ಕೆಮ್ಮಣ್ಣುಗುಂಡಿ ನೋಡಬೇಕೆಂದು ಆಸೆ ಪಟ್ಟು ವರ್ಷಗಳೇ ಕಳೆದವು, ಯಾಕೋ ಕೂಡಿ ಬರಲಿಲ್ಲ. ನಮ್ಮ ಪುಟ್ಟ ತಂಡ ನಮ್ಮ ಮನೆಯಲ್ಲಿ ಸೇರಿದಾಗ ಕೆಮ್ಮಣ್ಣುಗುಂಡಿಗೆ ಹೋಗೋಣ ಎಂತ ನಿಶ್ಚಯ ಮಾಡಿದೆವು. ಅಂತೆಯೇ ಮುಂದಿನ ಶನಿವಾರ ಹೋಗೋಣ ಎಂದುಕೊಂಡೆವು. ತೋಟಗಾರಿಕಾ ಇಲಾಖೆಯಲ್ಲಿ ವಿಚಾರಿಸಿದಾಗ ನಮಗೆ ಕೆಮ್ಮಣ್ಣುಗುಂಡಿ ಗೆಸ್ಟ್ ಹೌಸ್ ನ ಫೋನ್ ನಂಬರ್ ಸಿಕ್ಕಿತು. ಅದೃಷ್ಟದಿಂದ ಅಲ್ಲಿ ಕಾಟೇಜು ಸಹಾ ಬುಕ್ ಆಯಿತು.
ನಾನು, ಕಸ್ತೂರಿ, ವೀಣಾ, ವಿಷು, ಅರು ಮತ್ತು ಶ್ರುತಿ, ಮಾರುತಿ ಸ್ವಿಫ್ಟ್ ನಲ್ಲಿ ಬೆಂಗಳೂರಿನಿಂದ ಪ್ರಯಾಣ ಹೊರಟೆವು. ಬೆಳಗ್ಗೆ ಸುಮಾರು 8 ಗಂಟೆಗೆ ಒಂದೆಡೆ ಕಾರು ನಿಲ್ಲಿಸಿ ಬೆಳಗ್ಗಿನ ಉಪಹಾರ ಮುಗಿಸಿದೆವು. ಮತ್ತೆ ಮುಂದುವರೆದು ಹಾಸನ ತಲುಪಿ ನಂತರ ಚಿಕ್ಕಮಗಳೂರು ತಲಪುವಾಗ ಮಧ್ಯಾಹ್ನವಾಗಿತ್ತು. ಅಲ್ಲೇ ಊಟ ಎಲ್ಲಾ ಮುಗಿಸಿ ಪಕ್ಕದ ಮಾರ್ಕೆಟ್ ನಿಂದ ನಮಗೆ ಬೇಕಾದ ಹಣ್ಣು, ಸೌತೆಕಾಯಿ, ತರಕಾರಿ, ಬಿಸ್ಕೆಟ್, ಹಾಲು ಎಲ್ಲಾ ತೆಗೆದುಕೊಂಡೆವು. ನಮ್ಮಲ್ಲಿ ಪೋರ್ಟೆಬಲ್ ಗ್ಯಾಸ್ ಸ್ಟೋವ್ ಇದ್ದುದರಿಂದ ನಮಗೆ ಬೇಕಾದಾಗ ಕಾಫಿ ಊಟ ಎಲ್ಲಾ ನಾವೇ ಮಾಡಿಕೊಳ್ಳುತ್ತಿದ್ದೆವು.
ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗವಾಗಿ ನಾವು ಮುಂದುವರೆದೆವು. ಸುಮಾರು 28 Km ದೂರ. ಆಗಲೇ ನಮಗೆ ಮಲೆನಾಡಿನ ಸೌಂದರ್ಯ ಗೋಚರವಾದದ್ದು. ಏರುದಾರಿಯ ಎರಡೂ ಪಕ್ಕದಲ್ಲೂ ಕಾಡಿನ ಸೊಬಗು, ಅಲ್ಲಲ್ಲಿ ಸಿಗುವ ಪುಟ್ಟ ಜಲಪಾತಗಳು, ನಿರ್ಜನ ದಾರಿ ಎಲ್ಲಾ ಒಂದು ಬಗೆಯ ಬೇರೆಯೇ ಅನುಭವ ಕೊಡುತ್ತಿತ್ತು.

ರಸ್ತೆಯ ಎಡಕ್ಕೆ ಮುಳ್ಳಯ್ಯನ ಗಿರಿಗೆ ದಾರಿ, ಎಂಬ ಕೈ ಫಲಕ ಕಾಣಿಸಿತು. ಆಲ್ಲಿಂದ ಮುಂದೆ ತುಂಬಾ ಏರು ದಾರಿ. ರಸ್ತೆಯು ತುಂಬಾ ಕೆಟ್ಟು ಹೋಗಿತ್ತು, ಅದಕ್ಕೆ ಡಾಮರು ಸೋಕಿಸದೆ ಯಾವ ಕಾಲವಾಗಿತ್ತೋ ಏನೋ? ಅಲ್ಲಿ ಯಾವ ವಾಹನಗಳೂ ಸಂಚರಿಸುತ್ತಿರಲಿಲ್ಲ.

