಾನೆಲ್ ಇದೆ. ಹಾಗಾಗಿ ಇಲ್ಲೆಲ್ಲಾ ಬೀಚ್ ಗಳೇ ಕಾಣಸಿಗುವುದು. ಆದರೆ ನಮ್ಮ ಊರಿನಲ್ಲಿರುವ ಹಾಗೆ ಉದ್ದಕ್ಕೆ ಮೈಲುಗಟ್ಟಲೆ ಚಾಚಿರುವುದಲ್ಲ, ಎತ್ತರವಾದ ಮತ್ತು ಕಡಿದಾದ ಬೆಟ್ಟಗಳ ತಳಭಾಗದಲ್ಲಿ ಜೋರಾಗಿ ಆರ್ಭಟಿಸುವ ಕಡಲು. ಇಂತಹ ನೂರಾರು ಜಾಗಗಳು ಈ ಕೌಂಟಿಯಲ್ಲಿವೆ.

--

--
--

--
ಮೂರೂ ಕಡೆ ಸಮುದ್ರವಿರುವುದರಿಂದ ಇಲ್ಲಿನ ಹವೆ ಸಹಾ ಇಂಗ್ಲೆಂಡಿನ ಹವೆಗಿಂತ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಇಲ್ಲಿ ಸರಾಸರಿ 4 ರಿಂದ  19 ಡಿಗ್ರಿ ಉಷ್ಣತೆ ಇರುತ್ತದೆ. ಸಾಧಾರಣ ಮಳೆ, ಮತ್ತು ಕೆಲವೊಂದು ದಿನಗಳಲ್ಲಿ ಹಿಮಪಾತ ಸಹಾ ಆಗುತ್ತದೆ.
---


---
ಇಡೀ ಇಂಗ್ಲೆಂಡ್ ದೇಶದಲ್ಲೇ ಇದು ಅತ್ಯಂತ ಸುಂದರ ಪ್ರದೇಶ ಎಂದು ಹೆಸರುವಾಸಿಯಾಗಿದೆ. ಸಣ್ಣಪುಟ್ಟ ಬೆಟ್ಟ, ಕಣಿವೆ, ಕಾಡುಗಳು  ಮತ್ತು  ನದಿಗಳಿಂದ ಕೂಡಿದ ಈ ಪ್ರದೇಶವು ತನ್ನ ಹೂದೋಟಗಳಿಗಾಗಿ ಪ್ರಸಿದ್ದವಾಗಿದೆ. 
---


---
--


--



--


---



---


--


--
ಸುಮಾರು 3500 ಚದರ k.m. ವಿಸ್ತೀರ್ಣವಿರುವ ಇಲ್ಲಿ 50 ಕ್ಕಿಂತ ಹೆಚ್ಚು ದೊಡ್ಡ ಪ್ರಖ್ಯಾತವಾದ ಹೂದೋಟವಿದೆ. ಅಂತೆಯೇ ಹೆಸರುವಾಸಿಯಾದ ಕೋಟೆ ಕೊತ್ತಲಗಳು ಇವೆ, ಸಾಮಂತರುಗಳ ಭವ್ಯ ಭವನಗಳು ಇವೆ. ಹಾಗಾಗಿ ಇದೊಂದು ಪ್ರವಾಸಿ ಸ್ವರ್ಗ! ಇಲ್ಲಿನ ಒಟ್ಟಾರೆ ಜನ ಸಂಖ್ಯೆ 5.5 ಲಕ್ಷ. ಇಲ್ಲಿನ ನಾಗರಿಕರು ಹೆಚ್ಚಾಗಿ ಸಮುದ್ರಯಾನ ಮತ್ತು ಜಲ ಸೇನೆಯಲ್ಲಿ ಸೇವೆ ಮಾಡಿ ನಿವೃತ್ತರಾದವರು. ಇವರನ್ನು ಕೊರ್ನಿಶ್ ಜನರು ಎಂದು ಕರೆಯುತ್ತಾರೆ, ಇವರ ಇಂಗ್ಲಿಷ್ ಭಾಷೆಯ ಧಾಟಿಯೂ ಸ್ವಲ್ಪ ಬೇರೆಯದಾಗಿದ್ದು ತನ್ನದೇ ಆದ ಒಂದು ಸೊಗಡನ್ನು ಹೊಂದಿದೆ. ಬಹಳ ಕಾಲದ ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಕೊರ್ನ್ ವಾಲ್  , ಗ್ರೇಟ್ ಬ್ರಿಟನ್ನಿ ನೊಂದಿಗೆ ಸೇರಿಕೊಂಡಿತು.  ಇಂಗ್ಲೆಂಡನ್ನು ಆಳಿದ ಪ್ರಖ್ಯಾತ ರಾಜರುಗಳಲ್ಲಿ ಬಹಳ ಹೆಸರಾಂತ ರಾಜನಾದ ಆರ್ಥರ್ ದೊರೆ ಕೊರ್ನ್ ವಾಲ್  ನ ಟಿಂತಾಜೆಲ್ (Tintaajel) ಕೋಟೆಯಲ್ಲಿ ಹುಟ್ಟಿದ್ದನಂತೆ. ಈ ಕೋಟೆಯ ಅವಶೇಷಗಳು ಸಮುದ್ರ ದಡದಲ್ಲಿ ಎತ್ತರವಾದ ಜಾಗದಲ್ಲಿ  ಈವಾಗಲೂ ಇದ್ದು ಒಂದು ಆಕರ್ಷಕ ಪ್ರವಾಸಿ ಸ್ಥಳವಾಗಿದೆ.

