ಚಾರ್ ಧಾಮ್ ಯಾತ್ರೆ
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಕ್ಷೇತ್ರಗಳು ಎಂದರೆ
ಬದರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ. ಇವುಗಳನ್ನೇ ಚಾರ್ ಧಾಮ್ ಎನ್ನುತ್ತಾರೆ.
ಇನ್ನೊಂದು ಪಂಗಡದವರ ಪ್ರಕಾರ, ಬದರೀನಾಥ,
ದ್ವಾರಕಾ, ಪುರಿ ಹಾಗೂ ರಾಮೇಶ್ವರಗಳೇ ಚಾರ್ ಧಾಮ್ ಎಂದು
ಪರಿಗಣಿಸುತ್ತಾರೆ. ಅದೇನೇ ಇರಲಿ ನಮಗೆ ದೇವರ ದರ್ಶನವಾದರೆ ಸಾಕು.
ನಾವು ಬದರಿ, ಕೇದಾರ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ
ಹೋಗಬೇಕೆಂದು ತೀರ್ಮಾನ ಮಾಡಿದೆವು. ಆದರೆ ಇಲ್ಲಿಗೆ ಯಾವಾಗ ಬೇಕಾದರೂ ಹೋಗುವ ಹಾಗಿಲ್ಲ. ಎಪ್ರಿಲ್-
ಮೇ ತಿಂಗಳಿಂದ ಪ್ರಾರಂಭವಾಗಿ ಅಕ್ಟೋಬರ್-ನವಂಬರ್ ತಿಂಗಳವರೆಗೆ ಮಾತ್ರ ಹೋಗಲು ಸಾಧ್ಯ. ಉಳಿದೆಲ್ಲಾ
ಮಾಸಗಳಲ್ಲಿ ಈ ಧಾಮಗಳು ದಟ್ಟ ಹಿಮದಿಂದ ಮುಚ್ಚಿರುತ್ತದೆ. ಆ ಕಾಲದಲ್ಲಿ ಅಲ್ಲಿನ ದೇವರುಗಳನ್ನು
ಕೆಳಗಿರುವ ದೇವಾಲಯಗಳಲ್ಲಿ ಇರಿಸುತ್ತಾರೆ. ಇಲ್ಲೇ ಅವರಿಗೆ ಪೂಜೆ.
ನಮ್ಮ ಯಾತ್ರೆಯ ಮೊದಲ ಅಂಗವಾಗಿ ಮಾಹಿತಿಗಳನ್ನು ಕಲೆ
ಹಾಕಿದೆವು. ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಬೇಕಾದ ಎಲ್ಲಾ ವಿವರಗಳು, ಮುಂಜಾಗ್ರತೆಗಳು, ಮ್ಯಾಪ್
ಗಳು ಹವಾಮಾನ ಎಲ್ಲಾ ಸಂಗತಿಗಳನ್ನು ತಿಳಿದುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡೆವು. ಇನ್ನು
ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸಿದೆವು. ಇವರ ದರಗಳಲ್ಲಿ ಬಹಳ ವ್ಯತ್ಯಾಸವಿದೆ. ಕೊನೆಗೊಮ್ಮೆ
ಕೆ.ಆರ್. ಮಾರ್ಕೆಟ್ ನಲ್ಲಿರುವ ಸರ್ವೋದಯ ಟ್ರಾವೆಲ್ಸ ನವರ ದರ ನಮಗೆ ಒಪ್ಪಿಗೆಯಾಯಿತು. ಇದರ
ಮಾಲಿಕರಾದ ಕುಮಾರ್ ಶಂಕರ್ ಅವರು ನಮ್ಮ ಜೊತೆಯಲ್ಲೇ ಬರುತ್ತಾರೆ ಎಂದು ತಿಳಿದಾಗ ನಮ್ಮ ಎಲ್ಲಾ
ಆತಂಕಗಳೂ ದೂರವಾಯಿತು.
ದೆಹಲಿಯವರೆಗೆ ವಿಮಾನ ಪ್ರಯಾಣ ನಂತರ ಎಸಿ ಬಸ್ಸಿನಲ್ಲಿ
ಪ್ರಯಾಣ. ಊಟ ವಸತಿ ಎಲ್ಲಾ ಸೇರಿ ಒಟ್ಟು 29 ಸಾವಿರ. 14 ದಿನಗಳ ಯಾತ್ರೆ.ಸೆಪ್ಟೆಂಬರ್ 11 ರಿಂದ 24 ರ
ವರೆಗೆ.
