ಕೊರ್ನ್ ವಾಲ್ ಎಂಬ ಊರು ಇರುವುದು ಇಂಗ್ಲೆಂಡ್ ದೇಶದ ಪಶ್ಚಿಮ-ದಕ್ಷಿಣ ಭಾಗದ ಕೊನೆಯಲ್ಲಿ. ಮೂರೂ ಕಡೆಯಲ್ಲಿ ಸಮುದ್ರದಿಂದ ಸುತ್ತುವರೆದಿದ್ದು ಪೂರ್ವ ಭಾಗವು ಡೆವೊನ್ ಕೌಂಟಿಗೆ ಹೊಂದಿಕೊಂಡಿದೆ. ನಮ್ಮ ದೇಶದ ಕನ್ಯಾಕುಮಾರಿಯನ್ನು ನೆನಪಿಸುತ್ತದೆ. ಉತ್ತರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣದಲ್ಲಿ ಇಂಗ್ಲಿಷ್ ಚಾನೆಲ್ ಇದೆ. ಹಾಗಾಗಿ ಇಲ್ಲೆಲ್ಲಾ ಬೀಚ್ ಗಳೇ ಕಾಣಸಿಗುವುದು. ಆದರೆ ನಮ್ಮ ಊರಿನಲ್ಲಿರುವ ಹಾಗೆ ಉದ್ದಕ್ಕೆ ಮೈಲುಗಟ್ಟಲೆ ಚಾಚಿರುವುದಲ್ಲ, ಎತ್ತರವಾದ ಮತ್ತು ಕಡಿದಾದ ಬೆಟ್ಟಗಳ ತಳಭಾಗದಲ್ಲಿ ಜೋರಾಗಿ ಆರ್ಭಟಿಸುವ ಕಡಲು. ಇಂತಹ ನೂರಾರು ಜಾಗಗಳು ಈ ಕೌಂಟಿಯಲ್ಲಿವೆ.
--

--
--

--
ಮೂರೂ ಕಡೆ ಸಮುದ್ರವಿರುವುದರಿಂದ ಇಲ್ಲಿನ ಹವೆ ಸಹಾ ಇಂಗ್ಲೆಂಡಿನ ಹವೆಗಿಂತ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಇಲ್ಲಿ ಸರಾಸರಿ 4 ರಿಂದ 19 ಡಿಗ್ರಿ ಉಷ್ಣತೆ ಇರುತ್ತದೆ. ಸಾಧಾರಣ ಮಳೆ, ಮತ್ತು ಕೆಲವೊಂದು ದಿನಗಳಲ್ಲಿ ಹಿಮಪಾತ ಸಹಾ ಆಗುತ್ತದೆ.
-----

---
ಇಡೀ ಇಂಗ್ಲೆಂಡ್ ದೇಶದಲ್ಲೇ ಇದು ಅತ್ಯಂತ ಸುಂದರ ಪ್ರದೇಶ ಎಂದು ಹೆಸರುವಾಸಿಯಾಗಿದೆ. ಸಣ್ಣಪುಟ್ಟ ಬೆಟ್ಟ, ಕಣಿವೆ, ಕಾಡುಗಳು ಮತ್ತು ನದಿಗಳಿಂದ ಕೂಡಿದ ಈ ಪ್ರದೇಶವು ತನ್ನ ಹೂದೋಟಗಳಿಗಾಗಿ ಪ್ರಸಿದ್ದವಾಗಿದೆ.
---

