ಬೇಕಲ ಕೋಟೆ
ಕಾಸರಗೋಡಿನಿಂದ ದಕ್ಷಿಣಕ್ಕೆ
ಸುಮಾರು 18 ಕಿ.ಮೀ.ದೂರದಲ್ಲಿ ಅರಬೀ ಸಮುದ್ರಕ್ಕೆ ಮೈಯೊಡ್ಡಿ ನಿಂತಿದೆ ಒಂದು ಪರಿಪೂರ್ಣ ಸುಂದರ,
ಐತಿಹಾಸಿಕ ಕೋಟೆ- ಬೇಕಲ ಕೋಟೆ. ಇಲ್ಲಿಗೆ ಭೇಟಿ ಕೊಡುವುದೆಂದರೆ ಒಂದು ಅನಿರ್ವಚನೀಯ ಅನುಭವ.
ಐತಿಹಾಸಿಕ ಅನುಭವಗಳೊಂದಿಗೆ ಅರಬೀ ಸಮುದ್ರದ ಆಹ್ಲಾದಕರ ನೋಟವನ್ನೂ ಅನುಭವಿಸಬಹುದು.ಈ ಕೋಟೆಯನ್ನು
ಇಕ್ಕೇರಿ ನಾಯಕರಲ್ಲಿ ಪ್ರಸಿದ್ಧನಾಗಿರುವ ಶಿವಪ್ಪನಾಯಕನು ಸುಮಾರು 1650 ನೇ ಇಸವಿಯಲ್ಲಿ
ಕಟ್ಟಿಸಿದನಂತೆ. ತುಳುನಾಡು ಎಂದು ಕರೆಸಿಕೊಳ್ಳುತಿದ್ದ ಪ್ರದೇಶದ ಒಂದು ಪ್ರಮುಖ ರಕ್ಷಣಾ ಕೋಟೆ
ಇದಾಗಿತ್ತು.
ಸ್ಥಳೀಯರು ಆಗ ಇದನ್ನು ದೇಕಲ
ಕೋಟೆ ಎಂದು ಕರೆಯುತಿದ್ದರು. ಇದನ್ನು ಕಟ್ಟಿ ಮುಗಿಸಿದಾಗ ಇದಕ್ಕೆ ಒಂದು ಹೆಸರು ಇಡಬೇಕಿತ್ತು.
ಹಲವಾರು ಹೆಸರು ಸೂಚಿತವಾದರೂ ಯಾವ ಹೆಸರೂ ನಾಯಕರಿಗೆ ತೃಪ್ತಿ ತರಲಿಲ್ಲ. ಯಾವುದಾದರೊಂದು ಹೆಸರು
ಬೇಕಲ್ಲಾ, ಬೇಕಲ್ಲಾ ಎಂದು ಚರ್ಚಿಸಿದಾಗ ಕೊನೆಗೆ ಬೇಕಲವೆಂಬ ಹೆಸರೇ ಖಾಯಂ ಆಯಿತಂತೆ.ಇದು ಅಂತೆ
ಕಂತೆ ಅಷ್ಟೇ.
ನಾಯಕರ ಆಳ್ವಿಕೆ ಕೊನೆಗೊಂಡು ಈ
ಕೋಟೆಯು ಟಿಪ್ಪು ಸುಲ್ತಾನನ ವಶಕ್ಕೆ ಬಂದು ತರುವಾಯ 1799 ರಲ್ಲಿ ಆತನ ಮರಣದ ನಂತರ
ಬ್ರಿಟಿಷರ ವಶವಾಯಿತು. ಆ ಮೇಲೆ ಸ್ವಾತಂತ್ರ್ಯ ದೊರೆತಮೇಲೆ ಸರಕಾರದ ಸೊತ್ತು ಆಗಿ ಉಳಿಯಿತು. ಈ
ಕಾಲದಲ್ಲಿ ಏನೊಂದೂ ವಿಷೆಶಗಳಿಲ್ಲದೆ ಕೋಟೆಯೂ ತನ್ನ ಗತಕಾಲದ ನೆನಪುಗಳನ್ನು ಮೆಲುಕಾಡುತ್ತಾ ತೂಕಡಿಸುತಿತ್ತು.