ಸ್ವಲ್ಪ ದೂರದಲ್ಲಿ ದಾರಿ ಕವಲೊಡೆಯುತ್ತದೆ, ಒಂದುದಾರಿ ಕೆಮ್ಮಣ್ಣುಗುಂಡಿಗೆ, ಇನ್ನೊಂದು ಬಾಬಾ ಬುಡನ್ ಗಿರಿಗೆ. ನಾವು ಬಾಬಾ ಬುಡನ್ ಗಿರಿ ನೋಡಲು ಮುಂದುವರೆದೆವು. ಅಲ್ಲಿಗೆ ತಲುಪಿದಾಗ ನಮಗೆ ಪೋಲಿಸರಿಂದ ಸ್ವಾಗತ! ಎಲ್ಲಿಂದ ಬಂದದ್ದು? ಯಾಕೆ ಬಂದಿರಿ? ಎಂದೆಲ್ಲ ಕುಶಲ ವಿಚಾರಿಸಿದರು. ಆಲ್ಲಿಂದ ಮುಂದೆ ಬೆಟ್ಟದ ತುದಿ ತಲಪಿದೆವು. ಆಹಾ ಎಷ್ಟು ಸುಂದರ ಸ್ಥಳ. ಬಾಬಾಬುಡನ್ ಗಿರಿ ಶ್ರೇಣಿಯು ಪಶ್ಚಿಮ ಘಟ್ಟಗಳ ಚಂದ್ರ ಧ್ರೋಣ ಪರ್ವತ ಮಾಲೆಯಲ್ಲಿ ಇದೆ. ಸಮುದ್ರ ಪಾತಳಿಯಿಂದ ಸುಮಾರು 1434 ಮೀಟರು ಎತ್ತರದಲ್ಲಿದ್ದು ಕೆಮ್ಮಣ್ಣುಗುಂಡಿ ಗಿರಿಧಾಮವು ಕರ್ನಾಟಕದ ಊಟಿ ಎಂದು ಕರೆಸಿಕೊಳ್ಳುತ್ತದೆ. ಹಿಂದೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಿಯವಾದ ಬೇಸಿಗೆ ತಾಣವಾಗಿತ್ತು.
ಇಲ್ಲಿಂದ ತುಂಬಾ ದೊರದವರೆಗೆ ಹಲವು ಹಳ್ಳಿಗಳು ಹೊಲ ಗದ್ದೆಗಳು ಕಾಣುತ್ತವೆ. ಇಲ್ಲಿ ಆರಾಮವಾಗಿ ನೋಡಲು ವ್ಯೂ ಪಾಯಿಂಟ್ ನಿರ್ಮಿಸಿದ್ದಾರೆ, ಅನತಿ ದೊರದಲ್ಲಿ ಕಡಿದಾದ ಒಂದು ಪರ್ವತವಿದೆ ಮತ್ತು ಸ್ವಲ್ಪ ಕೆಳಗೆ ಇಳಿದರೆ ಮಾಣಿಕ್ಯಧಾರಾ ಜಲಪಾತ ಕಾಣಿಸುತ್ತದೆ.

ಆದರೆ ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ಅಲ್ಲಿ ತುಂಬಾ ಜನ ಸ್ನಾನ ಮಾಡುತಿದ್ದರು, ದೂರದಿಂದಲೇ ನೋಡಿ ಹಿಂತಿರುಗಿದೆವು. ಮತ್ತೆ ಬಂದ ದಾರಿಯಲ್ಲೇ ವಾಪಸು ಬಾಬಾ ಬುಡನ್ ಗುಹೆ ನೋಡಲು ಹೋದೆವು. ಫೋಟೋ ತೆಗೆಯಲು ಅವಕಾಶ ಇರಲಿಲ್ಲ. ಒಳಗೆ ಹೋಗಿ ದತ್ತ ಗುರು ಮತ್ತು ಬಾಬಾ ನ ತೀರ್ಥ ಪಡೆದು ಹೊರ ಬಂದೆವು. ತುಂಬಾ ಚಳಿ, ತುಂತುರು ಮಳೆ. ಈಗ ಕೆಮ್ಮಣ್ಣು ಗುಂಡಿಗೆ ಪ್ರಯಾಣ. ಅದೇ ಕೆಟ್ಟ ದಾರಿ, ಆದರೆ ಹೋಗಲೇ ಬೇಕಲ್ಲ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋದೆವು.