---
--

--

--

---

---

--

--
ಸುಮಾರು 3500 ಚದರ k.m. ವಿಸ್ತೀರ್ಣವಿರುವ ಇಲ್ಲಿ 50 ಕ್ಕಿಂತ ಹೆಚ್ಚು ದೊಡ್ಡ ಪ್ರಖ್ಯಾತವಾದ ಹೂದೋಟವಿದೆ. ಅಂತೆಯೇ ಹೆಸರುವಾಸಿಯಾದ ಕೋಟೆ ಕೊತ್ತಲಗಳು ಇವೆ, ಸಾಮಂತರುಗಳ ಭವ್ಯ ಭವನಗಳು ಇವೆ. ಹಾಗಾಗಿ ಇದೊಂದು ಪ್ರವಾಸಿ ಸ್ವರ್ಗ! ಇಲ್ಲಿನ ಒಟ್ಟಾರೆ ಜನ ಸಂಖ್ಯೆ 5.5 ಲಕ್ಷ. ಇಲ್ಲಿನ ನಾಗರಿಕರು ಹೆಚ್ಚಾಗಿ ಸಮುದ್ರಯಾನ ಮತ್ತು ಜಲ ಸೇನೆಯಲ್ಲಿ ಸೇವೆ ಮಾಡಿ ನಿವೃತ್ತರಾದವರು. ಇವರನ್ನು ಕೊರ್ನಿಶ್ ಜನರು ಎಂದು ಕರೆಯುತ್ತಾರೆ, ಇವರ ಇಂಗ್ಲಿಷ್ ಭಾಷೆಯ ಧಾಟಿಯೂ ಸ್ವಲ್ಪ ಬೇರೆಯದಾಗಿದ್ದು ತನ್ನದೇ ಆದ ಒಂದು ಸೊಗಡನ್ನು ಹೊಂದಿದೆ. ಬಹಳ ಕಾಲದ ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಕೊರ್ನ್ ವಾಲ್ , ಗ್ರೇಟ್ ಬ್ರಿಟನ್ನಿ ನೊಂದಿಗೆ ಸೇರಿಕೊಂಡಿತು. ಇಂಗ್ಲೆಂಡನ್ನು ಆಳಿದ ಪ್ರಖ್ಯಾತ ರಾಜರುಗಳಲ್ಲಿ ಬಹಳ ಹೆಸರಾಂತ ರಾಜನಾದ ಆರ್ಥರ್ ದೊರೆ ಕೊರ್ನ್ ವಾಲ್ ನ ಟಿಂತಾಜೆಲ್ (Tintaajel) ಕೋಟೆಯಲ್ಲಿ ಹುಟ್ಟಿದ್ದನಂತೆ. ಈ ಕೋಟೆಯ ಅವಶೇಷಗಳು ಸಮುದ್ರ ದಡದಲ್ಲಿ ಎತ್ತರವಾದ ಜಾಗದಲ್ಲಿ ಈವಾಗಲೂ ಇದ್ದು ಒಂದು ಆಕರ್ಷಕ ಪ್ರವಾಸಿ ಸ್ಥಳವಾಗಿದೆ.
--

--
--

--
ಅಂತೆಯೇ ಮೆರಿಜಿಯೋನ್ ನಲ್ಲಿರುವ ಸೈಂಟ್ ಮೈಕೆಲ್ಸ್ ಮೌಂಟ್, ಸಮುದ್ರದ ಮದ್ಯದಲ್ಲಿದ್ದು ಒಂದು ಪುಟ್ಟ ನಡುಗಡ್ಡೆಯ ಮೇಲೆ ಕಟ್ಟಿರುವ ಕ್ಯಾಸೆಲ್! ಇಲ್ಲಿ ಒಂದು ಚರ್ಚು ಸಹಾ ಇದೆ. ಭರತದ ಸಮಯದಲ್ಲಿ ಸಮುದ್ರವು ಇದನ್ನು ಸುತ್ತುವರಿದು ಒಂದು ದ್ವೀಪವಾಗುತ್ತದೆ, ಇಳಿತದ ಸಮಯದಲ್ಲಿ ಈಕಡೆಯಿಂದ ಅಲ್ಲಿಯವರೆಗೆ ನಡೆದೇ ಹೋಗಬಹುದು.

ಇಲ್ಲಿನ ಹೂದೋಟಗಳ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆ ಎನಿಸುತ್ತಿದೆ. ಒಂದೊಂದು ತೋಟವೂ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿದೆ. ಲ್ಯಾನ್ ಹೈಡ್ರೋಕ್ ತೋಟದೊಳಗೆ ಆಗಿನ ಕಾಲದ ಟ್ಯುದರ್ ನ (Tudar) ಭವ್ಯ ಭವನವಿದೆ.ಈಗಲೂ ಸಹಾ ಅದನ್ನು ಹಿಂದಿನ ಅದೇ ವೈಭವದಲ್ಲಿ ಇರಿಸಿದ್ದಾರೆ.
--