ಅಲ್ಲಿ ಒಂದು ಪ್ರವಾಸಿ ಬಂಗಲೆ ಮತ್ತು ಅಡಿಗೆ ಮನೆ, ಕಾವಲುಗಾರನ ನಿವಾಸ ನಿರ್ಮಿತವಾಯಿತು.
ನಾವು ಚಿಕ್ಕಂದಿನಲ್ಲಿ ಇಲ್ಲಿಗೆ
ಪಿಕ್ನಿಕ್ ಗೆಂದು ಬರುತಿದ್ದೆವು. ಆಗ ಇಲ್ಲಿ ಯಾವುದೇ ಪ್ರೆವೇಶ ಧನ, ಕಟ್ಟುಪಾಡುಗಳು
ಇರುತ್ತಿರಲಿಲ್ಲ. ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಸಹಾ ಇರಲಿಲ್ಲ. ನಮಗೆ ಬೇಕಾದ ತಿಂಡಿ, ನೀರು
ಎಲ್ಲಾ ಕಟ್ಟಿಕೊಂಡು ಬೆಳಗ್ಗೆ ಕಾಸರಗೋಡಿನಿಂದ ಬಂದು, ನಮ್ಮಿಷ್ಟ ಬಂದಂತೆ ಆಟವಾಡಿ, ಸಮುದ್ರ
ಸ್ನಾನ ಮಾಡಿ ಸಂಜೆಯಾದ ಮೇಲೆ ವಾಪಾಸು ಮನೆಗೆ ಮರಳುತಿದ್ದೆವು. ಹೆಚ್ಚೂ ಕಮ್ಮಿ ನಿರ್ಜನ
ಕೋಟೆಯಾಗಿತ್ತು.
ಯಾವಾಗ ಇಲ್ಲಿ ತಮಿಳು ಸಿನೆಮಾ
ಬೋಂಬೈ ಚಿತ್ರೀಕರಣವಾಯಿತೋ, ಈ ಕೋಟೆಯ ಭಾಗ್ಯದ ಬಾಗಿಲು ತೆರೆಯಿತು. ಬಹಳ ಸುಂದರವಾಗಿ ಕೋಟೆಯನ್ನು
ಸಿನೆಮಾದಲ್ಲಿ ಚಿತ್ರಿಸಿದರು ಮಣಿರತ್ನಂ. ಆಮೇಲೆ ಇಲ್ಲಿಗೆ ಚಿತ್ರ ನಿರ್ಮಾಪಕರ, ಜಾಹಿರಾತುದಾರರ
ದಂಡೇ ಬಂದವು. ಸರಕಾರಕ್ಕೂ ಈಗ ಎಚ್ಚರವಾಗಿರಬೇಕು. ಇಲ್ಲಿನ ಮಹತ್ವ ಮನವರಿಕೆಯಾಗಿ 1995 ರಲ್ಲಿ ಬೇಕಲ ಕೋಟೆಯನ್ನು
ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರ ಎಂದು ಘೋಷಿಸಿ ಅದಕ್ಕೆ ಒಂದುನಿಗಮವನ್ನು ಸ್ಥಾಪಿಸಿತು. ಇದರ
ಫಲವಾಗಿ ಕೋಟೆಯು ಬಹಳ ಅಭಿವೃದ್ಧಿ ಪಡೆಯಿತು. ದುರಸ್ತಿ ಕಾರ್ಯಗಳೂ ಚೆನ್ನಾಗಿ ನಡೆದವು. ಸುಂದರವಾದ
ಉದ್ಯಾನವನ್ನು ಬೆಳೆಸಿ ಪ್ರವಾಸಿಗಳ ಮನಕ್ಕೆ ಮುದವನ್ನು ಕೊಡುವ ತಾಣವನ್ನಾಗಿಸಿದರು. ಪ್ರವೇಶಧನ
ರೂ.5 ಮತ್ತು ಕೆಮರಾಕ್ಕೆ ರೂ.25 ಇರಿಸಿದ್ದಾರೆ.
ಸೂರ್ಯಾಸ್ತವಾದಮೇಲೆ ಇಲ್ಲಿ ಪ್ರವೇಶ ನಿಷಿದ್ಧ. ಕೋಟೆಯ ಒಳಗಡೆ ಒಂದೆರಡು ಅಂಗಡಿಗಳಿದ್ದು
ಪ್ರವಾಸಿಗಳ, ಮಕ್ಕಳ ಬೇಡಿಕೆ ಪೂರಯಿಸುತ್ತಿವೆ. ಕೋಟೆಯ ಹೊರ ಭಾಗದಲ್ಲಿ ವಿಶಾಲವಾದ ಪಾರ್ಕಿಂಗ್
ವ್ಯವಸ್ಥೆ ಇದ್ದು ಪಕ್ಕದಲ್ಲಿ ಹಲವಾರು ಸ್ಟಾಲ್ ಗಳು ತಲೆ ಎತ್ತಿವೆ.
ಕೋಟೆಯ ಮುಂಭಾಗದಲ್ಲಿ
ಕಂದಕವಿದ್ದು ಹಿಂದೊಮ್ಮೆ ಅದರ ತುಂಬಾ ನೀರು ತುಂಬಿಸಿ ಮೊಸಳೆಗಳನ್ನು ಅದರಲ್ಲಿ ಸಾಕುತ್ತಿದ್ದಿರಬೇಕು.
ಮುಂಭಾಗದ ಮುಖ್ಯ ದ್ವಾರವನ್ನು ದಾಟುತ್ತಿದ್ದಂತೆಯೇ ಕೋಟೆಯ ರಕ್ಷಕ ಸ್ವಾಮಿಯಾದ ಆಂಜನೇಯನ ಗುಡಿ
ಸಿಗುತ್ತದೆ. ಇದನ್ನು ಮುಖ್ಯಪ್ರಾಣ ದೇವಸ್ಥಾನ ಎಂದು ಕರೆಯುತ್ತಾರೆ. ಅಲ್ಲಿಂದ ಎಡಗಡೆಗೆ
ತಿರುವಿನಲ್ಲಿ ಸಾಗಿದರೆ ಪ್ರವೇಶಕ್ಕಾಗಿ ಟಿಕೆಟ್ ಕೊಡುವ ಕೌಂಟರ್ ಸಿಗುತ್ತದೆ. ಟಿಕೆಟ್ ಪಡಕೊಂಡು
ಮುಂದಿನ ದ್ವಾರ ಪ್ರವೇಶಿಸಿದೊಡನೆ ನಮಗೆ ಕೋಟೆಯ ಸಮಗ್ರ ಧರ್ಶನವಾಗುತ್ತದೆ. ಸುಂದರವಾದ
ಹುಲ್ಲುಗಾವಲನ್ನು ಬೆಳೆಸಿದ್ದಾರೆ. ಅದರ ಅಂಚಿನಲ್ಲಿ ಹೂವಿನ ಗಿಡಗಳು ನಮ್ಮನ್ನು
ಆಮಂತ್ರಿಸುತ್ತವೆ.
ಮಧ್ಯದಲ್ಲಿ ಇರುವ ದಾರಿಯಲ್ಲಿ ಸಾಗಿದರೆ ನಮಗೆ ಎತ್ತರವಾದ ಒಂದು ಬುರುಜು, ವೀಕ್ಷಣಾಸ್ಥಳ ಕಾಣುತ್ತದೆ. ಇದನ್ನು ಏರಲು ಉತ್ತಮ ಏರುದಾರಿಯಿದೆ. ಹಿಂದೆ ಇದರಲ್ಲೇ ಫಿರಂಗಿಗಳನ್ನೂ ಮೇಲ್ಗಡೆ ಸಾಗಿಸುತ್ತಿದ್ದರಂತೆ. ಅಲ್ಲಿಂದ ನೋಡಿದರೆ ನಮಗೆ ಸುತ್ತಲಿನ 360 ಡಿಗ್ರಿಯ ನೋಟ ಸಾಧ್ಯ.
