ಮಂಗಳೂರಿನಿಂದ ಬೆಂಗಳೂರು ಪ್ರಯಾಣ ಎಂದರೆ, ಇದರಲ್ಲೇನಿದೆ ಮಹಾ ವಿಶೇಷ ಅಂತ ಮುಖ ತಿರುಗಿಸಬೇಡಿ. ಇದು ಕಷ್ಟಕರವಾದ ಮಾಮೂಲಿ ಬಸ್ ಪ್ರಯಾಣವಲ್ಲ. ನಮ್ಮ ಪ್ರಯಾಣ ರೈಲಿನಲ್ಲಿ! ಹಗಲು ಹೊತ್ತು ಸಂಚರಿಸುವ ರೈಲಿನಲ್ಲಿ, ಅದೂ ಮಳೆಗಾಲದಲ್ಲಿ! ಈ ಪ್ರಯಾಣದ ಮಜಾ ಸಿಗಬೇಕಾದರೆ ಮಳೆಗಾಲವೇ ಸೂಕ್ತ ಸಮಯ.
ನಾವು ಆಗಸ್ಟ್ 18 ರಂದು ಬೆಳಗ್ಗೆ ಕಾಸರಗೋಡಿನಿಂದ ಬಸ್ ನಲ್ಲಿ ಮಂಗಳೂರಿಗೆ ಬಂದೆವು. ಅಲ್ಲಿಂದ 8.40ಕ್ಕೆ ಹೊರಡುವ ಬೆಂಗಳೂರು ಎಕ್ಸ್ಪ್ ಪ್ರೆಸ್ ರೈಲ್ ಹತ್ತಿದೆವು. ವಿಶೇಷ ರಶ್ ಇರಲಿಲ್ಲ. ನಮಗೆ ಬೇಕಾದ ಅನುಕೂಲಕರ ಸೀಟ್ ಆಯ್ಕೆ ಮಾಡಿ ಆರಾಮವಾಗಿ ಕುಳಿತೆವು. ಸಮಯಕ್ಕೆ ಸರಿಯಾಗಿ ರೈಲ್ ಹೊರಟಿತು. ಮೊದಲಿಗೆ ಕಂಕನಾಡಿ ಜಂಕ್ಷನ್ ಬಂತು, ಆಮೇಲೆ ಬಂಟವಾಳ, ಕಬಕ ಪುತ್ತೂರು ಕಳೆದು ಸುಬ್ರಹ್ಮಣ್ಯ ರೋಡ್ ಸ್ಟೇಷನ್ ನಲ್ಲಿ ರೈಲು ನಿಂತಿತು.
ರೈಲ್ ನಲ್ಲಿ ಚಹಾ, ಕಾಪಿ, ಇಡ್ಲಿ, ವಡೆ ಮತ್ತು ಇತರ ತಿನಸುಗಳನ್ನು ಮಾರುವವರು 5 ನಿಮಿಷಕ್ಕೊಮ್ಮೆ ಬರುತ್ತಿರುತ್ತಾರೆ. ಚಾಯ್-ಚಾಯ್ -ಚಾಯೇ ಮತ್ತು ಕಪಿ -ಕಪಿ - ಕಾಪೀಗಳನ್ನು ಕೇಳಿ ಕೇಳಿ ಸುಸ್ತಾಗುತ್ತೇವೆ. ಈ ಚಹಾ ಕಾಫಿಗಳ ರುಚಿ ಮಾತ್ರ ನಮ್ಮಿಂದ ಗುರುತಿಸಲು ಆಗುವುದೇ ಇಲ್ಲ. ಭಾರತದ ಯಾವ ಮೂಲೆಗಾದರೂ ರೈಲಿನಲ್ಲಿ ಪ್ರಯಾಣಿಸಿದರೂ ಏಕ ರುಚಿಯುಳ್ಳ ಈ ಪಾನೀಯ ಸಿಗುತ್ತದೆ. ಅನೇಕತೆಯಲ್ಲಿ ಏಕತೆಯನ್ನು ನಾವು ಈ ರೈಲಿನ ಪಾನೀಯದಲ್ಲಿ ಕಂಡುಕೊಳ್ಳಬಹುದು. ಅತ್ತ ಚಹಾವೂ ಅಲ್ಲ ಇತ್ತ ಕಾಫಿಯೂ ಅಲ್ಲ. ಚುರು ಮುರಿ ಮಾರುವವನಾದರೋ ತನ್ನ ದೊಡ್ಡ ಮೂಟೆಯೊಂದಿಗೆ ಅತ್ತಿತ್ತ ಸರಿದಾಡುವಾಗ ಹಳಸಲು ಈರುಳ್ಳಿಯ ಗಬ್ಬು, ಕುಳಿತವರಿಗೆ ಉಚಿತವಾಗಿ ದೊರೆಯುವಂತೆ ಮಾಡುತಿದ್ದ. ಇದರೆಡೆಯಲ್ಲಿ ನಮ್ಮ ಬೆಳಗ್ಗಿನ ಉಪಾಹಾರ ಸಣ್ಣ ನಿದ್ದೆ ಎಲ್ಲಾ ಆಯಿತು. ಅಲ್ಲಲ್ಲಿ ತುಂತುರು ಮಳೆ ಹಿತಕರವಾದ ವಾತಾವರಣ ನಿರ್ಮಿಸಿತ್ತು.
ಎಲ್ಲೆಡೆ ಬತ್ತದ ಗದ್ದೆಗಳಲ್ಲಿ ನಾಟಿಯ ಕೆಲಸ ನಡೆಯುತ್ತಿತ್ತು, ಎಳೆ ಹಸಿರು ಬಣ್ಣದ ನಾಟಿ ಮಾಡಿದ ಗದ್ದೆಗಳು ಚಳಿಗೆ ಹಸಿರು ಹಾಸನ್ನು ಹೊದ್ದುಕೊಂಡು ಸೋಮಾರಿಯಾಗಿ ಇನ್ನೂ ಮಲಗಿಕೊಂಡಂತಿತ್ತು. ತೆಂಗಿನ, ಕಂಗಿನ ತೋಟಗಳು ಮಳೆಯಲ್ಲಿ ಮಿಂದು ನಳ ನಳಿಸುತಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಜೀವ ನಾಡಿ ನೇತ್ರಾವತಿ ನದಿಯೂ ತುಂಬಿ ಹರಿಯುತ್ತಿತ್ತು.
ಸುಬ್ರಹ್ಮಣ್ಯ ದೇವರ ದರ್ಶನ ಮಾಡಿಕೊಂಡು ಹಿಂತಿರುಗುವ ಬಹಳ ಜನ ಇಲ್ಲಿಂದ ರೈಲು ಏರುತ್ತಾರೆ. ಈ ಸ್ಟೇಷನ್ ನಿಂದ ಸುಬ್ರಹ್ಮಣ್ಯ ದೇವಾಲಯ ಸುಮಾರು 10 ಕಿ.ಮೀ ದೂರದಲ್ಲಿದೆ. ಬೇಕಾದಷ್ಟು ವಾಹನಗಳು ಲಭ್ಯವಿದೆ. ಇಲ್ಲಿ ನಮ್ಮ ರೈಲ್ ಗೆ ಇನ್ನೊಂದು ಎಂಜಿನ್ ಜೋಡಿಸುತ್ತಾರೆ. ಮುಂದೆ ಸಿಗಲಿದೆ ಘಾಟಿ! ಏರು ದಾರಿ, ಕಡಿದಾದ ಪ್ರಪಾತ, ಅಸಂಖ್ಯಾತ ತಿರುವುಗಳು, ಸೇತುವೆಗಳು ಮತ್ತು ಪ್ರಮುಖ ಆಕರ್ಷಣೆಯಾದ ರೈಲು ಸುರಂಗಗಳು! ಇಲ್ಲಿ ಒಟ್ಟಾರೆ 58 ಸುರಂಗಗಳಿವೆ. ಸುಮಾರು ಅಷ್ಟೇ ಸೇತುವೆಗಳೂ ಇವೆ.
