ನಾವು ಈಸಲ ಇಂಗ್ಲೆಂಡ್ ನ ಕೊರ್ನ್ ವಾಲ್ ನಲ್ಲಿರುವ ನಮ್ಮ ಮಗಳ ಮನೆಗೆ ಬಂದಿರುವ ಸಂದರ್ಭದಲ್ಲಿ ಬ್ರಿಸ್ಟಲ್ ಸಿಟಿ ಯನ್ನು ನೋಡುವ ಅವಕಾಶ ಸಿಕ್ಕಿತು. ನಾವು, ನಮ್ಮ ಮಗಳು,ಅಳಿಯಂದಿರು ಮತ್ತು ಅವರ ಪುಟ್ಟ ಮಗ ಇಷ್ಟು ಜನ ಕಾರಿನಲ್ಲಿ ಸ್ಟಿಥಿಯನ್ಸ್ ನಿಂದ ಹೊರಟೆವು. ಇಲ್ಲಿಂದ ಬ್ರಿಸ್ಟಲ್ ಗೆ180 ಮೈಲು ದೂರ. ಸುಮಾರು 4 ಗಂಟೆಗಳ ಪ್ರಯಾಣ. ಇಲ್ಲಿಂದ ಟ್ರುರೋ-ಬೋಡ್ಮಿನ್ ಮಾರ್ಗವಾಗಿ ಲಾನ್ ಸ್ಟನ್, ಡೆವೊನ್, ಲಿಸ್ಕಾರ್ಡ್ ಮೊದಲಾದ ಊರುಗಳನ್ನು ದಾಟಿ ಬ್ರಿಸ್ಟಲ್ ತಲುಪಿದೆವು.

ನಮಗೆ ಉಳಕೊಳ್ಳಲು ಪ್ರೀಮಿಯರ್ ಇನ್ ಹೋಟೆಲ್ ನಲ್ಲಿ ರೂಮು ಬುಕ್ ಮಾಡಿದ್ದೆವು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಕಾಫಿ ಕುಡಿದು ತಿರುಗಾಡಲು ಹೊರಟೆವು. ಬ್ರಿಸ್ಟಲ್ ಎಂಬುದು ದೊಡ್ಡ ಊರು. ಹಳೆಯ ಕಾಲದ ಕಟ್ಟಡಗಳೂ ವರ್ತಮಾನ ಕಾಲದ ಗಗನ ಚುಂಬಿ ಕಟ್ಟಡಗಳೂ ಇಲ್ಲಿ ಹಿತ ಮಿತವಾಗಿ ಬೆರೆತಿವೆ.
ರಸ್ತೆಗಳು, ಅಂಗಡಿಗಳು ಎಲ್ಲಾ ಶುಚಿಯಾಗಿ ಒಪ್ಪವಾಗಿ ಕಾಣುತ್ತವೆ.

ಬ್ರಿಸ್ಟಲ್ ನಲ್ಲಿ ತುಂಬಾ ಕಾಲೇಜುಗಳು ಮತ್ತು ಯುನಿವರ್ಸಿಟಿ ಇರುವುದರಿಂದ ಇಲ್ಲಿ ಬಹಳ ಮಂದಿ ವಿದ್ಯಾರ್ಥಿಗಳನ್ನು ಕಾಣಬಹುದು. ಹೆಚ್ಚಾಗಿ ಭಾರತ, ಚೀನಾ, ಮತ್ತು ಆಫ್ರಿಕಾ ದೇಶಗಳ ವಿದ್ಯಾರ್ಥಿಗಳೇ ಎಲ್ಲಾ ಕಡೆ ಕಂಡು ಬರುತ್ತಾರೆ. ಅದಕ್ಕನುಗುಣವಾಗಿ ಅವರಿಗೆ ಆವಶ್ಯಕವಾದ ಹಾಸ್ಟೆಲ್ ಗಳು ಹೋಟೆಲ್ ಗಳು ದೊಡ್ಡ ದೊಡ್ಡ ಮಾಲ್ ಗಳು ಇಲ್ಲಿವೆ. ಇಲ್ಲಿನ ಅತಿ ದೊಡ್ಡ ಮಾಲ್ ಎಂದರೆ ಕೋಬಾಟ್ ಸರ್ಕಸ್. ಇದೊಂದು ದೊಡ್ಡ ಸಂಕೀರ್ಣ ಇದರಲ್ಲಿ ಅತ್ಯಾಧುನಿಕ ಫ್ಯಾಶನ್ನಿನ ಹಲವಾರು ದೊಡ್ಡ ಮಳಿಗೆಗಳಿವೆ. ಹೋಟೆಲ್ ಗಳು, ಸಿನೆಮಾ ಮಂದಿರಗಳು ಎಲ್ಲಾ ಇವೆ.