--

--
--

--
ಅಂತೆಯೇ ಮೆರಿಜಿಯೋನ್ ನಲ್ಲಿರುವ ಸೈಂಟ್ ಮೈಕೆಲ್ಸ್ ಮೌಂಟ್, ಸಮುದ್ರದ ಮದ್ಯದಲ್ಲಿದ್ದು ಒಂದು ಪುಟ್ಟ ನಡುಗಡ್ಡೆಯ ಮೇಲೆ ಕಟ್ಟಿರುವ ಕ್ಯಾಸೆಲ್! ಇಲ್ಲಿ ಒಂದು ಚರ್ಚು ಸಹಾ ಇದೆ. ಭರತದ ಸಮಯದಲ್ಲಿ ಸಮುದ್ರವು ಇದನ್ನು ಸುತ್ತುವರಿದು ಒಂದು ದ್ವೀಪವಾಗುತ್ತದೆ, ಇಳಿತದ ಸಮಯದಲ್ಲಿ ಈಕಡೆಯಿಂದ ಅಲ್ಲಿಯವರೆಗೆ ನಡೆದೇ ಹೋಗಬಹುದು. 
ಇಲ್ಲಿನ ಹೂದೋಟಗಳ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆ ಎನಿಸುತ್ತಿದೆ. ಒಂದೊಂದು ತೋಟವೂ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿದೆ. ಲ್ಯಾನ್ ಹೈಡ್ರೋಕ್  ತೋಟದೊಳಗೆ ಆಗಿನ ಕಾಲದ ಟ್ಯುದರ್ ನ  (Tudar)    ಭವ್ಯ ಭವನವಿದೆ.ಈಗಲೂ ಸಹಾ ಅದನ್ನು ಹಿಂದಿನ ಅದೇ ವೈಭವದಲ್ಲಿ ಇರಿಸಿದ್ದಾರೆ. 