ಈ ಪ್ರಯಾಣದ ರೋಮಾಂಚಕ ಅನುಭವ ಇನ್ನು ಮುಂದೆ ಬರಲಿದೆ. 2 ಎಂಜಿನ್ ಗಳ ನಮ್ಮ ಗಾಡಿ ನಿಧಾನವಾಗಿ ಮುಂದೆ ಹೋಗಲಾರಂಭಿಸಿತು. ಮುಂದೆ ಸಿಗುವ ತಿರುವುಗಳು ಎಷ್ಟು ಕಡಿದಾದ್ದರೆಂದರೆ ನಮಗೆ ರೈಲಿನ ಮುಂಭಾಗ ಹಾಗೂ ಹಿಂಭಾಗಗಳು ಕುಳಿತಲ್ಲಿಂದಲೇ ಕಾಣುತಿತ್ತು.

ಈವಾಗ ಪ್ರಕೃತಿ ತನ್ನ ಇನ್ನೊಂದು ರೂಪವನ್ನು ತೋರಲು ಆರಂಬಿಸಿತು. ಕಾಡು ರೈಲು ಮಾರ್ಗದ ಎರಡೂ ಪಕ್ಕದಲ್ಲಿ ಹಬ್ಬಿಕೊಂಡಿತ್ತು. ಅಲ್ಲಲ್ಲಿ ಪುಟ್ಟ ಜಲಪಾತಗಳೂ ತೊರೆಗಳೂ ನಿಸರ್ಗದ ಬೆಡಗನ್ನು ಹೆಚ್ಚಿಸುತ್ತಿತ್ತು.
ಇದು ಪಶ್ಚಿಮ ಘಟ್ಟದ ಪ್ರಖ್ಯಾತ ಬಿಸಿಲೆ ಕಾಡು.ಸುಳ್ಯ ದಿಂದ ಸಕಲೇಶಪುರದ ವರೆಗೆ ಹಬ್ಬಿರುವ ಬಿಸಿಲೆ ಕಾಡು ಬಹಳ ವೈವಿದ್ಯಮಯ ಪ್ರಾಣಿ ಪಕ್ಷಿ, ಮರ ಮಟ್ಟುಗಳಿಂದ ಕೂಡಿದ್ದಾಗಿದೆ. ಬೆತ್ತದ ಬಳ್ಳಿಗಳಂತೂ ಹೇರಳವಾಗಿವೆ.ಅಂತೆಯೇ ಬಿದಿರ ಮೆಳೆಗಳು ಧಾರಾಳವಾಗಿವೆ.
ಇದು ಆನೆಗಳ ಪ್ರಿಯ ತಾಣ. ಶಿರಾಡಿ ಘಾಟಿಯಲ್ಲಿ ಬಸ್ ಪ್ರಯಾಣದಲ್ಲೂ ಈ ಕಾಡನ್ನು ನೋಡಬಹುದಾದರೂ ರೈಲು ಪ್ರಯಾಣದಲ್ಲಿ ಇನ್ನೂ ಹೆಚ್ಚು ಸುಂದರ, ಆಕರ್ಷಕವಾಗಿ ಕಾಣುತ್ತದೆ.
ಇಷ್ಟರಲ್ಲೇ ಶಿರಿಬಾಗಿಲು ಸ್ಟೇಷನ್ ಬಂತು. ಇಲ್ಲಿ ರೈಲು ನಿಲ್ಲುವುದಿಲ್ಲ. ಇನ್ನು ಮುಂದೆ ಶುರು ಸುರಂಗ-ಸೇತುವೆಗಳ ಜುಗಲ್ ಬಂದಿ!