ಇಲ್ಲಿ ನಾವು ತುಂಬಾ ಹೊತ್ತು ತಿರುಗಾಡಿದೆವು, ಹೆಚ್ಚಿನ ಎಲ್ಲಾ ಮಳಿಗೆಗಳ ಒಳಗಡೆಗೆ ಹೋಗಿ ಶಾಪಿಂಗ್ ಮಾಡಿದೆವು.
ತಿರುಗಾಡಿ ಸುಸ್ತಾದಾಗ ಒಂದು ರೆಸ್ಟುರಾ ಗೆ ಹೋಗಿ ತಿಂಡಿ, ಐಸ್ ಕ್ರೀಂ ತಿಂದೆವು. ಮರುದಿನ ಇನ್ನೊಂದು ದಿಕ್ಕಿನಲ್ಲಿ ಊರು ನೋಡಲು ಹೋದೆವು. ಇಲ್ಲಿನ ಸಿಟಿ ಕೌನ್ಸಿಲ್ ಕಟ್ಟಡ ಮತ್ತು ಅದರ ಸುತ್ತಲ ಪರಿಸರ ಬಹಳ ಸೊಗಸಾಗಿದೆ.

ಅರ್ಧ ಚಂದ್ರಾಕೃತಿಯಲ್ಲಿ ಇದನ್ನು ಕಟ್ಟಿದ್ದಾರೆ ಎದುರುಗಡೆ ನೀರಿನ ಕೊಳವಿದೆ, ಎದುರುಗಡೆ ದೊಡ್ಡ ಹುಲ್ಲುಗಾವಲು, ಹೂವಿನ ಮಡಿಗಳು ಎಲ್ಲಾ ಬಹಳ ಸುಂದರವಾಗಿದೆ. ಅಲ್ಲಲ್ಲಿ ಕುಳಿತುಕೊಳ್ಳಲು ಆಕರ್ಷಕ ಬೆಂಚುಗಳಿವೆ. ಅಲ್ಲೆಲ್ಲ ಸುತ್ತಾಡಿ ದೆವು. ದೂರದಲ್ಲಿ ಒಂದು ಎತ್ತರದ ಪುತ್ತಳಿ ಕಾಣಿಸಿತು, ಯಾರದ್ದಿರಬಹುದು ಎಂಬ ಕುತೂಹಲದಿಂದ ಹೋಗಿ ನೋಡಿದರೆ ನಮಗೆ ಆಶ್ಚರ್ಯವಾಯಿತು. ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ ಆಕರ್ಷಕ ಪುತ್ತಳಿ ಅದು! ಇದೇ ರೀತಿ ಇಲ್ಲಿನ ದೊಡ್ಡ ವಸ್ತು ಸಂಗ್ರಹಾಲಯದಲ್ಲಿ ಸಹಾ ಇವರ ಬಹಳ ದೊಡ್ಡ ಪೆಯಿಂಟಿಂಗ್ ಇರಿಸಿದ್ದಾರೆ.

ಇಲ್ಲೇ ಪಕ್ಕದಲ್ಲಿ ಒಂದು ದೊಡ್ಡ ಕೆಥೆಡ್ರಲ್ ಇದೆ. ಒಳಗಡೆ ಯಾರೂ ಇರಲಿಲ್ಲ. ಬಹಳ ಸುಂದರವಾದ ಕಟ್ಟಡ, ಒಳಗಡೆಯ ವಿನ್ಯಾಸ, ಕಂಬಗಳು, ಬಣ್ಣ ಬಣ್ಣದ ಗಾಜಿನಿಂದ ರಚಿಸಿದ ಕಿಡಕಿಗಳು, ಆಸನಗಳು, ಕಟಾಂಜನ ಎಲ್ಲಾ ಸುದರವಾಗಿತ್ತು.

ಆಲ್ಲಿಂದ ಸ್ವಲ್ಪ ದೂರ ನಡೆದರೆ ಬ್ರಿಸ್ಟಲ್ ಯುನಿವರ್ಸಿಟಿ ಕಟ್ಟಡ ಸಿಗುತ್ತದೆ. ಇದರ ವೈಶಿಷ್ಟ್ಯವೇನೆಂದರೆ ಇದು ದೊಡ್ಡ ಕೆಥೆಡ್ರಲ್ (Cathedral) ನಂತೆ ಕಾಣುತ್ತದೆ. ಹತ್ತಿರ ಹೋದಾಗಲೇ ತಿಳಿಯುವುದು ಇದು ಯುನಿವರ್ಸಿಟಿ ಅಂತ.