ಕೆಮ್ಮಣ್ಣು ಗುಂಡಿ ಬಂದೇ ಬಿಟ್ಟಿತು. ನಮಗೆ ಕಾದಿರಿಸಲಾದ ತುಂಗಭದ್ರಾ ಕಾಟೇಜ್ ನಲ್ಲಿ ಇಳಿದುಕೊಂಡೆವು. ಕಾಟೇಜ್ ಹಳೆಯ ಕಟ್ಟಡ, ಮೇಲೆ ಟಿನ್ ಹಾಕಿದ ಮಾಡು, ಗೋಡೆಯ ತುಂಬಾ ಮಳೆ ನೀರು ಇಳಿದು, ರಚಿಸಿದ ಭೂಪಟಗಳು! ಹೊರಗಡೆ ನಟ್ಟು ಬೆಳೆಸಿದ ಹೂಗಿಡಗಳು, ಪಕ್ಕದಲ್ಲೇ ಒಂದು ಅನುಪಯುಕ್ತ, ಮುರಿದ ಕಾಟೇಜು! ಅಂತೂ ಅದರಲ್ಲಿ ಸ್ವಲ್ಪ ವಿಶ್ರಮಿಸಿ, ಬೆಟ್ಟದ ಮೇಲೆ ಇದ್ದ ರಾಜಭವನ ಗೆಸ್ಟ್ ಹೌಸ್ ನೋಡಲು ಹೋದೆವು. ಅಲ್ಲಿ ಒಳ್ಳೆಯ ಹೂ ತೋಟ ಬೆಳೆಸಿದ್ದಾರೆ. ರಾತ್ರಿ ಸ್ವಲ್ಪ ಮಳೆ ಬಂತು, ಅದು ಟಿನ್ ಮಾಡಿನ ಮೇಲೆ ಬೀಳುವಾಗ ನಾವು ಹೆಬ್ಬೆ ಜಲಪಾತದ ಹತ್ತಿರವೇ ಇದ್ದೇವೆ ಎನ್ನುವ ಅನುಭವ. ಒಂದೆರಡು ತೊಟ್ಟು ನೀರು ಮೈ ಮೇಲೆ ಬಿತ್ತು. ಅಷ್ಟಕ್ಕೇ ಮಳೆ ನಿಂತಿತು, ಬೆಳಿಗ್ಗೆ ಧಭ ಧಭ ಶಬ್ದ! ಕೋತಿಗಳು ನಮ್ಮನ್ನು ಎಬ್ಬಿಸಲು ಪ್ರಯತ್ನಿಸುತ್ತಿವೆ. 'ಸಾಕು ಮಲಗಿದ್ದು, ಇನ್ನು ಹೊರಡಿ ಹೆಬ್ಬೆ ನೋಡಲು' ಎಂದು ಹೇಳುತ್ತಿವೆ.
ಅಂತೂ ಬೆಳಗಿನ ಉಪಹಾರ ಮುಗಿಸಿ ಬುತ್ತಿ ಕಟ್ಟಿಕೊಂಡು ಬೆನ್ನ ಮೇಲೆ ಹೊರೆ ಏರಿಸಿ ಚಾರಣ ಹೊರಟೆವು. ಇಲ್ಲಿಂದ ಹೆಬ್ಬೆ ಜಲಪಾತ ಸುಮಾರು 8 Km ದೂರದಲ್ಲಿ ಇದೆ. ಅಲ್ಲಿಗೆ ಹೋಗಲು ಜೀಪುಗಳು ಕಾದಿರುತ್ತವೆ. ಹೋಗಿಬರಲು 750 - 1250 ರು. ಕೇಳುತ್ತಾರೆ. ನಾವು ಚಾರಣ ಮಾಡಲು ಬಂದವರು, ನಮಗೆ ಅದೇ ಇಷ್ಟ, ಹಾಗಾಗಿ ನಡೆಯಲು ಆರಂಭಿಸಿದೆವು. ಅಷ್ಟೇನೂ ಕಷ್ಟಕರ ದಾರಿಯಲ್ಲ. ಸುಮಾರು ದೂರದ ವರೆಗೆ ಮಣ್ಣಿನ ರಸ್ತೆ ಇದೆ. ಪಕ್ಕದಲ್ಲೇ ಹಿಂದಿನ ಕಾಲದ ಕಬ್ಬಿಣ ಗಣಿಗಾರಿಕೆ ಮಾಡಿದ ಜಾಗಗಳು ನೋಡ ಸಿಗುತ್ತವೆ.

ಬೆಳಗಿನ ಎಳೆ ಬಿಸಿಲು, ಹಿತವಾದ ತಂಗಾಳಿ ಆಯಾಸವಿಲ್ಲದೆ ಮುಂದೆ ಹೋಗಲು ಸಹಾಯ ಮಾಡುತಿತ್ತು. ನಾವು ಕಂಡ ಕಂಡ ಕಾಡು ಹೂವುಗಳ ಫೋಟೋ ತೆಗೆಯುತಿದ್ದೆವು, ದೂರ ದೂರದ ದೃಶ್ಯಗಳನ್ನು ನಮ್ಮ ಕೆಮರಾದಲ್ಲಿ ಸೆರೆ ಹಿಡಿಯುತಿದ್ದೆವು. ಅರು ಮತ್ತು ಶ್ರುತಿ ಪರಸ್ಪರ ಕೀಟಲೆ ಮಾಡುತ್ತಾ ನಮಗೆ ಮನರಂಜನೆ ಮಾಡುತಿದ್ದರು.

ಅಲ್ಲೊಂದು ಕಡೆ ರಸ್ತೆ ತಿರುವು ಪಡೆಯುತ್ತದೆ. ಅಲ್ಲಿ ಒಬ್ಬ ಹುಡುಗ ನಿಂತಿದ್ದ, ಅವನು ಬಂದು, ಸಾರ್ ಇಲ್ಲೇ ಕೆಳಗಿಳಿದು ಹೋದರೆ ನಿಮಗೆ ತುಂಬಾ ಶಾರ್ಟ್ ಕಟ್ ಆಗುತ್ತದೆ ಎಂದನು, ಅವನಿಗೆ ಥ್ಯಾಂಕ್ಸ್ ಹೇಳಿ ನಮ್ಮಲ್ಲಿದ್ದ ಕೆಲವು ಚಾಕ್ಲೆಟ್ ಕೊಟ್ಟು ಮುಂದೆ ಹೋದೆವು, ಹೌದು ಅವನು ಹೇಳಿದ್ದು ನಿಜ, ಸುಮಾರು 1Km. ಕಡಿಮೆ ಆಗುತ್ತದೆ. ಹಾಗೆಯೇ ಮುಂದುವರೆದಾಗ ನಮಗೆ ಹೆಬ್ಬೆ ಜಲಪಾತದ ದೂರ ನೋಟ ಕಾಣುತ್ತದೆ.