ರೈಲ್ ನಲ್ಲಿದ್ದ ಯುವಕರು ಬಾಗಿಲ ಬಳಿ ಕುಳಿತುಕೊಂಡರೆ ಯುವತಿಯರೂ ಅವರನ್ನು ಸೇರಿಕೊಂಡರು. ಕ್ಯಾಮರಾ, ಮೊಬೈಲ್ ಗಳಲ್ಲಿ ಫೋಟೋ ಹಿಡಿದದ್ದೇ ಹಿಡಿದದ್ದು. ದೊಡ್ಡವರೂ ಇದರಲ್ಲಿ ಭಾಗಿಯಾಗಿದ್ದರು. ನಾನು ಸಹಾ. ಅಷ್ಟು ಸುಂದರ ದೃಶ್ಯಾವಳಿ. ಕಾಡನ್ನು ಸೀಳಿಕೊಂಡು ರೈಲು ಕೆಲವು ಸೇತುವೆಗಳನ್ನು ದಾಟಿತು.
ಅಗೋ ಮೊದಲ ಸುರಂಗ! ಸಾಕಷ್ಟು ಉದ್ದವಾಗಿತ್ತು. ಒಮ್ಮೆಲೆ ಪಡ್ಡೆಗಳ ಕಿರುಚಾಟ, ಶಿಳ್ಳೆ, ಕೇಕೆ ಎಲ್ಲಾ ಮೇಳೈಸಿದವು. ಸುರಂಗ ಪ್ರಯಾಣಕ್ಕೆ ಸ್ವಯೋಜಿತ ಹಿಮ್ಮೇಳ! ಓಟ್ಟು ಮಜಾ ಆಯಿತು. ಈ ಸೌಭಾಗ್ಯ ಪೂರಾ 58 ಸುರಂಗ ದಾಟುವವರೆಗೂ ನಮಗೆ ಲಭಿಸಿತ್ತು. ಕೆಲವು ಸುರಂಗಗಳಂತೂ 2ಕಿ.ಮೀ.ಗೂ ಹೆಚ್ಚು ಉದ್ದವಿತ್ತು. ಜೋರಾಗಿ ಮಳೆ ಸುರಿಯುತಿತ್ತು, ಸುರಂಗ ದಾಟಿ ಆಕಡೆ ಒಳ್ಳೆಯ ಬಿಸಿಲು!
ಸೇತುವೆಯ ಮೇಲೆ ರೈಲು ಹೋಗುತ್ತಿರುವಾಗ ಕೆಳಗಡೆ ಸುಮಾರು 150 ಅಡಿ ಆಳದಲ್ಲಿ ಕೆಂಪು ಹೊಳೆ ಹರಿಯುತ್ತಿತ್ತು.
ಮುಂದೆ ಇದೇ ಹೊಳೆ ನೇತ್ರಾವತಿ ನದಿಯಾಗಿ ರೂಪುಗೊಳ್ಳುತ್ತದೆ. ಎಡಕುಮೇರಿ ಹತ್ತಿರ ಬಂದಂತೆಲ್ಲಾ ದೂರದ ಪರ್ವತಗಳು ಮಂಜಿನ ತೆರೆ ಮುಸುಕಿಕೊಂಡು ಸ್ವರ್ಗ ಸಮಾನ ದೃಶ್ಯಾವಳಿಯನ್ನು ನಮಗೆ ಪುಕ್ಕಟೆಯಾಗಿ ನೀಡುತಿದ್ದವು.
ಎಡಗಡೆ ಪರ್ವತಮಾಲೆಯ ಸೊಬಗಾದರೆ ಬಲಗಡೆ ದಟ್ಟವಾದ, ಕಡಿದಾದ ಕಾಡು. ಮಳೆಗಾಲದಲ್ಲಿ ಅಷ್ಟೆತ್ತರದಿಂದ ಧುಮುಕುವ ಜಲಪಾತಗಳು!
ಯಾವುದನ್ನು ನೋಡುವುದು ಯಾವುದನ್ನು ಬಿಡುವುದು ಎಂಬ ಗೊಂದಲವಾಗುತ್ತದೆ. ಈ ಮಾರ್ಗದಲ್ಲಿ ಅತೀ ಸುಂದರ ತಾಣವೆಂದರೆ ಎಡಕುಮೇರಿ ಸ್ಟೇಷನ್ ನ ಅಕ್ಕಪಕ್ಕ. ಇಲ್ಲಿ ರೈಲು ನಿಲ್ಲುವುದಿಲ್ಲ.