--

--
--

--
--

--
--

--

ಇಲ್ಲಿ ವಿಶಾಲವಾದ ಹುಲ್ಲು ಹಾಸು ಅಲ್ಲಲ್ಲಿ ದೊಡ್ಡ ಮರಗಳು, ವಿವಿಧ  ಬಗೆಯ ಹೂ ಬಿಡುವ ಮರ ಗಿಡಗಳು ಎಲ್ಲವನ್ನೂ    ಅಚ್ಚುಕಟ್ಟಾಗಿ ಬೆಳೆಸಿದ್ದಾರೆ. ಅದೇ ತರಹ ಇತರ ಪ್ರಸಿದ್ಧ ಹೂದೊಟಗಳಾದ ಥ್ರೆಭಾ, ಟ್ರೆಂಗ್ವಿಟಿಯನ್, ಟ್ರೆಲಿಸಿಕ್, ಕೋಟ್ ಹೀಲಿ ಮತ್ತು ಗ್ಲೆನ್ ಡುರ್ಗನ್ ಗಳು ತಮ್ಮದೇ ಆದ ವಿಶೇಷತೆ ಹೊಂದಿದ ಪರಿಸರ, ಸಸ್ಯ, ಹೂವುಗಳು ಮತ್ತು ಹುಲ್ಲು ಹಾಸಿನಿಂದ ರಾರಾಜಿಸುತ್ತವೆ. ಈ ಎಲ್ಲಾ ತೋಟಗಳು ಬೇಸಿಗೆಯ ಕಾಲದಲ್ಲಿ ತಮ್ಮ ಪೂರ್ತಿ ಸೌಂದರ್ಯವನ್ನು ಹೊಂದುವುದರಿಂದ ಆಗ ಇವುಗಳಿಗೆ ಬೇಟಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ, ಆಗಲೇ ಪ್ರವಾಸಿ ಸೀಸನ್  ಸಹಾ ಆರಂಭವಾಗುವುದು.
ಕೊರ್ನಿಶ್ ಜನರು ತುಂಬಾ ಶಾಂತಿ ಪ್ರಿಯರು ಮತ್ತು ಎಲ್ಲರನ್ನೂ ಗೌರವದಿಂದ ಕಾಣುವರು. ಇಲ್ಲಿನ ಮುಖ್ಯ ಕೃಷಿ ಎಂದರೆ ಆಲುಗಡ್ಡೆ,ಮತ್ತು ತರಕಾರಿ. ಆದರೆ ಹೆಚ್ಚಾಗಿ ಜನರು ಹೈನುಗಾರಿಕೆ, ಕುದುರೆ, ಕುರಿ, ಲಾಮ, ಕೋಳಿ ಸಾಕಣೆ ಮಾಡುತ್ತಾರೆ. ಎಲ್ಲೆಡೆಗಳಲ್ಲೂ ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದಷ್ಟ ಪುಷ್ಟ ದನ ಕರುಗಳು, ಕುದುರೆ, ಕುರಿಗಳನ್ನು ಕಾಣಬಹುದು. ಇದಕ್ಕೆ ಸಂಭಂದಿಸಿದ ಉತ್ಸವಗಳು ಮತ್ತು ಹಬ್ಬಗಳು ಅಲ್ಲಲ್ಲಿ ನಡೆಯುತ್ತವೆ, ಆಗ ಇವುಗಳ ಪ್ರದರ್ಶನ ಸಹಾ ಇರುತ್ತವೆ.
ಕೊರ್ನ್ ವಾಲ್  ನ ಆಡಳಿತ ಕೇಂದ್ರವಾದ ಟ್ರುರೋ ಪಟ್ಟಣವು ತುಂಬಾ ಸುಂದರವಾಗಿದೆ. ಇತರ ಮುಖ್ಯ ಸ್ಥಳಗಳೆಂದರೆ ರೆಡ್ರುತ್, ಫಾಲ್ ಮೌತ್, ನ್ಯೂಕೀ, ಸೈಂಟ್ ಆಗ್ನೆಸ್, ಸೈಂಟ್ ಈವ್ಸ, ಬೋಡ್ಮಿನ್, ಫೋಯೇ, ಮೆರಿಜಿಯೊನ್ ,ಸೈಂಟ್ ಆಸ್ಟೆಲ್, ಲಿಸಾರ್ಡ್ ಮತ್ತು ಲ್ಯಾಂಡ್ಸ್ ಎಂಡ್. ಈ ಎಲ್ಲಾ ಸ್ಥಳಗಳು ಬಹಳ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶಗಳಾಗಿವೆ.
--