--
--

--
--

--
--

--
ಇಲ್ಲಿ ವಿಶಾಲವಾದ ಹುಲ್ಲು ಹಾಸು ಅಲ್ಲಲ್ಲಿ ದೊಡ್ಡ ಮರಗಳು, ವಿವಿಧ ಬಗೆಯ ಹೂ ಬಿಡುವ ಮರ ಗಿಡಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಬೆಳೆಸಿದ್ದಾರೆ. ಅದೇ ತರಹ ಇತರ ಪ್ರಸಿದ್ಧ ಹೂದೊಟಗಳಾದ ಥ್ರೆಭಾ, ಟ್ರೆಂಗ್ವಿಟಿಯನ್, ಟ್ರೆಲಿಸಿಕ್, ಕೋಟ್ ಹೀಲಿ ಮತ್ತು ಗ್ಲೆನ್ ಡುರ್ಗನ್ ಗಳು ತಮ್ಮದೇ ಆದ ವಿಶೇಷತೆ ಹೊಂದಿದ ಪರಿಸರ, ಸಸ್ಯ, ಹೂವುಗಳು ಮತ್ತು ಹುಲ್ಲು ಹಾಸಿನಿಂದ ರಾರಾಜಿಸುತ್ತವೆ. ಈ ಎಲ್ಲಾ ತೋಟಗಳು ಬೇಸಿಗೆಯ ಕಾಲದಲ್ಲಿ ತಮ್ಮ ಪೂರ್ತಿ ಸೌಂದರ್ಯವನ್ನು ಹೊಂದುವುದರಿಂದ ಆಗ ಇವುಗಳಿಗೆ ಬೇಟಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ, ಆಗಲೇ ಪ್ರವಾಸಿ ಸೀಸನ್ ಸಹಾ ಆರಂಭವಾಗುವುದು.

ಕೊರ್ನಿಶ್ ಜನರು ತುಂಬಾ ಶಾಂತಿ ಪ್ರಿಯರು ಮತ್ತು ಎಲ್ಲರನ್ನೂ ಗೌರವದಿಂದ ಕಾಣುವರು. ಇಲ್ಲಿನ ಮುಖ್ಯ ಕೃಷಿ ಎಂದರೆ ಆಲುಗಡ್ಡೆ,ಮತ್ತು ತರಕಾರಿ. ಆದರೆ ಹೆಚ್ಚಾಗಿ ಜನರು ಹೈನುಗಾರಿಕೆ, ಕುದುರೆ, ಕುರಿ, ಲಾಮ, ಕೋಳಿ ಸಾಕಣೆ ಮಾಡುತ್ತಾರೆ. ಎಲ್ಲೆಡೆಗಳಲ್ಲೂ ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದಷ್ಟ ಪುಷ್ಟ ದನ ಕರುಗಳು, ಕುದುರೆ, ಕುರಿಗಳನ್ನು ಕಾಣಬಹುದು. ಇದಕ್ಕೆ ಸಂಭಂದಿಸಿದ ಉತ್ಸವಗಳು ಮತ್ತು ಹಬ್ಬಗಳು ಅಲ್ಲಲ್ಲಿ ನಡೆಯುತ್ತವೆ, ಆಗ ಇವುಗಳ ಪ್ರದರ್ಶನ ಸಹಾ ಇರುತ್ತವೆ.
ಕೊರ್ನ್ ವಾಲ್ ನ ಆಡಳಿತ ಕೇಂದ್ರವಾದ ಟ್ರುರೋ ಪಟ್ಟಣವು ತುಂಬಾ ಸುಂದರವಾಗಿದೆ. ಇತರ ಮುಖ್ಯ ಸ್ಥಳಗಳೆಂದರೆ ರೆಡ್ರುತ್, ಫಾಲ್ ಮೌತ್, ನ್ಯೂಕೀ, ಸೈಂಟ್ ಆಗ್ನೆಸ್, ಸೈಂಟ್ ಈವ್ಸ, ಬೋಡ್ಮಿನ್, ಫೋಯೇ, ಮೆರಿಜಿಯೊನ್ ,ಸೈಂಟ್ ಆಸ್ಟೆಲ್, ಲಿಸಾರ್ಡ್ ಮತ್ತು ಲ್ಯಾಂಡ್ಸ್ ಎಂಡ್. ಈ ಎಲ್ಲಾ ಸ್ಥಳಗಳು ಬಹಳ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶಗಳಾಗಿವೆ.
--