ಇದರ ಪಕ್ಕದಲ್ಲೇ ಬ್ರಿಸ್ಟಲ್ ಸಿಟಿ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಈಜಿಪ್ಟ್ ನ ಮಮ್ಮಿಗಳು ಅಲ್ಲಿನ ಸಂಸ್ಕೃತಿ ಯನ್ನು ಬಿಂಬಿಸುವ ಹಲವು ವಸ್ತುಗಳು ಇವೆ. ಚೀನಾ ದೇಶದ ಪಿಂಗಾಣಿ ವಸ್ತುಗಳು, ಹಲವಾರು ಪೆಯಿಂಟಿಂಗ್ ಗಳು, ಡೈನೋಸಾರ್ ಪಳೆಯುಳಿಕೆಗಳು, ಪ್ರಾಣಿ ಪಕ್ಷಿಗಳನ್ನು ಸ್ಟಫ್ ಮಾಡಿ ಇರಿಸಿದ ಕೃತಿಗಳು, ಮಿನರಲ್ ಗಳು, ಒಂದು ಹಳೆಯ ಕಾಲದ ವಿಮಾನದ ಮಾಡೆಲ್ ಎಲ್ಲಾ ಇರಿಸಿದ್ದಾರೆ. ನೋಡಲು ಚೆನ್ನಾಗಿತ್ತು.
ಮುಂದೆ ನಾವು ಒಂದು ದೊಡ್ಡ ಕಾರಂಜಿಗಳಿಂದ ಅಲಂಕೃತಗೊಂಡ ಕಟ್ಟಡದ ಬಳಿಗೆ ಬಂದೆವು.

ಇದೂ ಒಂದು ಕಾಲೇಜು! ಬ್ರಿಟನ್ನಿನ ದೊರೆ 7 ನೆ ಎಡ್ವರ್ಡ್ ನ ಹೆಸರಲ್ಲಿರುವ ಈ ಆರ್ಟ್ ಕಾಲೇಜು ಮತ್ತು ಇಲ್ಲಿ ನೀರನ್ನು ಬಹಳ ದೂರ ಚಿಮ್ಮಿಸುವ ಕಾರಂಜಿಗಳು, ಎಡ್ವರ್ಡ್ ದೊರೆಯ ಗಂಭೀರ ನಿಲುವಿನ ಮೂರ್ತಿ ನೋಡಲು ಬಹಳ ಚೆನ್ನಾಗಿದೆ. ಬಳಪದ ಕಲ್ಲಿನಲ್ಲಿ ಕೆತ್ತಿದ ಈ ಕಲಾಕೃತಿಗಳು ಸುಂದರವಾಗಿವೆ.
ಬ್ರಿಸ್ಟಲ್ ಪಟ್ಟಣದ ಮಧ್ಯದಲ್ಲೇ ಹರಿಯುವ ಎವೊನ್ ನದಿಯಲ್ಲಿ ತುಂಬಾ ಸಣ್ಣ ಪುಟ್ಟ ನಾವೆಗಳು ಚಲಿಸುತ್ತಿರುತ್ತವೆ. ಎವೊನ್ ನದಿಯು ಇಲ್ಲಿಂದ ಹರಿದು ಪಕ್ಕದಲ್ಲೇ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಈ ನದಿಯ ಮೇಲೆ ಅತಿ ಎತ್ತರದಲ್ಲಿ ತೂಗು ಸೇತುವೆ ನಿರ್ಮಿಸಿದ್ದಾರೆ. ಬ್ರಿಸ್ಟಲ್ ತೀರವು ಕೊಲ್ಲಿಯಂತಿದ್ದು, ಇಲ್ಲಿಂದ ನೇರ ಕಾರ್ಡಿಫ್ ಎಂಬ ಬೃಹತ್ ಪಟ್ಟಣಕ್ಕೆ ಸಮುದ್ರದ ಮೇಲೆ ಸೇತುವೆ ನಿರ್ಮಿಸಿದ್ದಾರೆ.
ಬ್ರಿಸ್ಟಲ್ ನಲ್ಲಿ ತುಂಬಾ ಭಾರತೀಯ, ನೇಪಾಳಿ ಹಾಗೂ ಬಾಂಗ್ಲಾದೇಶದ ಹೋಟೆಲ್ ಗಳಿವೆ. ಚೈನೀಸ್ ಹೋಟೆಲ್ ಗಳೂ ಇವೆ. ನಾವು, @ ಬ್ರಿಸ್ಟಲ್ ಎಂಬ ಜಾಗದಲ್ಲಿರುವ ಭಾರತೀಯ ಹೋಟೆಲ್ ನಲ್ಲಿ ರಾತ್ರಿ ಊಟ ಮಾಡಿದೆವು. ಇನ್ನೊಂದು ದಿನ ಚೈನೀಸ್ ಹೋಟೆಲ್ ಗೂ ಹೋಗಿದ್ದೆವು. ಇಲ್ಲಿನ ಆಹಾರವು ರುಚಿಕರವಾಗಿದ್ದು ನಮ್ಮ ನಾಲಗೆಗೆ ಸರಿಹೊಂದುವಷ್ಟು ಖಾರ ಇರುತ್ತದೆ.
ಎರಡೂ ದಿನ ಬ್ರಿಸ್ಟಲ್ ನಲ್ಲಿದ್ದು ನಾವು ಆಲ್ಲಿಂದ ಹೊರಟು ಬಾತ್ ಮತ್ತು ಚೆಡ್ದರ್
ಕೇವ್ ನೋಡಿಕೊಂಡು ಸ್ಟಿಥಿಯನ್ಸ್ ಬಂದು ಸೇರಿದೆವು.

No comments:
Post a Comment