ನಮ್ಮ ಇಂಗ್ಲೆಂಡ್ ಯಾತ್ರೆಯನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ದುಬೈಗೆ ಬರಬೇಕೆಂದು ನನ್ನ ತಮ್ಮಂದಿರ ಆಹ್ವಾನ ಮೇರೆಗೆ ನಾವು ಲಂಡನ್ನಿನಿಂದ ನೇರ ಎಮಿರೇಟ್ಸ್ ವಿಮಾನದಲ್ಲಿ ದುಬೈಗೆ ಬಂದಿಳಿದೆವು. ನಾವು ಬೆಂಗಳೂರಿನಿಂದ ಇಂಗ್ಲೆಂಡ್ ಗೆ ಹೋಗುವಾಗಲೂ ಎಮಿರೇಟ್ಸ್ ವಿಮಾನದಲ್ಲೇ ಪ್ರಯಾಣಿಸಿ ಸ್ವಲ್ಪ ಹೊತ್ತು ದುಬೈ ವಿಮಾನ ನಿಲ್ದಾಣದಲ್ಲಿ ತಂಗಿದ್ದು ಮುಂದೆ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದೆವು. ಹಾಗಾಗಿ ನಮಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಚಯ ಚೆನ್ನಾಗಿತ್ತು.ರಾತ್ರಿ 10 ಗಂಟೆಗೆ ಲಂಡನ್ ಹೀಥ್ರೂ ವಿಮಾನ ನಿಲ್ದಾಣ ಬಿಟ್ಟು ನಮ್ಮ ವಿಮಾನ ಮುಂಜಾನೆ 6ಕ್ಕೆ ದುಬೈನಲ್ಲಿ ಇಳಿದಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ಅದ್ಬುತ ಲೋಕ. ಅಲ್ಲಿನ ಲಾಂಜ್ ನಲ್ಲಿ ತುಂಬಾ ಆಧುನಿಕ ಮಳಿಗೆಗಳಿದ್ದು ಅಲಂಕಾರಕ್ಕಾಗಿ ಚಿನ್ನದ ಬಣ್ಣ ಹೊಂದಿದ ಕೆಲವು ಬೃಹತ್ ಖರ್ಜೂರದ ಮರದ ಮಾದರಿಯನ್ನು ಇರಿಸಿದ್ದಾರೆ. 3-4 ಮಹಡಿಗಳಿಂದ ಒಳಗೊಂಡ ಈ ನಿಲ್ದಾಣವು ಜಗತ್ತಿನಲ್ಲೇ ಅತ್ಯಾಧುನಿಕವಾಗಿದೆ. ಅಲ್ಲಿ ಇಳಿದಾಕ್ಷಣ ನಮ್ಮ ವೀಸಾ ಪರಿಶೀಲನೆ, ಚೆಕ್ ಅಪ್ ಎಲ್ಲಾ ಮುಗಿಸಿಕೊಂಡು ಹೊರಬಂದೆವು.ನನ್ನ ತಮ್ಮಂದಿರಿಬ್ಬರೂ ನಮ್ಮನ್ನು ಎದುರುಗೊಂಡು ಸಂಭ್ರಮದಿಂದ ಅವರ ಮನೆಗೆ ಕೊಂಡೊಯ್ದರು. ಅಲ್ಲಿ ಅವರ ಪತ್ನಿ, ಮಕ್ಕಳು ಎಲ್ಲರೂ ಬಹಳ ಸಡಗರದಿಂದ ನಮ್ಮನ್ನು ಸ್ವಾಗತಿಸಿದರು.
ಹಲವಾರು ವರ್ಷಗಳಿಂದ ನನ್ನ ಸಹೋದರರಾದ ಶ್ರೀಹರಿ ಮತ್ತು ರವಿಚಂದ್ರ ಅಲ್ಲಿ ತಮ್ಮ ಸಂಸಾರ ಹೂಡಿದ್ದಾರೆ. ಮಕ್ಕಳೊಂದಿಗೆ ಸರಸವಾಡುತ್ತಾ ನಾವೂ ನಮ್ಮ ಇಂಗ್ಲೆಂಡ್ - ಲಂಡನ್ ಅನುಭವಗಳನ್ನು ಹಂಚಿಕೊಂಡೆವು. ಮೊದಲು ನಾವು ರವಿಯ ಮನೆಯಲ್ಲಿ 8 ದಿನ ಇದ್ದೆವು. ರವಿ, ಅವನ ಪತ್ನಿ ರೂಪಾ, ಮಕ್ಕಳು ನಿರೇನ್ ಮತ್ತು ನಂದನ್ ದಿನಾಲು ನಮ್ಮನ್ನು ಹೊರಗಡೆ ತಿರುಗಾಡಲು ಕೊಂಡೊಯ್ಯುತಿದ್ದರು.
ದುಬೈ ಒಂದು ಮಾಯಾನಗರಿ! ಲಂಡನ್ ಗಿಂತ ಬಹಳ ಭಿನ್ನ. ಲಂಡನ್, ಗತಕಾಲದ ಕನ್ನಡಿಯಾದರೆ ದುಬೈ ಆಧುನಿಕ ಜಗತ್ತಿನ ಅತ್ಯುತ್ತಮ ಮಾದರಿ.
ಇಲ್ಲೆಲ್ಲಾ ಎತ್ತ ನೋಡಿದರೂ ಆಕಾಶದೆತ್ತರಕೆ ಚಾಚಿ ನಿಂತ ಗಗನಚುಂಬಿ ಕಟ್ಟಡಗಳು ಎಣಿಸಲಾರದಷ್ಟು. ಒಂದೊಂದೂ ಬೇರೆ ಬೇರೆ ವಿನ್ಯಾಸದ್ದು.