--

--

--
--

--
--

--
--

--
--
From photos


--
--
From photos
--
--

--
--
From photos
--
--

--
--

--
--

--
ಲ್ಯಾಂಡ್ಸ್ ಎಂಡ್ ಎಂದರೆ ಭೂಮಿಯ ಕೊನೆ ಅಥವಾ ಅಂಚು ಎಂಧರ್ಥ. ಇಲ್ಲಿ ಬಂದಾಗ ಅದು ಹೌದೆನಿಸುತ್ತದೆ. ಇದರಾಚೆಗೆ ಅಟ್ಲಾಂಟಿಕ್ ಮಹಾಸಾಗರವು ಚಾಚಿಕೊಂಡಿದೆ. ಈ ಸ್ಥಳವು ಗ್ರೇಟ್ ಬ್ರಿಟನ್ನಿನ ದಕ್ಷಿಣದ ತುದಿಯಾಗಿದೆ.
ಮಿನ್ನಾರ್ಕ್ ಥಿಯೇಟರ್ ಇರುವುದು ಸಮುದ್ರದ ಕರೆಯಲ್ಲಿರುವ ಎತ್ತರದ  ಇಳಿಜಾರು ಪ್ರದೇಶದಲ್ಲಿ. ಇದನ್ನು ಒಂದು ಎಂಫಿ ಥಿಯೇಟರ್ ಮಾದರಿಯಲ್ಲಿ  ಕಟ್ಟಿದ್ದಾರೆ, ಮತ್ತು ಇಲ್ಲಿ ನಿಗದಿತ ದಿನಗಳಲ್ಲಿ ಶೇಕ್ಸ್ ಫಿಯರನ ನಾಟಕಗಳನ್ನು ಆಡುತ್ತಾರೆ. ರಾತ್ರಿಯ ಹೊತ್ತು ಸಮುದ್ರದ ಪರಿಸರದಲ್ಲಿ, ವಿಶಿಷ್ಟವಾದ ನೆರಳು ಬೆಳಕಿನ ಮತ್ತು ದ್ವನಿ ಸಂಯೋಜನೆಯ ಮಿಳಿತದಿಂದ ಕೂಡಿದ ಮಹಾನ್ ನಾಟಕ ಕಾರನ ಕೃತಿಗಳನ್ನು ನೋಡುವುದು ಒಂದು ವಿಶೇಷ ಅನುಭವ. ಅಷ್ಟು ನೈಜವಾಗಿರುತ್ತವೆ!
--

--

--

--
ಸ್ಟಿಥಿಯನ್ಸ್  ಎಂಬ ಪುಟ್ಟ ಊರು ಇರುವುದು ಟ್ರುರೋ ಪಟ್ಟಣದ ಹತ್ತಿರ. ಇಲ್ಲಿ ನಮ್ಮ ಮಗಳ ಮನೆಯಿದೆ, ಹಾಗಾಗಿ ಇಲ್ಲಿಗೆ 2-3 ಸಾರಿ  ಬಂದು ಇವನ್ನೆಲ್ಲ ನೋಡಿ ಸಂತೋಷಿಸಲು ಸಾಧ್ಯವಾಯಿತು. ನಮ್ಮ ಅಳಿಯಂದಿರು NHS Cornwall partnership Trust ನಲ್ಲಿ ಹಿರಿಯ ಡಾಕ್ಟರ್ ಆಗಿದ್ದಾರೆ ಮತ್ತು ಇಲ್ಲಿನ ವಿಲೇಜ್ ಕೌನ್ಸಿಲರ್ ಸಹಾ ಆಗಿದ್ದಾರೆ. ಇತ್ತೀಚಿಗೆ ಈ ಮನೆಗೆ  ಗಂಡು ಮಗುವಿನ ಆಗಮನವಾಗಿದೆ.
ಸ್ಟಿಥಿಯನ್ಸ್    ಒಂದು ಹಳ್ಳಿ, (ವಿಲೇಜ್ ) ಆದರೂ ನಮ್ಮ ಊರಿನ ಹಾಗಿಲ್ಲ. ಇಲ್ಲಿ ಸುಮಾರು 500 ಮನೆಗಳಿದ್ದು, ಒಂದು ಶಾಲೆ, ಆಸ್ಪತ್ರೆ, ಜನರಲ್ ಸ್ಟೋರ್, ಪೋಸ್ಟ್ ಆಪೀಸು, ಒಂದು ಚರ್ಚು, ಆಟದ ಮೈದಾನು, ಎಲ್ಲಾ ಇವೆ. ಮನೆಗಳು ಎಲ್ಲವೂ ಸುಂದರವಾಗಿದ್ದು, ಪ್ರತಿಯೊಂದು ಮನೆಗೂ ಒಂದು ಹೂದೋಟ, ಲಾನ್ ಇದ್ದೇ ಇರುತ್ತದೆ.
--