--
--

--
--

--
--

--
--

--
--
--
--
--
--

--
--
--
--

--
--

--
--
--
--

--
--

--
--

--
--

--
--

--
--
![]() |
From photos |
--
--
![]() |
From photos |
--

--
--
From photos |
--
--
--
--
--
--
ಲ್ಯಾಂಡ್ಸ್ ಎಂಡ್ ಎಂದರೆ ಭೂಮಿಯ ಕೊನೆ ಅಥವಾ ಅಂಚು ಎಂಧರ್ಥ. ಇಲ್ಲಿ ಬಂದಾಗ ಅದು ಹೌದೆನಿಸುತ್ತದೆ. ಇದರಾಚೆಗೆ ಅಟ್ಲಾಂಟಿಕ್ ಮಹಾಸಾಗರವು ಚಾಚಿಕೊಂಡಿದೆ. ಈ ಸ್ಥಳವು ಗ್ರೇಟ್ ಬ್ರಿಟನ್ನಿನ ದಕ್ಷಿಣದ ತುದಿಯಾಗಿದೆ.
ಮಿನ್ನಾರ್ಕ್ ಥಿಯೇಟರ್ ಇರುವುದು ಸಮುದ್ರದ ಕರೆಯಲ್ಲಿರುವ ಎತ್ತರದ ಇಳಿಜಾರು ಪ್ರದೇಶದಲ್ಲಿ. ಇದನ್ನು ಒಂದು ಎಂಫಿ ಥಿಯೇಟರ್ ಮಾದರಿಯಲ್ಲಿ ಕಟ್ಟಿದ್ದಾರೆ, ಮತ್ತು ಇಲ್ಲಿ ನಿಗದಿತ ದಿನಗಳಲ್ಲಿ ಶೇಕ್ಸ್ ಫಿಯರನ ನಾಟಕಗಳನ್ನು ಆಡುತ್ತಾರೆ. ರಾತ್ರಿಯ ಹೊತ್ತು ಸಮುದ್ರದ ಪರಿಸರದಲ್ಲಿ, ವಿಶಿಷ್ಟವಾದ ನೆರಳು ಬೆಳಕಿನ ಮತ್ತು ದ್ವನಿ ಸಂಯೋಜನೆಯ ಮಿಳಿತದಿಂದ ಕೂಡಿದ ಮಹಾನ್ ನಾಟಕ ಕಾರನ ಕೃತಿಗಳನ್ನು ನೋಡುವುದು ಒಂದು ವಿಶೇಷ ಅನುಭವ. ಅಷ್ಟು ನೈಜವಾಗಿರುತ್ತವೆ!
--

--
--

--
ಸ್ಟಿಥಿಯನ್ಸ್ ಎಂಬ ಪುಟ್ಟ ಊರು ಇರುವುದು ಟ್ರುರೋ ಪಟ್ಟಣದ ಹತ್ತಿರ. ಇಲ್ಲಿ ನಮ್ಮ ಮಗಳ ಮನೆಯಿದೆ, ಹಾಗಾಗಿ ಇಲ್ಲಿಗೆ 2-3 ಸಾರಿ ಬಂದು ಇವನ್ನೆಲ್ಲ ನೋಡಿ ಸಂತೋಷಿಸಲು ಸಾಧ್ಯವಾಯಿತು. ನಮ್ಮ ಅಳಿಯಂದಿರು NHS Cornwall partnership Trust ನಲ್ಲಿ ಹಿರಿಯ ಡಾಕ್ಟರ್ ಆಗಿದ್ದಾರೆ ಮತ್ತು ಇಲ್ಲಿನ ವಿಲೇಜ್ ಕೌನ್ಸಿಲರ್ ಸಹಾ ಆಗಿದ್ದಾರೆ. ಇತ್ತೀಚಿಗೆ ಈ ಮನೆಗೆ ಗಂಡು ಮಗುವಿನ ಆಗಮನವಾಗಿದೆ.