ಇಷ್ಟೆಲ್ಲಾ ಸಾಲದು ಎಂಬಂತೆ ಸಮುದ್ರವನ್ನೂ ಬಿಟ್ಟಿಲ್ಲ. ಅಲ್ಲೆಲ್ಲ ಮಣ್ಣು, ಕಲ್ಲು ತುಂಬಿಸಿ ಹೊಸದಾಗಿ ಭೂಮಿಯನ್ನು ಸೃಷ್ಟಿಸಿ ಅಲ್ಲಿ ವಿನೂತನವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಕೇವಲ ಕೆಲ ವರ್ಷಗಳ ಪರಿಶ್ರಮ. ಕೇವಲ ಕೆಲ ವರ್ಷಗಳಿಂದ ಎಂದರೆ 1971 ರಿಂದ ಬ್ರಿಟಿಷರಿಂದ ಸ್ವತಂತ್ರ ಗೊಂಡ, ಹಿಂದೆಲ್ಲ ಮರಳುಗಾಡು ಆಗಿದ್ದ ದುಬೈ ಈಗ ಸ್ವರ್ಗ ಸಮಾನವಾಗಿದೆ.
ಇದೆಲ್ಲಾ ಪೆಟ್ರೋಲ್ ಮಹಿಮೆ. ಹಿಂದೆ ಇಲ್ಲಿ ಹೊರಗಿನ ನಾಗರಿಕರಿಗೆ ಜಮೀನು ಕೊಳ್ಳುವ ಹಕ್ಕು ಇರಲಿಲ್ಲ. ಆದರೆ ಈಗಿನ ಶೇಕ್, ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಮತ್ತು ಅವರ ಪುತ್ರನ ಮುಂದಾಲೋಚನೆಯಿಂದಾಗಿ ಈಗ ಇಲ್ಲಿ ಯಾರಿಗೆ ಬೇಕಾದರೂ ಜಮೀನು ಕೊಳ್ಳಬಹುದು ಮತ್ತು ಕಟ್ಟಡಗಳನ್ನು ಕಟ್ಟಬಹುದಾಗಿದೆ. ಜಗತ್ತಿನ ಎಲ್ಲಾ ಶ್ರೀಮಂತರೂ ಇಲ್ಲಿ ತಮ್ಮ ಹೆಚ್ಚಿನ ಹಣವನ್ನು ಹೂಡಿದ್ದಾರೆ. ದುಬೈ, ಅಬುಧಾಬಿ, ರಾಸ್ ಅಲ್ ಖೈಮಾ, ಶಾರ್ಜಾ, ಅಜ್ಮಾನ್ ,ಫುಜೈರಾ ಮತ್ತು ಉಮ್ಮ್ ಅಲ್ ಕ್ವೈನ್ ಎಂಬ ಪುಟ್ಟ ರಾಷ್ಟ್ರಗಳು ಒಂದುಗೂಡಿ ಯುನೈಟೆಡ್ ಅರಬ್ ಎಮಿರೇಟ್ಸ ಎಂಬ ಒಕ್ಕೂಟವನ್ನು ಸ್ಥಾಪಿಸಿಕೊಂಡಿವೆ. ಅವುಗಲ್ಲಿ ಪ್ರಮುಖವಾದದ್ದು ಅಬುಧಾಬಿ ಮತ್ತು ದುಬೈ. ದುಬೈಯನ್ನುಳಿದು ಇನ್ನೆಲ್ಲಾ ರಾಜ್ಯಗಳು ಪೆಟ್ರೋಲಿಯಂ ಉತ್ಪಾದಿಸಿದರೆ, ದುಬೈ ವ್ಯಾಪಾರ ವಹಿವಾಟುಗಳಿಂದ ಬಹಳ ಮುಂದುವರೆದಿದೆ. ಇಲ್ಲಿ ನೌಕರಿಯನ್ನು ಮಾಡುವವರಲ್ಲಿ ಹೆಚ್ಚಿನಂಶ ಭಾರತೀಯರು. ಇಲ್ಲಿನ ಜನಸಂಖ್ಯೆಯಲ್ಲಿ ನಮ್ಮವರು ಶೇಖಡಾ 42% ಇದ್ದಾರೆ. ಹಾಗಾಗಿ ಭಾರತೀಯ ಮುಖಗಳೇ ಹೆಚ್ಚಾಗಿ ಕಾಣಸಿಗುವುದು. ಉನ್ನತ ಹುದ್ದೆಯಿಂದ ಹಿಡಿದು ಕೆಳಸ್ತರದ ಉದ್ಯೋಗ ಮತ್ತು ವ್ಯಾಪಾರಗಳನ್ನು ನಡೆಸುವ ನಮ್ಮವರನ್ನು ಇಲ್ಲಿ ಕಾಣಬಹುದು. ಇಲ್ಲಿ ಬಾಂಗ್ಲಾ, ಶ್ರೀಲಂಕಾ ಮತ್ತು ಪಾಕಿಸ್ಥಾನದ ಪ್ರಜೆಗಳು ಸಹಾ ಇದ್ದಾರೆ. ಬಹುಮಟ್ಟಿಗೆ ಎಲ್ಲರೂ ಸಹಬಾಳ್ವೆ ಮಾಡುತಿದ್ದಾರೆ.