ಅಲ್ಲಿ ಸ್ವಲ್ಪ ಹೊತ್ತು ನಿಂತು ಸುದಾರಿಸಿಕೊಂಡೆವು. ಫೋಟೋ, ವಿಡಿಯೋ ಎಲ್ಲಾ ಆಯಿತು. ಅಷ್ಟರಲ್ಲಿ ಅಲ್ಲಿಗೆ ನಮ್ಮ ಹಾಗೆ ಚಾರಣ ಮಾಡುವ ಹುಡುಗರ ಗುಂಪು ಒಂದು ಬಂದಿತು. ಅವರು ಅಲ್ಲೇ ಪಕ್ಕದಲ್ಲಿದ್ದ ತುಂಬಾ ಇಳಿಜಾರಾಗಿರುವ ಕಾಡು ದಾರಿಯಲ್ಲಿ ಇಳಿದರು. ನಮಗೂ ಅದರಲ್ಲಿ ಹೋಗುವ ಆಸೆ, ಆದರೆ ಶ್ರುತಿಗೆ ಭಯ, ಕಡೆಗೆ ಆ ಹುಡುಗರಲ್ಲಿ ರಿಕ್ವೆಸ್ಟ್ ಮಾಡಿದೆವು-- ದಾರಿ ಸರಿ ಇದ್ದರೆ ಆಲ್ಲಿಂದ ಒಂದು ಶಿಳ್ಳು ಹಾಕಿರಿ ಆಗ ನಾವು ಸಹಾ ಇಳಿದು ಬರುತ್ತೇವೆ ಎಂತ. ಹಾಗೆ ಸ್ವಲ್ಪ ಹೊತ್ತಲ್ಲಿ ಶಿಳ್ಳು ಕೇಳಿಸಿತು, ನಾವೂ ಅದರಲ್ಲಿ ಇಳಿದೆವು. ತುಂಬಾ ಇಳಿಜಾರು, ಅಲ್ಲಲ್ಲಿ ಸಿಗುವ ಮರ, ಬಳ್ಳಿ ಹಿಡಿದುಕೊಂಡು ಇಳಿದೆವು. ಶ್ರುತಿ 2-3 ಬಾರಿ ಜಾರಿದಳು, ಆದರೆ ಅರವಿಂದನ ರಕ್ಷಣೆಯಲ್ಲಿ ಅವಳಿಗೇನೂ ತೊಂದರೆ ಆಗಲಿಲ್ಲ. ಈ ಸಾಹಸದಿಂದ ನಮಗೆ ಸುಮಾರು 1/2 Km. ಲಾಭವಾಯಿತು. ಮತ್ತೆ ಸ್ವಲ್ಪ ರೆಸ್ಟು.

ಮುಂದೆ ಹೋದಂತೆಲ್ಲ ಕಾಫಿ ತೋಟಗಳು, ಯಾಲಕ್ಕಿ ತೋಟ, ವೆನಿಲ್ಲಾ ಬಳ್ಳಿಗಳು, ಕಿತ್ತಳೆ ಮರಗಳು, ಅಲ್ಲಲ್ಲಿ ಸಣ್ಣ ಮನೆಗಳು ಎಲ್ಲಾ ಸಿಗುತ್ತವೆ. ಕೊನೆಗೆ ದೊಡ್ಡದೊಂದು ಎಸ್ಟೇಟ್ ನ ಎದುರಿನಿಂದ ಕೆಳಗಿಳಿದರೆ ನೀರಿನ ಪುಟ್ಟ ಹೊಳೆ ಎದುರಾಗುತ್ತದೆ. ಅದನ್ನು ನಡೆದೇ ದಾಟಬೇಕು, ಮತ್ತೊಮ್ಮೆ ಅದೇ ಹೊಳೆ ದಾಟಬೇಕಾಗುತ್ತದೆ. ಆಮೇಲೆ ಅದರ ದಂಡೆಯಲ್ಲೇ ನಡೆದರೆ ನಮಗೆ ನೆಟ್ಟಗೆ ಹೆಬ್ಬೆ ಜಲಪಾತದ ತಳಕ್ಕೆತಲುಪಬಹುದು.

ಅಲ್ಲಿಗೆ ಹೋಗುವಾಗಲೇ ನೀರ ಹನಿಗಳ ಸಿಂಚನವಾಗುತ್ತದೆ. ಮೈ ಎಲ್ಲಾ ನವಿರೇಳುತ್ತದೆ. ಅಲ್ಲಿ ತುಂಬಾ ಜನ ಸ್ನಾನ ಮಾಡುತ್ತಿದ್ದರು. ನಾನು ಮತ್ತು ವಿಷು ಇಬ್ಬರೂ ನೀರಿಗೆ ಇಳಿದೇಬಿಟ್ಟೆವು. ನನಗಂತೂ ಜಲಪಾತದ ನೇರ ಕೆಳಗಡೆ ಮೀಯುವ ಪ್ರಥಮ ಅನುಭವ! ಆಹಾ ಏನು ಖುಷಿ, ಆ ಥಂಡಿ, ಆ ಭೋರ್ಗರೆಯುವ ಶಬ್ದ ನಿಜವಾಗಿಯೂ ಅದನ್ನು ಅನುಭವಿಸಿಯೇ ತಿಳಿಯಬೇಕು. ನೀರಾಟ ಆದ ಮೇಲೆ ಸ್ವಲ್ಪ ಈಕಡೆ ಬಂದು ಹೊಳೆಯ ಮಧ್ಯದಲ್ಲಿರುವ ಬಂಡೆಯಲ್ಲಿ ಕುಳಿತು ವಿಶ್ರಮಿಸಿ ತಿಂಡಿ ತಿಂದೆವು. ನಿಂಬೆ ಪಾನಕ ಮಾಡಿ ದಾಹ ನೀಗಿಸಿಕೊಂಡೆವು. ಆಯಾಸ ಎಲ್ಲಾ ಹೋಯಿತು.

ಇಲ್ಲಿಂದ ಹೆಬ್ಬೆ ಜಲಪಾತದ ಮೇಲಿನ ಭಾಗ ಸಹಾ ಕಾಣುತ್ತದೆ. ಇಡೀ ಜಲಪಾತವು ಸುಮಾರು 168 ಮೀಟರು ಎತ್ತರವಿದ್ದು 2 ಮಜಲುಗಳಾಗಿ ಧುಮುಕುತ್ತಿದೆ.