ದೂರದ ಪಳ್ಳಿಕ್ಕೆರೆ, ಉದುಮ ಮತ್ತು ಹೊಸದುರ್ಗಗಳವರೆಗೆಗಿನ ನೋಟಗಳು ಕಾಣುತ್ತವೆ. ಹಾಗೇನೆ ಪಶ್ಚಿಮದಲ್ಲಿ ವಿಶಾಲ ಅರಬಿ ಸಮುದ್ರವೂ ಅದರಲ್ಲಿ ಸಾಗುತ್ತಿರುವ ಹಡಗು, ಮೀನುಗಾರಿಕಾ ನಾವೆಗಳೂ ಕಾಣುತ್ತವೆ. ಕೋಟೆಯ ಬಹುಪಾಲು ಸಮುದ್ರ ಆವರಿಸಿಕೊಂಡಿದೆ.
ಎಂಥಹಾ ಬೇಸಿಗೆಯಲ್ಲೂ ಇಲ್ಲಿ ಸಮುದ್ರದಿಂದ ಬೀಸುವ ತಂಪಾದ ಗಾಳಿ ನಮ್ಮನ್ನು ಮುದಗೊಳಿಸುತ್ತದೆ. ಇಲ್ಲೇ ಕೆಳಗಡೆ ಒಂದು ನೀರಿನ ಭಾವಿ ಸಹಾ ಕಾಣಬಹುದು.

ಇಲ್ಲಿಂದ ಕೆಳಗಿಳಿದು ಮುಂದೆ ಸಾಗಿದರೆ ಅಲ್ಲಿ ಮತ್ತೊಂದು
ಬುರುಜು ಸಿಗುತ್ತದೆ. ಅಲ್ಲೇ ಪಕ್ಕದಲ್ಲಿ ಹಿಂದಿನಕಾಲದ ಮದ್ದು ಗುಂಡು ಮೊದಲಾದ ಸ್ಪೋಟಕ
ಸಾಮಗ್ರಿಗಳನ್ನು ಸಂಗ್ರಹಿಸಿಡುವ ಒಂದು ಉಗ್ರಾಣ ಸಿಗುತ್ತದೆ.
ಮುಂದೆಲ್ಲಾ ಸಾಗಿದಂತೆ ಕೋಟೆಯ ಗೋಡೆಯ ಅಂಚಿನಲ್ಲೇ ನಮಗೆ ಇನ್ನೂ ಹಲವು ಬುರುಜುಗಳು ಎದುರಾಗುತ್ತವೆ. ಇಲ್ಲಿ ಅರಬೀ ಸಮುದ್ರದ ಸುಂದರ ನೋಟ ಸಿಗುತ್ತದೆ. ಕೋಟೆಯ ಗೋಡೆಗಳಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಕಂಡಿಗಳಿದ್ದು ಕೊವಿಗಳಿಂದ ಗುಂಡು ಹಾರಿಸಲು ಮಾಡಿದ ರಚನೆಗಳು ಎಂದು ಗೊತ್ತಾಗುತ್ತದೆ. ಅಂತೆಯೇ ಬುರುಜುಗಳಲ್ಲಿ ಫಿರಂಗಿಗಳಿಂದ ಗುಂಡು ಸಿಡಿಸಲು ಕೊಂಚ ಅಗಲವಾದ ಸಂಧಿಯನ್ನೂ ರಚಿಸಿದ್ದಾರೆ.