ದುಬೈ ಎಂದರೆ ಬರೇ ಮರುಭೂಮಿ ಎಲ್ಲೆಲೂ ಮರಳು, ಒಣ ಪ್ರದೇಶ, ರಣ ಬಿಸಿಲು ಇರಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದರೆ ಅದೆಲ್ಲ ತಪ್ಪು ಕಲ್ಪನೆ ಎಂದು ಅಲ್ಲಿ ಕಾಲಿಟ್ಟಾಗಲೇ ತಿಳಿಯಿತು. ನಾವು ಅಲ್ಲಿಗೆ ಹೋದದ್ದು ಜೂನ್ ತಿಂಗಳಲ್ಲಿ. ನನ್ನ ಸಹೋದರರು ತಿಳಿಸಿದ ಪ್ರಕಾರ ಜೂನ್ ನಲ್ಲಿ ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ 50 ಡಿಗ್ರಿಯವರೆಗೂ ಏರುತ್ತದಂತೆ
ನಮಗೆ ತುಂಬಾ ಕಷ್ಟ ಆಗಬಹುದು ಎಂದಿದ್ದರು. ಸಾಲದಕ್ಕೆ ನಾವು 6 ತಿಂಗಳ ಕಾಲ ಇಂಗ್ಲೆಂಡಿನ ತಂಪು ಹವೆಯಲ್ಲಿ ಇದ್ದು ಬಂದವರು! ಆದರೆ ನಮ್ಮ ಅದೃಷ್ಟದಿಂದ ಅಲ್ಲಿ ಸ್ವಲ್ಪ ಮಳೆ ಹಾಗೂ ಮೋಡ ತುಂಬಿದ ವಾತಾವರಣ ಇದ್ದುದರಿಂದ 30-32 ಡಿಗ್ರಿ ಉಷ್ಣಾಂಶವಿತ್ತು. ಇತ್ತೀಚಿಗೆ ಅಲ್ಲಿ ತುಂಬಾ ಮರ ಗಿಡಗಳನ್ನೂ ಹುಲ್ಲುಗಾವಲನ್ನೂ ಬೆಳೆಸುತಿದ್ದಾರೆ. ಇದರಿಂದ ಸಾಕಷ್ಟು ಮಳೆಯೂ ಬರುತ್ತಿದೆ. ಮಾರ್ಗದ ಮಧ್ಯಭಾಗದಲ್ಲಿ ಹಸಿರು ಹುಲ್ಲು, ಹೂವಿನ ಗಿಡಗಳು ಮತ್ತು ಖರ್ಜೂರದ ಮರಗಳನ್ನೂ ಎಲ್ಲೆಡೆಯಲ್ಲೂ ನೆಟ್ಟಿದ್ದಾರೆ.
ಇದಕ್ಕೆ ಸರಿಯಾಗಿ ನೀರನ್ನೂ ಉಣಿಸುತ್ತಾರೆ. ಬಳಕೆ ಮಾಡಿ ವ್ಯರ್ಥ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಮರಗಳಿಗೆ ಹಾಕುತ್ತಾರೆ. ಅಲ್ಲಲ್ಲಿ ಉದ್ಯಾನಗಳು ಮತ್ತು ಅದ್ಬುತವಾದ ಕಾರಂಜಿಗಳು ಮನಸೆಳೆಯುತ್ತವೆ. ಇದಕ್ಕೆಲ್ಲಾ ಪೂರಕವಾಗಿ ನಗರದ ಶುಚಿತ್ವ ಇನ್ನಷ್ಟು ಶೋಭೆಯನ್ನು ತರುತ್ತದೆ. ಎಲ್ಲೂ ಕಸ ಕಡ್ಡಿ ಕಲ್ಲು,ಮಣ್ಣು ರಾಶಿ ಇಲ್ಲ. ನಿತ್ಯವೂ ಎಲ್ಲೆಡೆಗಳಲ್ಲೂ ಶುಚಿ ಮಾಡುವ ಕಾರ್ಯ ನಡೆದಿರುತ್ತದೆ. ಆ ಕೆಲಸವನ್ನು ಒಂದಿಷ್ಟೂ ಕುಂದಿಲ್ಲದೆ ಮಾಡುತ್ತಾರೆ. ಇಲ್ಲಿನ ಕಾನೂನು ಬಹಳ ಜೋರಾಗಿದೆ. ಇಲ್ಲಿ ಲಂಚ, ಮೋಸ, ಕಳ್ಳತನ ಮತ್ತು ವಂಚನೆಗೆ ಅವಕಾಶವಿಲ್ಲ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಕಾದಿರುತ್ತದೆ. ಮಾತ್ರವಲ್ಲ ದುಬೈ ನಿಂದಲೇ ಹೊರ ಕಳಿಸುತ್ತಾರೆ. ಹಾಗಾಗಿ ಕೆಲಸ ಮಾಡುವವರು, ಮಾಡಿಸುವವರು ಎಲ್ಲಾ ದಕ್ಷತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನಿಜಕ್ಕೂ ರಾಮ ರಾಜ್ಯ -ಅಲ್ಲಲ್ಲ, ರಹೀಮ ರಾಜ್ಯ! ಇಲ್ಲಿ ಹೆಚ್ಚಿನವರು ಫ್ಲಾಟ್ ಗಳಲ್ಲಿ ವಾಸಿಸುತ್ತಾರೆ. ಶ್ರೀಮಂತರು ವಿಲ್ಲಾಗಳಲ್ಲಿ ವಾಸಿಸುತ್ತಾರೆ. ಇಲ್ಲಿ ವಿಲ್ಲಾಗಳು ಬಹಳ ದುಬಾರಿಯಂತೆ. ದುಬೈನಲ್ಲಿ ಹೆಚ್ಚಾಗಿ ಎಲ್ಲಾ ವ್ಯಾಪಾರ ನಡೆಯುವುದು ಮಾಲ್ ಗಳಲ್ಲಿ. ಇದನ್ನು ನೋಡುವುದೇ ಒಂದು ಅನುಭವ.