ಇನ್ನೇನು ಹೊರಡುವ ಹೊತ್ತಾಯಿತು, ನಿಧಾನವಾಗಿ ಹೊರಟೆವು. ಈಗ ಏರು ದಾರಿ ಅಲ್ಲಲ್ಲಿ ನಿಂತು ಸಾಗುತ್ತ ಹೋದಂತೆ ಕಟ್ಟಲಾಗುತ್ತ ಬಂತು. ನಮ್ಮಲ್ಲಿ ಟಾರ್ಚು ಲೈಟು ಇರಲಿಲ್ಲ. ಸುಮಾರು 2 Km. ದೂರವನ್ನು ನಾವು ಮೊಬೈಲ್ ನಲ್ಲಿರುವ ಪುಟ್ಟ ಟಾರ್ಚ್ ಬೆಳಕಿನಲ್ಲಿ ನಡೆದು ನಮ್ಮ ಕಾಟೇಜ್ ತಲುಪಿದೆವು. ಎಲ್ಲರಿಗೂ ತುಂಬಾ ಸುಸ್ತು. ರಾತ್ರಿ ಊಟ ಮಾಡಿ ಮಲಗಿದವರಿಗೆ ಒಳ್ಳೆಯ ನಿದ್ರೆ. ಬೆಳಗ್ಗೆ ಎದ್ದು ಕಾಫಿ ತಿಂಡಿ ತಿಂದು ವಾಪಸು ಹೊರಟೆವು. ಈ ಸಲ ಬೇರೆಯೇ ದಾರಿಯಲ್ಲಿ ಹೊರಟೆವು. ಕೆಮ್ಮಣ್ಣುಗುಂಡಿ ಲಿಂಗದ ಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ತಲುಪಿದೆವು. ಈ ದಾರಿ ಸ್ವಲ್ಪ ದೂರ, 54 Km. ಆಗುತ್ತದೆ. ಆದರೆ ರಸ್ತೆ ಚೆನ್ನಾಗಿದೆ. ಬರುವಾಗ ದೂರದಲ್ಲಿ ಕಲ್ಹತ್ತಿ ಜಲಪಾತ ನೋಡಿದೆವು. ಮುಂದೆ ಬೇಲೂರು ಚನ್ನಕೇಶವ ದೇವಾಲಯ ನೋಡಿಕೊಂಡು ಆಮೇಲೆ ಶ್ರವಣಬೆಳುಗೊಳ ಸಹಾ ನೋಡಿಕೊಂಡು ಬೆಂಗಳೂರಿಗೆ ಬಂದೆವು.

ರಸ್ತೆಯ ಎಡಕ್ಕೆ ಮುಳ್ಳಯ್ಯನ ಗಿರಿಗೆ ದಾರಿ, ಎಂಬ ಕೈ ಫಲಕ ಕಾಣಿಸಿತು. ಆಲ್ಲಿಂದ ಮುಂದೆ ತುಂಬಾ ಏರು ದಾರಿ. ರಸ್ತೆಯು ತುಂಬಾ ಕೆಟ್ಟು ಹೋಗಿತ್ತು, ಅದಕ್ಕೆ ಡಾಮರು ಸೋಕಿಸದೆ ಯಾವ ಕಾಲವಾಗಿತ್ತೋ ಏನೋ? ಅಲ್ಲಿ ಯಾವ ವಾಹನಗಳೂ ಸಂಚರಿಸುತ್ತಿರಲಿಲ್ಲ.

ಸ್ವಲ್ಪ ದೂರದಲ್ಲಿ ದಾರಿ ಕವಲೊಡೆಯುತ್ತದೆ, ಒಂದುದಾರಿ ಕೆಮ್ಮಣ್ಣುಗುಂಡಿಗೆ, ಇನ್ನೊಂದು ಬಾಬಾ ಬುಡನ್ ಗಿರಿಗೆ. ನಾವು ಬಾಬಾ ಬುಡನ್ ಗಿರಿ ನೋಡಲು ಮುಂದುವರೆದೆವು. ಅಲ್ಲಿಗೆ ತಲುಪಿದಾಗ ನಮಗೆ ಪೋಲಿಸರಿಂದ ಸ್ವಾಗತ! ಎಲ್ಲಿಂದ ಬಂದದ್ದು? ಯಾಕೆ ಬಂದಿರಿ? ಎಂದೆಲ್ಲ ಕುಶಲ ವಿಚಾರಿಸಿದರು. ಆಲ್ಲಿಂದ ಮುಂದೆ ಬೆಟ್ಟದ ತುದಿ ತಲಪಿದೆವು. ಆಹಾ ಎಷ್ಟು ಸುಂದರ ಸ್ಥಳ. ಬಾಬಾಬುಡನ್ ಗಿರಿ ಶ್ರೇಣಿಯು ಪಶ್ಚಿಮ ಘಟ್ಟಗಳ ಚಂದ್ರ ಧ್ರೋಣ ಪರ್ವತ ಮಾಲೆಯಲ್ಲಿ ಇದೆ. ಸಮುದ್ರ ಪಾತಳಿಯಿಂದ ಸುಮಾರು 1434 ಮೀಟರು ಎತ್ತರದಲ್ಲಿದ್ದು ಕೆಮ್ಮಣ್ಣುಗುಂಡಿ ಗಿರಿಧಾಮವು ಕರ್ನಾಟಕದ ಊಟಿ ಎಂದು ಕರೆಸಿಕೊಳ್ಳುತ್ತದೆ. ಹಿಂದೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಿಯವಾದ ಬೇಸಿಗೆ ತಾಣವಾಗಿತ್ತು.
![]() |