ಯಾತ್ರೆ ಹೋಗುವ ಸಂಭ್ರಮದಲ್ಲಿ ನಾವು 14 ಮಂದಿ ಎಲ್ಲಾ ತಯಾರಿ
ನಡೆಸಿದ್ದೆವು. ಉಲ್ಲನ್ ಬಟ್ಟೆ, ಕಾಲು ಚೀಲ, ಹೊದಿಕೆ, ಟೋಪಿ ಇತ್ಯಾದಿಗಳು,ಔಷಧಿಗಳು ಮತ್ತು
ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇತರೇ ಅಗತ್ಯ ಸಾಮಾನುಗಳು ಎಲ್ಲಾ ಹೊಂದಿಸಿಕೊಂಡೆವು. ಅಂತೂ 11
ತಾರೀಖು ಬಂದೇಬಿಟ್ಟಿತು.ಸಂಜೆ 5 ಗಂಟೆಗೆ ಮನೆಯಿಂದ ಹೊರಟು ವಿಮಾನ ನಿಲ್ದಾಣ ತಲುಪಿದೆವು. ಒಟ್ಟು
54 ಜನ ಯಾತ್ರಿಕರು. ಅಡಿಗೆಯವರು ಎಲ್ಲಾ ಸೇರಿ ದೊಡ್ಡ ಗುಂಪು ಅಲ್ಲಿ ನೆರೆದಿದ್ದರು. ನಮಗೆಲ್ಲಾ
ಮಾಹಿತಿಗಳನ್ನು ವಿವರಿಸಲಾಯಿತು. ರಾತ್ರಿಯ ಊಟಕ್ಕೆ ಪಲಾವು ವಿತರಿಸಿದರು. ನಾವು 14 ಜನರಿಗೆ
ಸ್ಪೈಸ್ ಜೆಟ್ ವಿಮಾನ, ಉಳಿದವರಿಗೆ ಗೋ ಏರ್ ವಿಮಾನ. ರಾತ್ರಿ 9 ಘಂಟೆಗೆ ವಿಮಾನ ಹೊರಟು 11.30
ಕ್ಕೆ ದೆಹಲಿ ತಲುಪಿತು. ನಮ್ಮ ಬ್ಯಾಗು ಎಲ್ಲಾ ಪಡೆದುಕೊಂಡು ಹೊರ ಬಂದಾಗ ನಮಗಾಗಿ ಒಂದು ಟೆಂಪೊ
ಟ್ರಾವೆಲ್ಲರ್ ಕಾದು ನಿಂತಿತ್ತು. ಅದನ್ನು ಏರಿ ರಾತ್ರಿಯಿಡೀ ಪ್ರಯಾಣ ಹರಿದ್ವಾರದೆಡೆಗೆ. 220
ಕಿ.ಮಿ.ಪ್ರಯಾಣ. ದೆಹಲಿಯಿಂದ ಮೀರತ್ ದಾರಿಯಾಗಿ ಮುಝಾಪುರ್ ನಗರ, ರೂರ್ಕಿಯಾಗಿ ಬೆಳಗ್ಗೆ 6
ಘಂಟೆಗೆ ಹರಿದ್ವಾರ ತಲುಪಿದೆವು. ರಾತ್ರಿ ಎಲ್ಲಾ ನಾನು ಚಾಲಕನೊಡನೆ ಹರಟುತ್ತಾ ಇದ್ದೆ. ಅವನ
ಹೆಸರು ಯಹೀನ್ ಮಲಿಕ್, ಅನ್ಯ ಮತೀಯನಾದರೂ ನಮ್ಮ ಹಿಂದೂ ದೇವಾಲಯಗಳ ಬಗ್ಗೆ ಚೆನ್ನಾಗಿ
ಅರಿತುಕೊಂಡಿದ್ದಾನೆ.
ನಮಗಾಗಿ ಒಂದು ಉತ್ತಮವಾದ ಹೊಟೆಲ್ ಬುಕ್ ಆಗಿತ್ತು.