ಇತ್ತೀಚಿಗೆ ಬೆಂಗಳೂರಿನಲ್ಲಿಯೇ ಕೆಲವು ಬೃಹತ್ ಮಾಲ್ ಗಳು ಬಂದಿವೆ. ಉದಾಹರಣೆಗೆ ಮಂತ್ರಿ ಮಾಲ್, ಫೋರಮ್, ಗರುಡಾ ಮಾಲ್ ಇತ್ಯಾದಿ. ಮಾಲ್ ಗಳಲ್ಲಿ ತಿರುಗಾಡುತ್ತಾ ಬೇಕಾದವುಗಳನ್ನು ಕೊಳ್ಳಬಹುದು,ಅಲ್ಲಿಯೇ ಬಗೆ ಬಗೆಯ ತಿನಸುಗಳನ್ನು ತಿನ್ನಬಹುದು. ಎಲ್ಲಾ ಮಾಲ್ ಗಳೂ ಹವಾನಿಯಂತ್ರಿತ. ಅಲ್ಲಿನ ಇಂಟೀರಿಯರ್ ಡೆಕೋರೇಶನ್ ಎಷ್ಟು ನೋಡಿದರೂ ಸಾಲದೆನಿಸುತ್ತದೆ.
ದೇಶ ವಿದೇಶಗಳ ಜನರು ಅಲ್ಲಿ ತುಂಬಿರುತ್ತಾರೆ. ನಾವೂ ದಿನಾಲೂ ಒಂದೊಂದು ಮಾಲ್ ಗೆ ಹೋಗಿದ್ದೆವು. ಮೊದಲ ದಿನ ಸಂಜೆ ಹೋದದ್ದು ಒಂದು ದೊಡ್ಡ ಗೃಹ ಬಳಕೆಯ ವಸ್ತುಗಳ ಮಾಲ್ ಗೆ. ಇಲ್ಲಿ ಬಗೆ ಬಗೆಯ ಪೀಟೋಪಕರಣಗಳೂ, ಕರ್ಟನ್ ಗಳೂ, ಎಲ್ಲಾ ಬಗೆಯ ಪಾತ್ರೆ, ಲೈಟಿಂಗ್, ಕಾರ್ಪೆಟ್, ಇನ್ನೂ ಏನೇನೋ ಹೊಸ ವಸ್ತುಗಳನ್ನು ಇರಿಸಿದ್ದರು. ಕುಂಡಗಳಲ್ಲಿ ಬೆಳೆಸಿದ ಹೂಗಿಡಗಳೂ ಇಲ್ಲಿ ಲಭ್ಯ.
ಆ ಮೇಲೆ ನಾವು ಹೋದದ್ದು ದುಬೈ ಕ್ರೀಕ್ ಗೆ. ಇದೊಂದು ಉಪ್ಪು ನೀರಿನ ಕಾಲುವೆ. ಸುಮಾರು 14 ಕಿ.ಮಿ. ಉದ್ದವಿದೆ.ಇದರ ಒಂದು ದಂಡೆ ಬರ್ ದುಬೈ ಆದರೆ ಇನ್ನೊಂದು ದಂಡೆ ಡೈರಾ. ಇದರಲ್ಲಿ ಸಂಚರಿಸುವ ಬಹಳ ಸಣ್ಣ ದೊಡ್ಡ ನಾವೆಗಳಿವೆ. ಇಲ್ಲಿಂದ ಸರಕುಗಳನ್ನು ಹೇರಿಕೊಂಡು ನಾವೆಗಳು ಪೂರ್ವ ಆಫ್ರಿಕಾ ತೀರವನ್ನು ತಲಪುತ್ತದಂತೆ. ಅಲ್ಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ದೊಡ್ಡ ಬೋಟ್ ಗಳಲ್ಲಿ ರೆಸ್ಟೋರೆಂಟ್ ಗಳಿವೆ. ನಾವೂ ಒಂದು ಬೋಟ್ ಗೊತ್ತುಮಾಡಿಕೊಂಡು ಸುಮಾರು 1ಘಂಟೆ ಕಾಲ ಕ್ರೀಕ್ ನಲ್ಲಿ ವಿಹರಿಸಿದೆವು. ತಂಗಾಳಿ ಬೀಸುತಿತ್ತು. ಮೇಲೆ ನೀಲಾಕಾಶದಲ್ಲಿ ಮಿನುಗುವ ನಕ್ಷತ್ರಗಳು, ಎರಡೂ ದಡದಲ್ಲಿ ಬಣ್ಣ ಬಣ್ಣದ ದೀಪಗಳಿಂದ ತುಂಬಿದ ಗಗನ ಚುಂಬಿಗಳು, ಅವುಗಳ ವಿದ್ಯುತ್ ದೀಪಗಳು ಕ್ರೀಕ್ ನ ನೀರಲ್ಲಿ ಪ್ರತಿಫಲನಗೊಂಡು ಅದ್ಬುತ ಲೋಕವನ್ನೇ ನಿರ್ಮಿಸಿತ್ತು. ಬಹಳ ಖುಷಿಪಟ್ಟೆವು. ನಂತರ ನಾವೆಲ್ಲಾ ಅಲ್ಲೇ ದಡದಲ್ಲಿರುವ ದೇವಸ್ಥಾನಗಳಿಗೆ ಹೋದೆವು. ಹೌದು ಇಲ್ಲಿಯೂ ಹಿಂದೂ ದೇವಳಗಳಿವೆ. ಹಲವಾರು ದೇವರ ಗುಡಿಗಳೊಂದಿಗೆ ಜೈನ ದೇವಾಲಯವೂ ಇಲ್ಲಿದೆ. ಅದರ ಮಾರ್ಗದಲ್ಲಿ ಸಂಚರಿಸುವಾಗ ನಮ್ಮ ದೇಶದ ದೇವಾಲಯಗಳ ಪರಿಸರವೇ ನೆನಪಾಗುತ್ತದೆ. ಹೂವು, ಹಣ್ಣು, ಕಾಯಿ, ಅಗರಬತ್ತಿ, ಕುಂಕುಮ ಮತ್ತಿತರ ಪೂಜಾಸಾಮಗ್ರಿಗಳ ಅಂಗಡಿಗಳು ಇಲ್ಲಿವೆ. ದುಬೈನಲ್ಲಿ ನಮ್ಮ ದೇವರ ದರ್ಶನ ಮಾಡಿ ಅಲ್ಲಿ ಹಂಚಿದ ಪ್ರಸಾದ ತಿಂದು ಪುನೀತರಾದೆವು. ಮತ್ತೆ ಒಂದು ದೊಡ್ಡ ಶಾಪಿಂಗ್ ಕೊಂಪ್ಲೆಕ್ಸ್ ಸುತ್ತಾಡಿಕೊಂಡು ಕ್ರೀಕ್ ನ ಬದಿಯಲ್ಲಿ ಕುಳಿತು ಮೊರೋಕ್ಕನ್ ಫಿಲಾಫಿಲ್ ತಿಂದೆವು. ಮಲೆಯಾಳಿ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿದು ಮನೆಗೆ ಬಂದಾಗ ರಾತ್ರಿ 10 ಘಂಟೆ. ಮುಂದಿನ ದಿನಗಳಲ್ಲಿ ನಾವು ಹಲವಾರು ಪ್ರಮುಖ ಮಾಲ್ ಗಳನ್ನು ಸಂದರ್ಶಿಸಿದೆವು.