ಆದರೆ ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ಅಲ್ಲಿ ತುಂಬಾ ಜನ ಸ್ನಾನ ಮಾಡುತಿದ್ದರು, ದೂರದಿಂದಲೇ ನೋಡಿ ಹಿಂತಿರುಗಿದೆವು. ಮತ್ತೆ ಬಂದ ದಾರಿಯಲ್ಲೇ ವಾಪಸು ಬಾಬಾ ಬುಡನ್ ಗುಹೆ ನೋಡಲು ಹೋದೆವು. ಫೋಟೋ ತೆಗೆಯಲು ಅವಕಾಶ ಇರಲಿಲ್ಲ. ಒಳಗೆ ಹೋಗಿ ದತ್ತ ಗುರು ಮತ್ತು ಬಾಬಾ ನ ತೀರ್ಥ ಪಡೆದು ಹೊರ ಬಂದೆವು. ತುಂಬಾ ಚಳಿ, ತುಂತುರು ಮಳೆ. ಈಗ ಕೆಮ್ಮಣ್ಣು ಗುಂಡಿಗೆ ಪ್ರಯಾಣ. ಅದೇ ಕೆಟ್ಟ ದಾರಿ, ಆದರೆ ಹೋಗಲೇ ಬೇಕಲ್ಲ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋದೆವು.

ಕೆಮ್ಮಣ್ಣು ಗುಂಡಿ ಬಂದೇ ಬಿಟ್ಟಿತು. ನಮಗೆ ಕಾದಿರಿಸಲಾದ ತುಂಗಭದ್ರಾ ಕಾಟೇಜ್ ನಲ್ಲಿ ಇಳಿದುಕೊಂಡೆವು. ಕಾಟೇಜ್ ಹಳೆಯ ಕಟ್ಟಡ, ಮೇಲೆ ಟಿನ್ ಹಾಕಿದ ಮಾಡು, ಗೋಡೆಯ ತುಂಬಾ ಮಳೆ ನೀರು ಇಳಿದು, ರಚಿಸಿದ ಭೂಪಟಗಳು! ಹೊರಗಡೆ ನಟ್ಟು ಬೆಳೆಸಿದ ಹೂಗಿಡಗಳು, ಪಕ್ಕದಲ್ಲೇ ಒಂದು ಅನುಪಯುಕ್ತ, ಮುರಿದ ಕಾಟೇಜು! ಅಂತೂ ಅದರಲ್ಲಿ ಸ್ವಲ್ಪ ವಿಶ್ರಮಿಸಿ, ಬೆಟ್ಟದ ಮೇಲೆ ಇದ್ದ ರಾಜಭವನ ಗೆಸ್ಟ್ ಹೌಸ್ ನೋಡಲು ಹೋದೆವು. ಅಲ್ಲಿ ಒಳ್ಳೆಯ ಹೂ ತೋಟ ಬೆಳೆಸಿದ್ದಾರೆ. ರಾತ್ರಿ ಸ್ವಲ್ಪ ಮಳೆ ಬಂತು, ಅದು ಟಿನ್ ಮಾಡಿನ ಮೇಲೆ ಬೀಳುವಾಗ ನಾವು ಹೆಬ್ಬೆ ಜಲಪಾತದ ಹತ್ತಿರವೇ ಇದ್ದೇವೆ ಎನ್ನುವ ಅನುಭವ. ಒಂದೆರಡು ತೊಟ್ಟು ನೀರು ಮೈ ಮೇಲೆ ಬಿತ್ತು. ಅಷ್ಟಕ್ಕೇ ಮಳೆ ನಿಂತಿತು, ಬೆಳಿಗ್ಗೆ ಧಭ ಧಭ ಶಬ್ದ! ಕೋತಿಗಳು ನಮ್ಮನ್ನು ಎಬ್ಬಿಸಲು ಪ್ರಯತ್ನಿಸುತ್ತಿವೆ. 'ಸಾಕು ಮಲಗಿದ್ದು, ಇನ್ನು ಹೊರಡಿ ಹೆಬ್ಬೆ ನೋಡಲು' ಎಂದು ಹೇಳುತ್ತಿವೆ.
ಅಂತೂ ಬೆಳಗಿನ ಉಪಹಾರ ಮುಗಿಸಿ ಬುತ್ತಿ ಕಟ್ಟಿಕೊಂಡು ಬೆನ್ನ ಮೇಲೆ ಹೊರೆ ಏರಿಸಿ ಚಾರಣ ಹೊರಟೆವು. ಇಲ್ಲಿಂದ ಹೆಬ್ಬೆ ಜಲಪಾತ ಸುಮಾರು 8 Km ದೂರದಲ್ಲಿ ಇದೆ. ಅಲ್ಲಿಗೆ ಹೋಗಲು ಜೀಪುಗಳು ಕಾದಿರುತ್ತವೆ. ಹೋಗಿಬರಲು 750 - 1250 ರು. ಕೇಳುತ್ತಾರೆ. ನಾವು ಚಾರಣ ಮಾಡಲು ಬಂದವರು, ನಮಗೆ ಅದೇ ಇಷ್ಟ, ಹಾಗಾಗಿ ನಡೆಯಲು ಆರಂಭಿಸಿದೆವು. ಅಷ್ಟೇನೂ ಕಷ್ಟಕರ ದಾರಿಯಲ್ಲ. ಸುಮಾರು ದೂರದ ವರೆಗೆ ಮಣ್ಣಿನ ರಸ್ತೆ ಇದೆ. ಪಕ್ಕದಲ್ಲೇ ಹಿಂದಿನ ಕಾಲದ ಕಬ್ಬಿಣ ಗಣಿಗಾರಿಕೆ ಮಾಡಿದ ಜಾಗಗಳು ನೋಡ ಸಿಗುತ್ತವೆ.