ಆದರೆ ಕೆಲವೊಮ್ಮೆ ಸಿಗ್ನಲ್ ತೊಂದರೆಯಿಂದಾಗಿ ಸ್ವಲ್ಪ ಹೊತ್ತು ನಿಲ್ಲುವುದೂ ಇದೆ. ಈ ಜಾಗಗಳೆಲ್ಲಾ ನನಗೆ ಚಿರಪರಿಚಿತ, ಎರಡು ಬಾರಿ ಇಲ್ಲೆಲ್ಲಾ ಚಾರಣ ಮಾಡಿ ಅನುಭವವಿದೆ. ಇಲ್ಲಿ ಕಾಡಲ್ಲಿ ರಾತ್ರಿ ಕಳೆದದ್ದೂ ಒಂದು ರೋಮಾಂಚಕ ನೆನಪು. ನಾವು ಅಂದು ರಾತ್ರಿ ಕ್ಯಾಂಪ್ ಮಾಡಿದ ಜಾಗವನ್ನೂ ಕಸ್ತೂರಿಗೆ ತೋರಿಸಿದೆ.
ಇಲ್ಲಿನ ಅರಮನೆ ಬೆಟ್ಟ, ಅದರ ಎದುರುಗಡೆಯ ದೋಣಿಗಲ್ ಬೆಟ್ಟಗಳು ಚಾರಣಕ್ಕೆ ಉತ್ತಮ ತಾಣಗಳು. ವರ್ಷ ಪೂರ್ತಿ ಇಲ್ಲಿ ನೀರು ಇರುವುದರಿಂದ ಬಹಳ ಅನುಕೂಲವಾಗಿದೆ. ಆದರೆ ಇಲ್ಲಿ ಕಾಡಾನೆ ಗಳೂ ಸಾಕಷ್ಟಿವೆ. ಎಚ್ಚರದಿಂದಿರಬೇಕು.
ಎಡಕುಮೇರಿಯನ್ನು ಹಾದು ರೈಲು ಇನ್ನೂ ಹಲವಾರು ಸುರಂಗ-ಸೇತುವೆ ದಾಟಿ ದೋಣಿಗಲ್ ಸ್ಟೇಷನ್ ಕಳೆದ ಕೂಡಲೇ ಪಕ್ಕದಲ್ಲಿ ಒಂದು ಸುಂದರ ಜಲಪಾತ ಕಾಣುತ್ತದೆ. ಇದು ರೈಲ್ ನ ಎಡಭಾಗಕ್ಕಿದೆ. ಎಷ್ಟು ಸಮೀಪವೆಂದರೆ ಅದರ ನೀರು ಕೈಗೆ ಎಟಕುವಂತಿದೆ. ಮುಂದೆ ಸಕಲೇಶಪುರ. ಅಲ್ಲಿ ಒಂದು ಎಂಜಿನ್ ಕಳಚುತ್ತಾರೆ. ಮುಂದೆ ಬಯಲು ಸೀಮೆ.
ಹಾಸನ-ಅರಸೀಕೆರೆ- ತುಮಕೂರು ಮಾರ್ಗವಾಗಿ ಬಯಲು ಸೀಮೆಯ ಸೊಬಗನ್ನು ತೋರುತ್ತಾ ಯಶವಂತಪುರವನ್ನು 7.20ಕ್ಕೆ ತಲುಪಿದೆವು. ಅಲ್ಲಿಂದ ಮನೆಗೆ.
ಆರಾಮವಾದ ಪ್ರಯಾಣ. ಟಿಕೆಟ್ ಚಾರ್ಜ್ ಕೇವಲ 102 ರು. ಹಿರಿಯ ನಾಗರಿಕರಾದರೆ ಇನ್ನೂ ಕಡಿಮೆ. ನೀವೂ ಒಮ್ಮೆ ಅನುಭವಿಸಿ ನೋಡಿ.