ಮುಖ್ಯವಾಗಿ ಜುಮೈರಾ ಪ್ಲಾಜಾ, ದುಬೈ ಮಾಲ್ , ಮಾಲ್ ಒಫ್ ಎಮಿರೇಟ್ಸ್ , ಭುರ್ಜ್ ಮಾನ್ ಸೆಂಟರ್ , ವಾಫಿ ಶಾಪಿಂಗ್ ಮಾಲ್ , ಡ್ರಾಗನ್ ಮಾಲ್ , ಇಬ್ನಬತೂತ ಮಾಲ್ ಮತ್ತು ಲುಲು ಸೆಂಟರ್. ಇವುಗಳೆಲ್ಲ ದುಬೈನಲ್ಲಿರುವ ಪ್ರಖ್ಯಾತ ಮಾಲ್ ಗಳು. ಒಂದೊಂದಕ್ಕೂ ತನ್ನದೇ ಆದ ವಿಶಿಷ್ಟ ಸೌಂದರ್ಯ ಆಕರ್ಷಣೆ ಇದೆ. ನಮಗೆ ಬೇಕಾದ ಪರ್ಫ್ಯೂಮ್ ಗಳನ್ನು ಕೊಂಡೆವು. ನನ್ನ ಇಷ್ಟದ ಯಾರ್ಡ್ಲೆ ಪರ್ಫ್ಯೂಮ್ ಗಳ ದೊಡ್ಡ ಸಂಗ್ರಹವೇ ಅಲ್ಲಿತ್ತು. ಹಲವಾರು ಬಗೆಯ ಪರಿಮಳದ ಯಾರ್ಡ್ಲೆ ಕೊಂಡುಕೊಂಡೆ. ಅಂತೆಯೇ ಊರಿಗೆಂದು ತುಂಬಾ ಚಾಕೊಲೆಟ್ ಸಹಾ ಕೊಂಡೆವು. ಬಟ್ಟೆ ಬರೆ ಎಂದು ನಮ್ಮ ಲಗ್ಗೇಜ್ ತುಂಬಿತು. ಡ್ರಾಗನ್ ಮಾಲ್ ಪೂರ್ತಿ ಚೈನಾ ಬಜಾರ್ ಇದ್ದಂತೆ. ಇದರ ಕಟ್ಟಡವು ತುಂಬಾ ಉದ್ದವಾಗಿದ್ದು ಚೈನಾ ಡ್ರಾಗನ್ ಪ್ರಾಣಿಯ ಆಕೃತಿಯಲ್ಲಿದೆ. ಇನ್ನೊಂದೆಡೆ ಬಹಳ ದೊಡ್ಡ ಎಲೆಕ್ಟ್ರೋನಿಕ್ ಮಾಲ್ ಇದೆ. ಇಲ್ಲಿ ಎಲ್ಲಾ ಹೊಸ ಬಗೆಯ ಎಲೆಕ್ಟ್ರೋನಿಕ್ ವಸ್ತುಗಳು ಸಿಗುತ್ತವೆ. ಬೆಲೆ ತುಂಬಾ ಕಡಿಮೆ.
ಶುಕ್ರವಾರ ಶನಿವಾರ ಇಲ್ಲಿ ರಜಾದಿನ. ಹಾಗಾಗಿ ರವಿಯ ಫ್ಯಾಮಿಲಿ ಮತ್ತು ನಾವಿಬ್ಬರೂ ಅಬುಧಾಬಿಗೆ ಹೋದೆವು. ಸುಮಾರು 1 1/2 ಘಂಟೆಯ ಕಾರು ಪ್ರಯಾಣ. 120 ಕಿ.ಮಿ.
ಅಗಲವಾದ 6 ಲೇನ್ ರಸ್ತೆ. ಮಧ್ಯದಲ್ಲಿ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ದಾರಿಯುದ್ದಕ್ಕೂ ಖರ್ಜೂರದ ಮರಗಳನ್ನು ಬೆಳೆಸಿದ್ದಾರೆ. ನಾವು ಹೋದ ಸಮಯದಲ್ಲಿ ಚೆನ್ನಾಗಿ ಬಲಿತ ಖರ್ಜೂರದ ಗೊನೆಗಳು ಇಳಿಬಿದ್ದಿದ್ದವು. ಕೆಂಪು, ಅರಸಿನ ಬಣ್ಣದ ಈ ಹಣ್ಣುಗಳನ್ನು ನೋಡುವುದೇ ಒಂದು ಆನಂದ. ಒಂದೆಡೆ ಕಾರು ನಿಲ್ಲಿಸಿ ಕೆಲವು ಹಣ್ಣುಗಳನ್ನು ಕೊಯ್ದು ರುಚಿ ನೋಡಿದೆವು.