ಬೆಳಗಿನ ಎಳೆ ಬಿಸಿಲು, ಹಿತವಾದ ತಂಗಾಳಿ ಆಯಾಸವಿಲ್ಲದೆ ಮುಂದೆ ಹೋಗಲು ಸಹಾಯ ಮಾಡುತಿತ್ತು. ನಾವು ಕಂಡ ಕಂಡ ಕಾಡು ಹೂವುಗಳ ಫೋಟೋ ತೆಗೆಯುತಿದ್ದೆವು, ದೂರ ದೂರದ ದೃಶ್ಯಗಳನ್ನು ನಮ್ಮ ಕೆಮರಾದಲ್ಲಿ ಸೆರೆ ಹಿಡಿಯುತಿದ್ದೆವು. ಅರು ಮತ್ತು ಶ್ರುತಿ ಪರಸ್ಪರ ಕೀಟಲೆ ಮಾಡುತ್ತಾ ನಮಗೆ ಮನರಂಜನೆ ಮಾಡುತಿದ್ದರು.

ಅಲ್ಲೊಂದು ಕಡೆ ರಸ್ತೆ ತಿರುವು ಪಡೆಯುತ್ತದೆ. ಅಲ್ಲಿ ಒಬ್ಬ ಹುಡುಗ ನಿಂತಿದ್ದ, ಅವನು ಬಂದು, ಸಾರ್ ಇಲ್ಲೇ ಕೆಳಗಿಳಿದು ಹೋದರೆ ನಿಮಗೆ ತುಂಬಾ ಶಾರ್ಟ್ ಕಟ್ ಆಗುತ್ತದೆ ಎಂದನು, ಅವನಿಗೆ ಥ್ಯಾಂಕ್ಸ್ ಹೇಳಿ ನಮ್ಮಲ್ಲಿದ್ದ ಕೆಲವು ಚಾಕ್ಲೆಟ್ ಕೊಟ್ಟು ಮುಂದೆ ಹೋದೆವು, ಹೌದು ಅವನು ಹೇಳಿದ್ದು ನಿಜ, ಸುಮಾರು 1Km. ಕಡಿಮೆ ಆಗುತ್ತದೆ. ಹಾಗೆಯೇ ಮುಂದುವರೆದಾಗ ನಮಗೆ ಹೆಬ್ಬೆ ಜಲಪಾತದ ದೂರ ನೋಟ ಕಾಣುತ್ತದೆ.

ಅಲ್ಲಿ ಸ್ವಲ್ಪ ಹೊತ್ತು ನಿಂತು ಸುದಾರಿಸಿಕೊಂಡೆವು. ಫೋಟೋ, ವಿಡಿಯೋ ಎಲ್ಲಾ ಆಯಿತು. ಅಷ್ಟರಲ್ಲಿ ಅಲ್ಲಿಗೆ ನಮ್ಮ ಹಾಗೆ ಚಾರಣ ಮಾಡುವ ಹುಡುಗರ ಗುಂಪು ಒಂದು ಬಂದಿತು. ಅವರು ಅಲ್ಲೇ ಪಕ್ಕದಲ್ಲಿದ್ದ ತುಂಬಾ ಇಳಿಜಾರಾಗಿರುವ ಕಾಡು ದಾರಿಯಲ್ಲಿ ಇಳಿದರು. ನಮಗೂ ಅದರಲ್ಲಿ ಹೋಗುವ ಆಸೆ, ಆದರೆ ಶ್ರುತಿಗೆ ಭಯ, ಕಡೆಗೆ ಆ ಹುಡುಗರಲ್ಲಿ ರಿಕ್ವೆಸ್ಟ್ ಮಾಡಿದೆವು-- ದಾರಿ ಸರಿ ಇದ್ದರೆ ಆಲ್ಲಿಂದ ಒಂದು ಶಿಳ್ಳು ಹಾಕಿರಿ ಆಗ ನಾವು ಸಹಾ ಇಳಿದು ಬರುತ್ತೇವೆ ಎಂತ. ಹಾಗೆ ಸ್ವಲ್ಪ ಹೊತ್ತಲ್ಲಿ ಶಿಳ್ಳು ಕೇಳಿಸಿತು, ನಾವೂ ಅದರಲ್ಲಿ ಇಳಿದೆವು. ತುಂಬಾ ಇಳಿಜಾರು, ಅಲ್ಲಲ್ಲಿ ಸಿಗುವ ಮರ, ಬಳ್ಳಿ ಹಿಡಿದುಕೊಂಡು ಇಳಿದೆವು. ಶ್ರುತಿ 2-3 ಬಾರಿ ಜಾರಿದಳು, ಆದರೆ ಅರವಿಂದನ ರಕ್ಷಣೆಯಲ್ಲಿ ಅವಳಿಗೇನೂ ತೊಂದರೆ ಆಗಲಿಲ್ಲ. ಈ ಸಾಹಸದಿಂದ ನಮಗೆ ಸುಮಾರು 1/2 Km. ಲಾಭವಾಯಿತು. ಮತ್ತೆ ಸ್ವಲ್ಪ ರೆಸ್ಟು.