--
---
--

--
--

--

--

--

--

--
--
From photos
--
ಇಲ್ಲಿ ಗಗನ ಚುಂಬಿಗಳಿಲ್ಲ. ಇಲ್ಲಿನ ವಿಶೇಷತೆ ಎಂದರೆ ಕೆಲವು ಕಡೆ ಮನೆಗಳು ಬಹಳ ದೂರದಲ್ಲಿ ಏಕಾಂಗಿಯಾಗಿ ನಿರ್ಜನ ಪ್ರದೇಶದಲ್ಲಿದ್ದರೂ ಸಹಾ ಅಲ್ಲಿಯವರೆಗೆ ವಿದ್ಯುತ್ ಸೌಕರ್ಯ ಮತ್ತು ನೀರಿನ ಸರಬರಾಜು ಇದ್ದೇ ಇರುತ್ತದೆ ಮತ್ತು ಅಲ್ಲಿಯವರೆಗೆ ದಾಮಾರು ರಸ್ತೆ ಸಹಾ ಇರುತ್ತದೆ.
--

--

ಅಂಥಹ ಏಕಾಂಗಿ ಮನೆಗಳಿಗೆ ಇಲ್ಲಿ ತುಂಬಾ ಬೇಡಿಕೆ ಇದೆ ಮತ್ತು ದುಬಾರಿಯಾಗಿದೆ. ಇಲ್ಲಿ ಕಳ್ಳ ಕಾಕರ ಹಾವಳಿ ಇಲ್ಲವೇ ಇಲ್ಲ. ದೊಂಬಿ, ಗಲಭೆಗಳಿಲ್ಲದ ಪ್ರಶಾಂತವಾದ ಊರಿದು. ಎರಡೂ ಕಡೆ ಸಮುದ್ರ ಹತ್ತಿರವಾಗಿದ್ದುದರಿಂದ ಒಳ್ಳೆಯ ವಾತಾವರಣ ಇದೆ. ಆಕಡೆ 5  ಮೈಲು ಈ ಕಡೆ 6 ಮೈಲು  ಹೋದರೆ ಸಮುದ್ರ ಸಿಗುತ್ತದೆ! ಇಲ್ಲಿ ಒಂದು ದೊಡ್ಡ ಮಾನವ ನಿರ್ಮಿತ ಸರೋವರವಿದೆ. ಸ್ಟಿಥಿಯನ್  ಲೇಕ್ ಅಂತ ಕರೆಯುತ್ತಾರೆ. ಇಲ್ಲಿಂದ ಕುಡಿಯುವ ನೀರು ಇಲ್ಲಿ ಸುತ್ತ ಮುತ್ತಲಿನ ಹಳ್ಳಿಗಳಿಗೆಲ್ಲಾ ಸರಬರಾಜು ಆಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನೌಕಾ ಕ್ರೀಡೆ ನಡೆಯುತ್ತದೆ. ಇದರ ಸುತ್ತು ನಡೆದಾಡಲು ಮತ್ತು ಆಣೇಕಟ್ಟಿನ ಮೇಲೆ ಹೋಗಲು ತುಂಬಾ ಸೊಗಸು. ಸ್ಟಿಥಿಯನ್  ಫೇರ್ ಮತ್ತು 
ಸ್ಟಿಥಿಯನ್ ಷೋಗಳು ಇಲ್ಲಿ  ಬಹಳ ಪ್ರಸಿದ್ಧ. ಊರಿನ ಎಲ್ಲಾ ಜನಗಳು ಇದರಲ್ಲಿ ಭಾಗವಹಿಸುತ್ತಾರೆ.