ಚೆನ್ನಾಗಿತ್ತು. ಸರಿಯಾಗಿ ಹಣ್ಣಾದಮೇಲೆ ಇವುಗಳನ್ನೂ ಕೊಯ್ಲು ಮಾಡಿ ಒಣಗಿಸುತ್ತಾರೆ. ಮರುಭೂಮಿಯಲ್ಲಿ ಎಷ್ಟು ಹುಲುಸಾಗಿ ಈ ಬೆಳೆ ಬರುತ್ತದೆ ಎಂದಾಗ ಆಶ್ಚರ್ಯ ವಾಗುತ್ತದೆ. ಖರ್ಜೂರದ ಮರಗಳು ಅರಬ್ ದೇಶದ ರಾಷ್ಟ್ರೀಯ ವೃಕ್ಷ! ಅಬುಧಾಬಿ ತಲಪುತಿದ್ದಂತೆ ಗಗನಚುಂಬಿಗಳು ಕಾಣಲು ಪ್ರಾರಂಭ. ಆದರೂ ದುಬೈನಲ್ಲಿ ಇದ್ದಷ್ಟು ಎತ್ತರದ್ದು ಇಲ್ಲಿಲ್ಲ. ಬಾಕಿ ಎಲ್ಲಾ ದುಬೈನಂತೆಯೇ ಇದೆ. ನಾವೂ ಮೊದಲಿಗೆ ರವಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಆಮೇಲೆ ತಿರುಗಾಡಲು ಹೋದೆವು.
ಯಥಾಪ್ರಕಾರ ಮಾಲ್ ಗಳು, ದೊಡ್ಡದೊಂದು 5 ಸ್ಟಾರ್ ಹೋಟೆಲ್ ಗೂ ಭೇಟಿ ಕೊಟ್ಟೆವು.
ಅಬುಧಾಬಿ, ಪೆಟ್ರೋಲ್ ಉತ್ಪಾದಿಸುವ ದೇಶ. ಬಹಳ ಶ್ರೀಮಂತ ದೇಶ. ಅಲ್ಲಿಂದ ರಾತ್ರಿ ವಾಪಸು ಮನೆಗೆ ಬಂದೆವು.
ಮರುದಿನ ನಾವು ಅಲ್ಲಿನ ದೊಡ್ಡದೊಂದು ಪಾರ್ಕ್ ಗೆ ಹೋಗಿದ್ದೆವು. ನಂತರ ಕಡಲ ಕಿನಾರೆಯಲ್ಲಿರುವ ದುಬೈ ನ ಆಕರ್ಷಣೆಯಲ್ಲೊಂದಾದ ಬುರ್ಜ್ ಅಲ್ ಅರಬ್ ಎಂಬ ಬಹು ದೊಡ್ಡ ಹೋಟೆಲ್ ನ ಪಕ್ಕ ಹೋಗಿದ್ದೆವು.
ಇದೊಂದು ದೊಡ್ಡ ಹಾಯಿಹಡಗಿನ ಆಕೃತಿ ಹೊಂದಿದ ಅತ್ಯಾಧುನಿಕ ಹೋಟೆಲ್. ಎಲ್ಲಾ ಹೋಟೆಲ್ ಗಳು ಪಂಚತಾರಾ ಹೋಟೆಲ್ ಆದರೆ ಇದು ಸಪ್ತ ತಾರಾ ಹೋಟೆಲ್! ಇದಕ್ಕೆ 60 ಮಹಡಿಗಳಿವೆ. ಇದರ ಮೇಲ್ಗಡೆ ಒಂದು ಈಜುಕೊಳ ಹಾಗೂ ಹೆಲಿಪ್ಯಾಡ್ ಸಹಾ ಇದೆ. ಸಾಲದ್ದಕ್ಕೆ ಒಂದು ಟೆನ್ನಿಸ್ ಕೋರ್ಟ್! ಇಲ್ಲಿನ ರೂಮುಗಳು ಬಲು ದುಬಾರಿಯಂತೆ. ಆದರೂ ರೂಮು ಬೇಕಾದಲ್ಲಿ ಬಹಳ ಮುಂಚಿತವಾಗಿಯೇ ಬುಕ್ ಮಾಡಬೇಕಂತೆ. ಈ ಕಟ್ಟಡಕ್ಕೆ ಹೊರಗಿನಿಂದ ಬಣ್ಣ ಬಣ್ಣದ ಬೆಳಕನ್ನು ಬೀರುತ್ತಾರೆ, ಕ್ಷಣ ಕ್ಷಣಕ್ಕೂ ತನ್ನ ಬಣ್ಣವನ್ನೂ ಬದಲಾಯಿಸುತ್ತಾ ಇರುತ್ತದೆ.
ಮರುದಿನ ಶ್ರೀಹರಿ ಬಂದು ನಮ್ಮನ್ನು ಅವರ ಮನೆಗೆ ಕೊಂಡೊಯ್ದನು. ಅವನ ಪತ್ನಿ ದಿವ್ಯಾ, ಮಕ್ಕಳು ಅಶು ಮತ್ತು ಅನ್ವಿತಾ ನಮ್ಮನ್ನು ಸ್ವಾಗತಿಸಿದರು. ಆ ದಿನ ನಾವು ಇಲ್ಲಿನ ಬಹುದೊಡ್ಡ ಚಿನ್ನದ ಮಾರ್ಕೆಟ್ ಗೆ ಹೋದೆವು.
ಇದನ್ನು ಅಲ್ಲಿ ಗೋಲ್ಡ್ ಸೂಕ್ ಎನ್ನುತ್ತಾರೆ. ಇದನ್ನು ವಿವರಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ. ಅಬ್ಭಾ ಎಷ್ಟೊಂದು ಮಳಿಗೆಗಳು ! ಎಲ್ಲಿ ನೋಡಿದರೂ ಚಿನ್ನ! ಹೌದು ಚಿನ್ನದ ಆಭರಣಗಳ ಅದ್ಬುತ ಪ್ರದರ್ಶನ! ಬೇರೆ ವಸ್ತುಗಳ ಅಂಗಡಿಗಳೇ ಇಲ್ಲ. ಬರೇ ಚಿನ್ನ ಮತ್ತು ವಜ್ರ ಮತ್ತಿತರ ಅಮೂಲ್ಯ ಹರಳುಗಳ ಆಭರಣಗಳು. ಎಷ್ಟೊಂದು ವಿನ್ಯಾಸ! ನೋಡಿ ನೋಡಿ ನಮ್ಮ ಕಣ್ಣುಗಳೇ ದಣಿದವು.