ಇಲ್ಲಿ ಕೋಟೆಯ ಎಡಭಾಗದಲ್ಲಿ ಒಂದು ಗುಹಾ ಮಾರ್ಗವಿದ್ದು ಅದರಲ್ಲಿ ಇಳಿದು ಬಗ್ಗಿಕೊಂಡು ಸಾಗಿದರೆ ಕಡಲ ತೀರಕ್ಕೆ ಹೋಗಬಹುದು. ಹಿಂದೆ ನಾವೆಷ್ಟೋ ಸಲ ಅದರಲ್ಲಿ ಸಾಗಿದ್ದೆವು. ಆದರೆ ಈಗ ಅಲ್ಲೆಲ್ಲಾ ಒಂದು ಜಾತಿಯ ಎತ್ತರವಾದ ಹುಲ್ಲು ಬೆಳೆದು ಆ ಸುರಂಗ ಎಲ್ಲಿದೆ ಎಂದು ತಿಳಿಯುವುದೇ ಇಲ್ಲ. ಈ ಹುಲ್ಲನ್ನು ತೆಗೆದರೆ ಖಂಡಿತಾ ಆ ಸುರಂಗ ಮಾರ್ಗ ಗೋಚರಿಸುವುದು. ಇಲಾಖೆಯವರು ಈ ಬಗ್ಗೆ ಅವಶ್ಯ ಗಮನಹರಿಸಬೇಕು.
ಮುಂದೆ ಹೋದಂತೆ ಕೋಟೆಯಿಂದ ಸಮುದ್ರಮುಖವಾಗಿ ಒಂದು ಬಾಗಿಲು ಇದೆ. ಅಲ್ಲಿಂದ ಕೆಳಗಿಳಿಯಲು ಮೆಟ್ಟಿಲುಗಳಿವೆ. ಇದರಲ್ಲಿಳಿದು ಹೋದರೆ ನೇರ ಸಮುದ್ರಕ್ಕೆ ತಾಗಿಕೊಂಡೇ ಇರುವ ಒಂದು ಬುರುಜು ಸಿಗುತ್ತದೆ.
ಇದೇ ಇಲ್ಲಿನ ಮುಖ್ಯ ಆಕರ್ಷಣೆ ಎನ್ನಬಹುದು. ಇಲ್ಲಿ ನಿಂತರೆ ಸಿಗುವ ಆನಂದ ಅಷ್ಟಿಷ್ಟಲ್ಲ. ನೀರಿನ ತೆರೆಗಳು ಭೋರ್ಗರೆಯುತ್ತಾ ಬುರುಜು ಮತ್ತು ಅದರ ಸುತ್ತಲಿನ ಬಂಡೆಗಳಿಗೆ ಅಪ್ಪಳಿಸುವಾಗ ಅಷ್ಟೆತ್ತರಕ್ಕೆ ನೀರು ಚಿಮ್ಮಿ ಪ್ರವಾಸಿಗಳನ್ನು ಕೇಕೆ ಹಾಕುವಂತೆ ಮಾಡುತ್ತದೆ. ಕೆಲವೊಮ್ಮೆ ಅಲ್ಲಿ ನಿಂತವರ ಮೇಲೂ ನೀರಿನ ಪ್ರೋಕ್ಷಣೆ ಮಾಡುತ್ತವೆ. ಇಲ್ಲಿ ಸೂರ್ಯಾಸ್ತವನ್ನೂ ನೋಡಬಹುದು.

ಕೋಟೆಯಲ್ಲಿ ಹಿಂದಿನ ಕಾಲದ
ಕಟ್ಟಡಗಳು ಯಾವುದೂ ಈಗ ಕಾಣಲಾರೆವು. ಕೆಲವು ಕಡೆ ಹಳೆಯ ಕಟ್ಟಡದ ತಳಪಾಯ ಮಾತ್ರ ಇದೆ. ಇಲ್ಲಿನ
ಒಂದು ಕೊರತೆ ಎಂದರೆ ಮಳೆ ಬಂದಾಗ ಆಶ್ರಯ ಪಡೆಯಲು ಯಾವ ಸೌಕರ್ಯವೂ ಇಲ್ಲ. ಬೇಕಿದ್ದರೆ ಪ್ರವಾಸಿ
ಬಂಗಲೆಯ ಜಗಲಿಗೆ ಓಡಬೇಕಷ್ಟೇ.
ನಿಜಕ್ಕೂ ಇದೊಂದು ಅವಶ್ಯವಾಗಿ
ನೋಡಲೇ ಬೇಕಾದ ತಾಣ. ನೀವೂ ನೋಡಬನ್ನಿ.
No comments:
Post a Comment