ಮುಂದೆ ಹೋದಂತೆಲ್ಲ ಕಾಫಿ ತೋಟಗಳು, ಯಾಲಕ್ಕಿ ತೋಟ, ವೆನಿಲ್ಲಾ ಬಳ್ಳಿಗಳು, ಕಿತ್ತಳೆ ಮರಗಳು, ಅಲ್ಲಲ್ಲಿ ಸಣ್ಣ ಮನೆಗಳು ಎಲ್ಲಾ ಸಿಗುತ್ತವೆ. ಕೊನೆಗೆ ದೊಡ್ಡದೊಂದು ಎಸ್ಟೇಟ್ ನ ಎದುರಿನಿಂದ ಕೆಳಗಿಳಿದರೆ ನೀರಿನ ಪುಟ್ಟ ಹೊಳೆ ಎದುರಾಗುತ್ತದೆ. ಅದನ್ನು ನಡೆದೇ ದಾಟಬೇಕು, ಮತ್ತೊಮ್ಮೆ ಅದೇ ಹೊಳೆ ದಾಟಬೇಕಾಗುತ್ತದೆ. ಆಮೇಲೆ ಅದರ ದಂಡೆಯಲ್ಲೇ ನಡೆದರೆ ನಮಗೆ ನೆಟ್ಟಗೆ ಹೆಬ್ಬೆ ಜಲಪಾತದ ತಳಕ್ಕೆತಲುಪಬಹುದು.

ಅಲ್ಲಿಗೆ ಹೋಗುವಾಗಲೇ ನೀರ ಹನಿಗಳ ಸಿಂಚನವಾಗುತ್ತದೆ. ಮೈ ಎಲ್ಲಾ ನವಿರೇಳುತ್ತದೆ. ಅಲ್ಲಿ ತುಂಬಾ ಜನ ಸ್ನಾನ ಮಾಡುತ್ತಿದ್ದರು. ನಾನು ಮತ್ತು ವಿಷು ಇಬ್ಬರೂ ನೀರಿಗೆ ಇಳಿದೇಬಿಟ್ಟೆವು. ನನಗಂತೂ ಜಲಪಾತದ ನೇರ ಕೆಳಗಡೆ ಮೀಯುವ ಪ್ರಥಮ ಅನುಭವ! ಆಹಾ ಏನು ಖುಷಿ, ಆ ಥಂಡಿ, ಆ ಭೋರ್ಗರೆಯುವ ಶಬ್ದ ನಿಜವಾಗಿಯೂ ಅದನ್ನು ಅನುಭವಿಸಿಯೇ ತಿಳಿಯಬೇಕು. ನೀರಾಟ ಆದ ಮೇಲೆ ಸ್ವಲ್ಪ ಈಕಡೆ ಬಂದು ಹೊಳೆಯ ಮಧ್ಯದಲ್ಲಿರುವ ಬಂಡೆಯಲ್ಲಿ ಕುಳಿತು ವಿಶ್ರಮಿಸಿ ತಿಂಡಿ ತಿಂದೆವು. ನಿಂಬೆ ಪಾನಕ ಮಾಡಿ ದಾಹ ನೀಗಿಸಿಕೊಂಡೆವು. ಆಯಾಸ ಎಲ್ಲಾ ಹೋಯಿತು.

ಇಲ್ಲಿಂದ ಹೆಬ್ಬೆ ಜಲಪಾತದ ಮೇಲಿನ ಭಾಗ ಸಹಾ ಕಾಣುತ್ತದೆ. ಇಡೀ ಜಲಪಾತವು ಸುಮಾರು 168 ಮೀಟರು ಎತ್ತರವಿದ್ದು 2 ಮಜಲುಗಳಾಗಿ ಧುಮುಕುತ್ತಿದೆ.

ಇನ್ನೇನು ಹೊರಡುವ ಹೊತ್ತಾಯಿತು, ನಿಧಾನವಾಗಿ ಹೊರಟೆವು. ಈಗ ಏರು ದಾರಿ ಅಲ್ಲಲ್ಲಿ ನಿಂತು ಸಾಗುತ್ತ ಹೋದಂತೆ ಕಟ್ಟಲಾಗುತ್ತ ಬಂತು. ನಮ್ಮಲ್ಲಿ ಟಾರ್ಚು ಲೈಟು ಇರಲಿಲ್ಲ. ಸುಮಾರು 2 Km. ದೂರವನ್ನು ನಾವು ಮೊಬೈಲ್ ನಲ್ಲಿರುವ ಪುಟ್ಟ ಟಾರ್ಚ್ ಬೆಳಕಿನಲ್ಲಿ ನಡೆದು ನಮ್ಮ ಕಾಟೇಜ್ ತಲುಪಿದೆವು. ಎಲ್ಲರಿಗೂ ತುಂಬಾ ಸುಸ್ತು. ರಾತ್ರಿ ಊಟ ಮಾಡಿ ಮಲಗಿದವರಿಗೆ ಒಳ್ಳೆಯ ನಿದ್ರೆ. ಬೆಳಗ್ಗೆ ಎದ್ದು ಕಾಫಿ ತಿಂಡಿ ತಿಂದು ವಾಪಸು ಹೊರಟೆವು. ಈ ಸಲ ಬೇರೆಯೇ ದಾರಿಯಲ್ಲಿ ಹೊರಟೆವು. ಕೆಮ್ಮಣ್ಣುಗುಂಡಿ ಲಿಂಗದ ಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ತಲುಪಿದೆವು. ಈ ದಾರಿ ಸ್ವಲ್ಪ ದೂರ, 54 Km. ಆಗುತ್ತದೆ. ಆದರೆ ರಸ್ತೆ ಚೆನ್ನಾಗಿದೆ. ಬರುವಾಗ ದೂರದಲ್ಲಿ ಕಲ್ಹತ್ತಿ ಜಲಪಾತ ನೋಡಿದೆವು. ಮುಂದೆ ಬೇಲೂರು ಚನ್ನಕೇಶವ ದೇವಾಲಯ ನೋಡಿಕೊಂಡು ಆಮೇಲೆ ಶ್ರವಣಬೆಳುಗೊಳ ಸಹಾ ನೋಡಿಕೊಂಡು ಬೆಂಗಳೂರಿಗೆ ಬಂದೆವು.
No comments:
Post a Comment