ಮೂವರಿಗೆ
ಒಂದು ರೂಮ್. ಅಲ್ಲಿ ಸ್ವಲ್ಪ ವಿಶ್ರಮಿಸಿದಾಗ ನಮ್ಮ ಉಳಿದ ಸಹ ಯಾತ್ರಿಕರೂ ತಲುಪಿದರು. ಬೆಳಗಿನ
ತಿಂಡಿ ಕಾಫಿ ಚೆನ್ನಾಗಿತ್ತು. ಆವಾಗ
ಆಕಾಶದಲ್ಲಿ ಕಾರ್ಮೊಡ ಕವಿಯಿತು. ಗುಡುಗು ಮಿಂಚು ಮತ್ತು
ಧಾರಕಾರ ಜಡಿ ಮಳೆ ಸುರಿಯಿತು. ನಮಗೆಲ್ಲ ಆತಂಕ, ನಮ್ಮ ಮುಂದಿನ ಪ್ರಯಾಣ ಏನಾಗುವುದೋ ಎಂದು.
ಪುಣ್ಯಕ್ಕೆ ಮುಂದೆ ನಮಗೆಲ್ಲೂ ಮಳೆ ಸಿಗಲೇ ಇಲ್ಲ.
ಆ ಮೇಲೆ ನಾವು ಆಟೋದಲ್ಲಿ ಮನ್ಸಾ ದೇವಿ ಮಂದಿರಕ್ಕೆ ಹೋದೆವು.
ಇಲ್ಲಿಗೆ ಹೋಗಲು ರೋಪ್ ವೇ ಯಲ್ಲಿ ಹೋಗಬೇಕು.
ಬಹಳ ರೋಮಾಂಚಕಾರಿ ಅನುಭವ. ಇಲ್ಲಿಂದ ನಮಗೆ ಹರಿದ್ವಾರದ
ಪೂರ್ತಿ ನೋಟ ಕಾಣಸಿಗುತ್ತದೆ. ದೇವರ ದರ್ಶನ ಮಾಡಿ ಕೆಳಗೆ ಬಂದೆವು. ನಂತರ ಚಂಡೀದೇವಿ ಮಂದಿರಕ್ಕೆ
ಹೊರಟೆವು. ಇಲ್ಲಿ ಸಹಾ ರೋಪ್ ವೇ ಯಲ್ಲಿ ಹೋಗಬೇಕು.
ಬಹಳ ಖುಶಿ ಆಯಿತು. ನಂತರ ರೂಮ್ ಗೆ ಬಂದೆವು. ಊಟ ತಯಾರಾಗಿತ್ತು. ತುಸು ವಿಶ್ರಾಮ. ಸಂಜೆ ಎರಡು ಮಂದಿರಗಳನ್ನು ನೋಡಿದೆವು. ಪೂರ್ತಿ ಕನ್ನಡಿಯಿಂದ ಇದನ್ನು ರಚಿಸಿದ್ದಾರೆ.
ಇಲ್ಲಿರುವ ಎಲ್ಲಾ ದೇವರುಗಳನ್ನು, ಮಂಟಪಗಳನ್ನು ಗಾಜಿನಿಂದ ಬಹಳ ಕಲಾತ್ಮಕವಾಗಿ ಮಾಡಿದ್ದಾರೆ. ಒಂದು ವಿಶೇಷ ಅನುಭವ ಪಡೆದೆವು. ನಂತರ ನಾವು ಗಂಗಾ ಆರತಿ ನೋಡಲು ನದೀ ತಟಕ್ಕೆ ಹೋದೆವು. ಅಲ್ಲಿ ವಿಪರೀತ ಜನ ಜಂಗುಳಿ. ರಾತ್ರಿ 7.20 ಕ್ಕೆ ಗಂಗಾ ಆರತಿ ಪ್ರಾರಂಭ. ಎಲ್ಲೆಲ್ಲೂ ದೀಪಗಳ ವೈಭವ. ಎಲ್ಲರೂ ಗಂಗೆಗೆ ವಂದಿಸಿ ದೀಪವನ್ನು ಹರಿ ಬಿಡುತ್ತಾರೆ. ನಾವು ಸಹಾ ದೀಪಾರ್ಚನೆ ಮಾಡಿದೆವು.