ಇಲ್ಲಿ ಹೆಚ್ಚಿನ ಅಂಗಡಿಗಳು ನಮ್ಮ ಭಾರತ ದೇಶದವು ಎಂದು ತಿಳಿದು ಹೆಮ್ಮೆಯಾಯಿತು. ಜನರು ಚಿನ್ನ ಕೊಳ್ಳುತಿದ್ದಾರೆ, ನಮ್ಮಂತಹ ಯಾತ್ರಿಕರು ಅದನ್ನು ನೋಡಿ ಸಂತೋಷಪಟ್ಟುಕೊಳ್ಳುತಿದ್ದಾರೆ. ನಾವು ಕೆಲ ಅಂಗಡಿಗಳ ಒಳಗೆ ಹೋಗಿ ನೋಡಿ ಬಂದೆವು. ಯಾವುದೇ ಅಡ್ಡಿಗಳಿಲ್ಲದೆ ಒಳಗೆ ಹೋಗಿ ನೋಡಬಹುದು. ಅಂಥಹ ಹೇಳಿಕೊಳ್ಳುವಂತಹ ಸೆಕ್ಯೂರಿಟಿ ಇಲ್ಲಿಲ್ಲ.
ನಮ್ಮ ಮುಂದಿನ ತಾಣ ಅಲ್ ಐನ್ ಎಂಬ ಬೆಟ್ಟ ಪ್ರದೇಶಕ್ಕೆ. ಸುಮಾರು 140 ಕಿ.ಮಿ. ದೂರ. ಇದೊಂದು ದೊಡ್ಡ ಬೆಟ್ಟಗಳ ಸಮೂಹವಾಗಿದ್ದು ಮೇಲೆ ಹೋಗಲು ಸೊಗಸಾದ ರಸ್ತೆ ಇದೆ.
ಬೆಟ್ಟವು ಬೋಳು ಬೋಳಾಗಿದ್ದು ಅಲ್ಲಲ್ಲಿ ಖರ್ಜೂರದ ಮರ ಮತ್ತು ಇತರ ಮರಗಳಿವೆ. ಆದರೆ ವಿಚಿತ್ರವಾದ ಒಂದು ಸಂಗತಿಯನ್ನು ಕಂಡೆವು. ಅದೇನೆಂದರೆ ಪೂರ್ತಿ ಬೆಟ್ಟಕ್ಕೆ ಹಸಿರು ಹುಲ್ಲನ್ನು ಹೊದಿಸುವ ಕೆಲಸ. ಒಂದು ವಿಶೇಷ ಬಗೆಯ ಸಸ್ಯವನ್ನು ಬೆಳೆಸಿದ್ದಾರೆ. ಇದು ನೆಲದಲ್ಲಿ ಹರಡುತ್ತಾ ಹಬ್ಬುತ್ತದೆ. ಸುಮಾರು 60% ಬೆಟ್ಟವನ್ನು ಇದು ಆವರಿಸಿ ಹಸಿರು ಕಂಬಳಿ ಹೊದೆಸಿದಂತಿದೆ.
ಹಸಿರು ಬೆಳೆಸಲು ಇವರು ಅದೆಷ್ಟು ಕಷ್ಟಪಡುತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇಲ್ಲಿ ಒಂದು ಬಿಸಿನೀರಿನ ಊಟೆ ಇದೆ, ಸದಾ ಇದರಿಂದ ಬಿಸಿನೀರು ಉಕ್ಕಿ ಹರಿದು ಒಂದು ಪುಟ್ಟ ಕಾಲುವೆಯಂತೆ ಹರಿಯುತ್ತದೆ. ಮಕ್ಕಳು, ನಾವೆಲ್ಲ ಇದರಲ್ಲಿ ಆಟ ಆಡಿದೆವು.
ಇನ್ನೂ ಮೇಲ್ಗಡೆ ಒಂದು ವಿಶಾಲ ಜಾಗವಿದೆ. ಅಲ್ಲಿಂದ ನೋಡಿದರೆ ಪೂರ್ತಿ ಬೆಟ್ಟ ಸಮೂಹದ ದರ್ಶನವಾಗುತ್ತದೆ. ಇಲ್ಲಿ ನಮ್ಮ ಕೆಲವು ಹಿಂದಿ ಸಿನೆಮಾದ ಶೂಟಿಂಗ್ ನಡೆದಿದೆಯಂತೆ. ಸೊಗಸಾದ ಜಾಗ.
ನಾವು ಶಾರ್ಜಾವನ್ನೂ ನೋಡಿದೆವು. ದುಬೈ ನಿಂದ ಕೇವಲ 12. ಕಿ.ಮಿ. ದೂರ ಅಷ್ಟೇ. ಆದರೆ ಪೀಕ್ ಹವರ್ ತಪ್ಪಿಸಿಕೊಂಡು ಹೋಗಬೇಕು. ಇಲ್ಲವಾದರೆ ಟ್ರಾಫಿಕ್ ಜಾಮ್ ಇರುತ್ತದೆ. ಇದು ಸಹಾ ದೊಡ್ಡ ಪಟ್ಟಣ. ಇಲ್ಲೂ ಒಂದು ದೊಡ್ಡ ಗೋಲ್ಡ್ ಸೂಕ್ ಇದೆ. ಮಾಲ್ ಗಳೂ ಇವೆ.