ಸ್ಟಿಥಿಯನ್ಸ್ ಒಂದು ಹಳ್ಳಿ, (ವಿಲೇಜ್ ) ಆದರೂ ನಮ್ಮ ಊರಿನ ಹಾಗಿಲ್ಲ. ಇಲ್ಲಿ ಸುಮಾರು 500 ಮನೆಗಳಿದ್ದು, ಒಂದು ಶಾಲೆ, ಆಸ್ಪತ್ರೆ, ಜನರಲ್ ಸ್ಟೋರ್, ಪೋಸ್ಟ್ ಆಪೀಸು, ಒಂದು ಚರ್ಚು, ಆಟದ ಮೈದಾನು, ಎಲ್ಲಾ ಇವೆ. ಮನೆಗಳು ಎಲ್ಲವೂ ಸುಂದರವಾಗಿದ್ದು, ಪ್ರತಿಯೊಂದು ಮನೆಗೂ ಒಂದು ಹೂದೋಟ, ಲಾನ್ ಇದ್ದೇ ಇರುತ್ತದೆ.
--
--
---
--

--
--

--
--

--
--

--
--
--
ಇಲ್ಲಿ ಗಗನ ಚುಂಬಿಗಳಿಲ್ಲ. ಇಲ್ಲಿನ ವಿಶೇಷತೆ ಎಂದರೆ ಕೆಲವು ಕಡೆ ಮನೆಗಳು ಬಹಳ ದೂರದಲ್ಲಿ ಏಕಾಂಗಿಯಾಗಿ ನಿರ್ಜನ ಪ್ರದೇಶದಲ್ಲಿದ್ದರೂ ಸಹಾ ಅಲ್ಲಿಯವರೆಗೆ ವಿದ್ಯುತ್ ಸೌಕರ್ಯ ಮತ್ತು ನೀರಿನ ಸರಬರಾಜು ಇದ್ದೇ ಇರುತ್ತದೆ ಮತ್ತು ಅಲ್ಲಿಯವರೆಗೆ ದಾಮಾರು ರಸ್ತೆ ಸಹಾ ಇರುತ್ತದೆ.
--

--
ಅಂಥಹ ಏಕಾಂಗಿ ಮನೆಗಳಿಗೆ ಇಲ್ಲಿ ತುಂಬಾ ಬೇಡಿಕೆ ಇದೆ ಮತ್ತು ದುಬಾರಿಯಾಗಿದೆ. ಇಲ್ಲಿ ಕಳ್ಳ ಕಾಕರ ಹಾವಳಿ ಇಲ್ಲವೇ ಇಲ್ಲ. ದೊಂಬಿ, ಗಲಭೆಗಳಿಲ್ಲದ ಪ್ರಶಾಂತವಾದ ಊರಿದು. ಎರಡೂ ಕಡೆ ಸಮುದ್ರ ಹತ್ತಿರವಾಗಿದ್ದುದರಿಂದ ಒಳ್ಳೆಯ ವಾತಾವರಣ ಇದೆ. ಆಕಡೆ 5 ಮೈಲು ಈ ಕಡೆ 6 ಮೈಲು ಹೋದರೆ ಸಮುದ್ರ ಸಿಗುತ್ತದೆ! ಇಲ್ಲಿ ಒಂದು ದೊಡ್ಡ ಮಾನವ ನಿರ್ಮಿತ ಸರೋವರವಿದೆ. ಸ್ಟಿಥಿಯನ್ ಲೇಕ್ ಅಂತ ಕರೆಯುತ್ತಾರೆ. ಇಲ್ಲಿಂದ ಕುಡಿಯುವ ನೀರು ಇಲ್ಲಿ ಸುತ್ತ ಮುತ್ತಲಿನ ಹಳ್ಳಿಗಳಿಗೆಲ್ಲಾ ಸರಬರಾಜು ಆಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನೌಕಾ ಕ್ರೀಡೆ ನಡೆಯುತ್ತದೆ. ಇದರ ಸುತ್ತು ನಡೆದಾಡಲು ಮತ್ತು ಆಣೇಕಟ್ಟಿನ ಮೇಲೆ ಹೋಗಲು ತುಂಬಾ ಸೊಗಸು. ಸ್ಟಿಥಿಯನ್ ಫೇರ್ ಮತ್ತು
ಸ್ಟಿಥಿಯನ್ ಷೋಗಳು ಇಲ್ಲಿ ಬಹಳ ಪ್ರಸಿದ್ಧ. ಊರಿನ ಎಲ್ಲಾ ಜನಗಳು ಇದರಲ್ಲಿ ಭಾಗವಹಿಸುತ್ತಾರೆ.