ನೀರಲ್ಲಿ ದೀಪಗಳು ತೇಲುತ್ತಾ ಹೋಗುವುದನ್ನು ನೋಡಲು,ಅದರ
ಪ್ರತಿಬಿಂಬಗಳು ನೀರಲ್ಲಿ ಪ್ರತಿಫಲಿಸಿದಾಗ ಕಾಣುವ ಆ ನೋಟವು ಬಹಳ ಚೆನ್ನಾಗಿತ್ತು. ಅಲ್ಲಿನ ಆ
ವಾತಾವರಣ ಮನಸ್ಸಲ್ಲಿ ನೆಲೆ ನಿಂತಿದೆ. ಆಟೋ ಹತ್ತಿ ರೂಮ್ ಗೆ ಬಂದೆವು. ರಾತ್ರಿಯೂಟ ಮುಗಿಸಿ
ಮಲಗಿದೆವು.
ಬಹಳ ಖುಶಿ ಆಯಿತು. ನಂತರ ರೂಮ್ ಗೆ ಬಂದೆವು. ಊಟ ತಯಾರಾಗಿತ್ತು. ತುಸು ವಿಶ್ರಾಮ. ಸಂಜೆ ಎರಡು ಮಂದಿರಗಳನ್ನು ನೋಡಿದೆವು. ಪೂರ್ತಿ ಕನ್ನಡಿಯಿಂದ ಇದನ್ನು ರಚಿಸಿದ್ದಾರೆ.
ಇಲ್ಲಿರುವ ಎಲ್ಲಾ ದೇವರುಗಳನ್ನು, ಮಂಟಪಗಳನ್ನು ಗಾಜಿನಿಂದ ಬಹಳ ಕಲಾತ್ಮಕವಾಗಿ ಮಾಡಿದ್ದಾರೆ. ಒಂದು ವಿಶೇಷ ಅನುಭವ ಪಡೆದೆವು. ನಂತರ ನಾವು ಗಂಗಾ ಆರತಿ ನೋಡಲು ನದೀ ತಟಕ್ಕೆ ಹೋದೆವು. ಅಲ್ಲಿ ವಿಪರೀತ ಜನ ಜಂಗುಳಿ. ರಾತ್ರಿ 7.20 ಕ್ಕೆ ಗಂಗಾ ಆರತಿ ಪ್ರಾರಂಭ. ಎಲ್ಲೆಲ್ಲೂ ದೀಪಗಳ ವೈಭವ. ಎಲ್ಲರೂ ಗಂಗೆಗೆ ವಂದಿಸಿ ದೀಪವನ್ನು ಹರಿ ಬಿಡುತ್ತಾರೆ. ನಾವು ಸಹಾ ದೀಪಾರ್ಚನೆ ಮಾಡಿದೆವು.
ನಾವು ಈಗ ಉತ್ತರಾಖಂಡದಲ್ಲಿದ್ದೇವೆ. ಈ ರಾಜ್ಯವನ್ನು ದೇವ ಭೂಮಿ ಅಂತ ಕರೆಯುತ್ತಾರೆ. ನಿಜಕ್ಕೂ ಇದು ದೇವ ಭೂಮಿಯೇ ಸರಿ ಅಷ್ಟೊಂದು ಧಾಮಗಳು ಪ್ರಯಾಗಗಳು ಮಂದಿರಗಳು ಇಲ್ಲಿವೆ. ಪುಣ್ಯ ಪಾವನ ನದಿಗಳು, ಪರ್ವತಗಳು ಎಲ್ಲಾ ಸೇರಿ ದೇವ ಭೂಮಿ ಎಂಬುದು ಅನ್ವರ್ಥ ನಾಮ. ಇಲ್ಲಿನ ಕಾಡುಗಳು ಕೊಳ್ಳಗಳು ಗಿರಿ ಕಂದರಗಳು ಮಂಜು ಮುಸುಕಿದ ವಾತವರಣ ಸ್ವರ್ಗದಿಂದಲೇ ನೇರ ಕೆಳಗಿಳಿಯುವಂತೆ ತೋರುವ ಜಲಪಾತಗಳು ಎಲ್ಲವೂ ಮನಸೂರೆಗೊಳ್ಳುತ್ತದೆ. ಋಷಿಕೇಶದಿಂದ ನಿಜವಾದ ಹಿಮಾಲಯ ಆರಂಭವಾಗುತ್ತದೆ. ಹಿಮಾಲಯ ಪರ್ವತದ ಪಾದ ಇದು.ಮುಂದೆಲ್ಲಾ ಏರು ದಾರಿ.