ಒಂದು ದೊಡ್ಡ ಲೇಕ್ ಇದೆ. ಎಲ್ಲಾ ನೋಡಿಕೊಂಡು ವಾಪಸು ಮನೆಗೆ ಬಂದೆವು. ಇನ್ನೂ ಕೊನೆಯದಾಗಿ ನಾವೂ ಹೋದದ್ದು ಜುಮೈರಾ ಎಂಬಲ್ಲಿಗೆ. ಇಲ್ಲಿಯೇ ಜಗತ್ತಿನ ಅತೀ ಎತ್ತರದ ಕಟ್ಟಡ ಇರುವುದು. ಇದನ್ನು ಬುರ್ಜ್ ದುಬೈ ಎನ್ನುತ್ತಾರೆ. ಈವಾಗ ಬುರ್ಜ್ ಖಲೀಫಾ ಎಂದು ಕರೆಯುತ್ತಾರೆ. ಇದರ ಎತ್ತರ ಸುಮಾರು 828 ಮೀಟರ್ ಎಂದರೆ 2716 ಅಡಿಗಳು! 160 ಮಹಡಿಗಳು ಮತ್ತು 40 ನಿರ್ವಹಣಾ ಫ್ಲೋರ್ ಗಳಿವೆಯಂತೆ.
ದೂರದಿಂದಲೇ ಇದು ಗೋಚರಿಸುತ್ತದೆ. ಅಂತರಿಕ್ಷಕ್ಕೆ ಹಾರಿಬಿಡಲಿರುವ ರಾಕೆಟ್ ನಂತೆ ಭಾಸವಾಗುತ್ತದೆ. ನಾವು ಹೋದಾಗ ಅದರ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿತ್ತು. ಹಾಗಾಗಿ ಅದರ ಸಮೀಪ ಹೋಗಲು ಬಿಡುತ್ತಿರಲಿಲ್ಲ. ಮುಂದೆ ನಾವು ಪಾಮ್ ಎಂದು ಪ್ರಸಿದ್ಧವಾದ ಜಾಗಕ್ಕೆ ಹೋದೆವು. ಇದರ ವಿಶೇಷವೆಂದರೆ ಇದು ಬೃಹತ್ತಾದ ಖರ್ಜೂರದ ಮರದ ಆಕೃತಿಯಲ್ಲಿದೆ. ಸಮುದ್ರಕ್ಕೆ ಬಂಡೆಗಳನ್ನು ಹಾಕಿ ಮೇಲೆ ಮಣ್ಣು ತುಂಬಿಸಿ ಅದರಲ್ಲಿ ಈ ನಗರವನ್ನು ಕಟ್ಟಿದ್ದಾರೆ.
ಖರ್ಜೂರದ ಮರದ ಗರಿಗಳ ಭಾಗದಲ್ಲಿ ದೊಡ್ಡ ದೊಡ್ಡ ವಿಲ್ಲಾ ಗಳಿವೆ. ದುಬೈನಲ್ಲೇ ಅತೀ ದುಬಾರಿ ಕಟ್ಟಡಗಳಿವು. ಇದನ್ನು ನೋಡುವಾಗ ಮನುಷ್ಯನ ಕಲ್ಪನೆಗೆ ಮಿತಿಯೇ ಇಲ್ಲ ಎಂದೆನಿಸುತ್ತದೆ. ಇದರ ಸಂಪೂರ್ಣ ಫೋಟೋ ತೆಗೆಯಬೇಕಾದರೆ ವಿಮಾನದಿಂದಲೇ ತೆಗೆಯಬೇಕಷ್ಟೆ.ಇಂತಹದೇ ಇನ್ನೂ ಕೆಲವು ನಿರ್ಮಾಣಗಳು ದುಬೈನ ಬೇರೆ ಕೆಲವು ಕಡೆಗಳಲ್ಲಿ ನಡೆಯುತ್ತಿದೆಯಂತೆ. ದುಡ್ಡಿನಲ್ಲೇ ಮುಳುಗಿರುವ ದೇಶಕ್ಕೆ ಮಾತ್ರ ಇಂತಹ ಕಾರ್ಯ ಮಾಡಲು ಸಾದ್ಯ.
ನಾವು ಹೊರಡುವ ಸಮಯವಾಯಿತು. ಎಲ್ಲರೂ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಂಡರು. ಕ್ಷೇಮವಾಗಿ, ಸವಿ ನೆನಪುಗಳೊಂದಿಗೆ ನಾವು ಬೆಂಗಳೂರಿಗೆ ತಲುಪಿದೆವು.
ವಿಷಾದವೆಂದರೆ ಜಾಗತಿಕ ಹಣಕಾಸಿನ ಮುಗ್ಗಟ್ಟು(Recession)ದುಬೈ ಗೂ ತಟ್ಟಿತು. ಹೆಚ್ಚಿನ ಎಲ್ಲಾ ಕಟ್ಟಡಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿತು. ತುಂಬಾ ಜನ ಕೆಲಸ ಕಳೆದುಕೊಂಡರು. ಕೆಲವರು ಊರಿಗೆ ಮರಳಿದರು. ತಮ್ಮ ಕಾರುಗಳನ್ನು ಮಾರಲೂ ಅವರಿಗೆ ಸಾಧ್ಯವಾಗದೆ ಅದನ್ನು ವಿಮಾನ ನಿಲ್ದಾಣದಲ್ಲೇ ಪಾರ್ಕ್ ಮಾಡಿ ಹೊರಟು ಬರಬೇಕಾಯಿತಂತೆ. ಸುಮಾರು 1000ಕ್ಕೂ ಮೇಲ್ಪಟ್ಟು, ವಾರಸುದಾರರಿಲ್ಲದ ಕಾರುಗಳು ದುಬೈ ವಿಮಾನ ನಿಲ್ದಾಣದಲ್ಲಿದ್ದವು ಎಂದು ಪೇಪರ್ ನಲ್ಲಿ ಓದಿದೆ.